ಕೊರೋನಾ ಹರಡುವಿಕೆಯಲ್ಲಿ ಯಶಸ್ವೀ ನಿಯಂತ್ರಣ; ಗುಣ ಹೊಂದಿದವರ ದರ ಶೇ. 80

0
609

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ.18: ಕೊರೊನಾ ಹರಡುವಿಕೆಯು ಶೇ. 40ರಷ್ಟು ಕಡಿಮೆಯಾಗಿದೆ. ರೋಗದಿಂದ ಶೇ. 80ರಷ್ಟು ಮಂದಿ ಗುಣಮುಖರಾಗಿದ್ದು ಶೇ. 20ರಷ್ಟು ಮಂದಿ ಮಾತ್ರ ಮರಣಕ್ಕೆ ತುತ್ತಾಗಿದ್ದಾರೆ ಎಂದು ಕೇಂದ್ರ ಸರಕಾರ ತಿಳಿಸಿದೆ. ವೈರಸ್ ಅನುಪಾತದ ದ್ವಿಗುಣ ದರ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ರೋಗ ಹರಡುವಿಕೆ ತಡೆಯುವುದರಲ್ಲಿ ಕೇರಳ ಸಾಧನೆ ಮಾಡಿದೆ. ಇದೇ ಮಾದರಿಯಲ್ಲಿ ದೇಶದ ಇತರ ಕಡೆಗಳಲ್ಲಿಯೂ ಕೊರೊನಾ ತಡೆಯುವ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರ ಆರೋಗ್ಯ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದ್ದಾರೆ.

ಕಳೆದ ಏಳು ವಾರಗಳ ಲೆಕ್ಕ ನೋಡಿದರೆ ಕೊರೊನಾ ದ್ವಿಗುಣಗೊಳ್ಳುವುದು ಕಡಿಮೆಯಾಗಿದೆ. ಕಳೆದ ಮೂರು ತಿಂಗಳಿಂದ ದೇಶದಲ್ಲಿ ಕೊರೊನಾ ಇದ್ದರೂ ಇದು ಹಠಾತ್ ಆಗಿ ವ್ಯಾಪಿಸಿಲ್ಲ. ಕೊರೊನಾಕ್ಕೆ ವ್ಯಾಕ್ಸಿನ್ ಕಂಡು ಹುಡುಕುವ ಕೆಲಸ ಆಗುತ್ತಿದೆ. ಮೇ ತಿಂಗಳಲ್ಲಿ 10 ಲಕ್ಷ ರಾಪಿಡ್ ಟೆಸ್ಟ್ ಕಿಟ್‍ಗಳನ್ನು ಉತ್ಪಾದಿಸುವ ಗುರಿ ಇರಿಸಿಕೊಳ್ಳಲಾಗಿದೆ. ವೈಯಕ್ತಿಕ ಸುರಕ್ಷಾ ಉಪಕರಣಗಳು, ವೆಂಟಿಲೇಟರ್ ಗಳು, ಇತರ ಜೀವರಕ್ಷಾ ಸಲಕರಣೆಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಯತ್ನ ಶ್ರೀ ಚಿತ್ರ ಇನ್‍ಸ್ಟಿಟ್ಯೂಟ್‍ನಲ್ಲಿ ಪ್ರಗತಿಯಲ್ಲಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.