ಅಮೆರಿಕನ್ ಭಾರತೀಯರ ದೇಶಪ್ರೇಮವನ್ನು ಪರೀಕ್ಷಿಸಿದ ಟ್ರಂಪ್

0
1151

ಸನ್ಮಾರ್ಗ ವಾರ್ತೆ

✍️ಏ ಕೆ ಕೆ

ಕಂಡವರ ಬುಡಕ್ಕೆ ಬೆಂಕಿ ಬಿದ್ದಾಗ ಸಂಭ್ರಮ, ತಮ್ಮದೇ ಬುಡಕ್ಕೆ ಬಂದು ಬಗ್ಗನೆ ಎದ್ದಾಗ ಲಬೋ ಲಬೋ.. ಎಂಬ ಮಾತೊಂದಿದೆ. ಈ ಮಾತನ್ನು ಅಮೆರಿಕಾದ ಅಧ್ಯಕ್ಷ ಟ್ರಂಪ್ ನಿಜ ಮಾಡುತ್ತಿದ್ದಾರೆ. ಅವರು ಇದೀಗ ತರಲು ಉದ್ದೇಶಿಸಿರುವ ಪೌರತ್ವ ಕಾಯ್ದೆಯು ಅಮೆರಿಕದಲ್ಲಿರುವ ಭಾರತೀಯರನ್ನ ದಂಗುಬಡಿಸಿದೆ.

ಅಮೆರಿಕದಲ್ಲಿ ಬರ್ತ್ ರೈಟ್ ಸಿಟಿಝನ್ ಶಿಪ್ ಎಂಬೊಂದು ಕಾನೂನಿದೆ. ಅಮೆರಿಕದಲ್ಲಿ ಹುಟ್ಟಿದ ಮಗುವಿಗೆ ಅಮೆರಿಕಾದ ಪೌರತ್ವ ಸಿಗುವ ಕಾನೂನು ಇದು. ಫೆಬ್ರವರಿ 20ರ ಬಳಿಕ ಈ ಕಾನೂನು ರದ್ದಾಗಲಿದೆ ಎಂದವರು ಘೋಷಿಸಿದ್ದಾರೆ. ಆದ್ದರಿಂದ ಅಮೆರಿಕದಲ್ಲಿರುವ ಭಾರತೀಯರು ಫೆಬ್ರವರಿ 20ರ ಮೊದಲೇ ಹೆರುವುದಕ್ಕಾಗಿ ಸಿಜೇರಿಯನ್ ಸೆಂಟರ್‌ ಗಳ ಮುಂದೆ ಕ್ಯೂ ನಿಂತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡ್ತಾ ಇದೆ. ಹೀಗೆ ನಿಂತವರಲ್ಲಿ ಆರು ತಿಂಗಳು ಏಳು ತಿಂಗಳು ತುಂಬಿದ ಗರ್ಭಿಣಿಯರೇ ಹೆಚ್ಚಿದ್ದಾರೆ.

ಈ ವರದಿಯನ್ನ ಮಾಡ್ತಾ ಇರುವುದು ಮೋದಿ ವಿರೋಧಿ ಮಾಧ್ಯಮಗಳಲ್ಲ. 24 ಗಂಟೆ ಪ್ರಧಾನಿ ಮೋದಿಯ ಗುಣಗಾನ ಮಾಡ್ತಾ ಇರುವ ಮಾಧ್ಯಮಗಳೇ ಈ ಸುದ್ದಿಯನ್ನು ಪ್ರಕಟಿಸ್ತಾ ಇವೆ. ವಿಶೇಷ ಏನೆಂದರೆ ಭಾರತದಲ್ಲಿ ಸಿಎಎ, ಏನ್ ಆರ್ ಸಿ ಪೌರತ್ವ ಕಾಯ್ದೆಯನ್ನು ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸಿದಾಗ ಅದನ್ನು ಚಪ್ಪಾಳೆ ತಟ್ಟಿ ಬೆಂಬಲಿಸಿದರಲ್ಲಿ ಅಮೆರಿಕಾದಲ್ಲಿರುವ ಭಾರತೀಯರೇ ಮುಂಚೂಣಿಯಲ್ಲಿದ್ರು. ಭಾರತೀಯ ಮುಸ್ಲಿಮರನ್ನು ಸತಾಯಿಸುವ ಕಾನೂನು ಎಂಬ ಖುಷಿಯ ಹೊರತಾಗಿ ಈ ಸಂಭ್ರಮಕ್ಕೆ ಬೇರೆ ಯಾವ ಕಾರಣವೂ ಇರಲಿಲ್ಲ.

ಮೋದಿ ಅಮೆರಿಕಕ್ಕೆ ಹೋದಾಗ ಹೌಡಿ ಮೋದಿ ಅನ್ನುವ ಕಾರ್ಯಕ್ರಮವನ್ನು ಟ್ರಂಪ್ ಏರ್ಪಡಿಸಿದ್ದರು. ಅದರಲ್ಲಿ ಐವತ್ತು ಸಾವಿರದಷ್ಟು ಭಾರತೀಯರು ಭಾಗವಹಿಸಿದ್ದರು. ಅವರಲ್ಲಿ ಹೆಚ್ಚಿನವರು ಇದೇ ಮೋದಿ ಬೆಂಬಲಿಗರು. ಈ ಬಾರಿ ಟ್ರಂಪ್ ಗೆಲುವಿನಲ್ಲಿ ಬಹಳ ದೊಡ್ಡ ಪಾತ್ರವಹಿಸಿದವರೂ ಇವರೇ. ಆದರೆ ಇದೀಗ ಟ್ರಂಪ್ ಇವರೆಲ್ಲರ ಆಸೆಗೆ ತಣ್ಣೀರೆರಚಿದ್ದಾರೆ.

ಭಾರತದ ಸಿಎಎ ಮತ್ತು ಎನ್ ಆರ್ಸಿ ಕಾಯ್ದೆಯನ್ನು ಬೆಂಬಲಿಸಿದ್ದ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಅದನ್ನು ಬೆಂಬಲಿಸಿ ಉದ್ದುದ್ದ ಬರಹಗಳನ್ನು ಬರಕೊಂಡಿದ್ದವರೆಲ್ಲ ಇದೀಗ ಈ ಕಾಯ್ದೆಯನ್ನು ವಿರೋಧಿಸುತ್ತಾ ಇದ್ದಾರೆ. ಫೆಬ್ರವರಿ 20ರ ನಂತರ ಹುಟ್ಟಿದ ಮಕ್ಕಳಗೆ ಅಮೆರಿಕದ ಪೌರತ್ವ ಸಿಗುವುದಿಲ್ಲ ಅನ್ನುವುದು ಖಾತರಿಯಾಗುತ್ತಲೇ ಫೆಬ್ರವರಿ 20 ಕ್ಕಿಂತ ಮೊದಲೇ ಸಿಸೇರಿಯನ್ ಮೂಲಕ ಮಗುವನ್ನು ಹೊಂದುವ ತುರ್ತಿನಲ್ಲಿದ್ದಾರೆ.

ದ್ವೇಷದ ಬೆಂಕಿ ಅಂತಿಮವಾಗಿ ದ್ವೇಷಿಸಿದವರನ್ನೇ ಸುಡುತ್ತೆ ಎಂದು ಹೇಳಲಾಗುತ್ತೆ. ಅದನ್ನೇ ನಾವೀಗ ನೋಡ್ತಾ ಇದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಸಿಎಎ ಎನ್ಆರ್ಸಿ ಕಾಯ್ದೆಯನ್ನು ತರಲು ಹೊರಟಾಗ ಸಂಭ್ರಮಿಸಿದವರಿಗೆ ನಿಜಕ್ಕೂ ಅದರ ಆಘಾತ ಏನು ಅನ್ನೋದನ್ನ ಟ್ರಂಪ್ ತೋರಿಸಿಕೊಟ್ಟಿದ್ದಾರೆ.

ನಿಜವಾಗಿ ಅಮೆರಿಕದಲ್ಲಿರುವ ಭಾರತೀಯರು ಟ್ರಂಪ್ ಕಾನೂನಿಗೆ ಭಯಪಡಬೇಕಾಗಿರಲಿಲ್ಲ. ಅಮೆರಿಕದಲ್ಲಿ ಕುಳಿತು ಭಾರತೀಯರಿಗೆ ದೇಶಭಕ್ತಿಯ ಪಾಠ ಮಾಡ್ತಾ ಇದ್ದ ಇವರೆಲ್ಲ ನೇರವಾಗಿ ಭಾರತಕ್ಕೆ ಹೊರಟು ಬರುವ ತೀರ್ಮಾನ ಕೈಗೊಳ್ಳಬೇಕಾಗಿತ್ತು. ನಮಗೆ ಅಮೆರಿಕಾದ ಪೌರತ್ವಕ್ಕಿಂತ ಭಾರತದಲ್ಲಿ ಸೇವೆ ಮಾಡುವುದೇ ಶ್ರೇಯಸ್ಕರ ಎಂದವರು ಹೇಳಬೇಕಿತ್ತು. ಆರು ತಿಂಗಳು, ಏಳು ತಿಂಗಳಲ್ಲಿಯೇ ಹೆರಿಗೆಗೆ ಸಿದ್ಧವಾಗುವುದಕ್ಕಿಂತ ಪೂರ್ತಿ 9 ತಿಂಗಳು ತುಂಬಿದ ಬಳಿಕ ಭಾರತದಲ್ಲಿ ಹೆರಿಗೆ ಮಾಡಿಸಿಕೊಂಡು ದೇಶ ಸೇವೆ ಮಾಡ್ತಾ ಬದುಕ್ತೀವಿ ಎಂದು ಘೋಷಿಸಬೇಕಿತ್ತು. ಆದರೆ ಇವರೆಲ್ಲರ ದೇಶಭಕ್ತಿಯ ಟೊಳ್ಳುತನವನ್ನು ಟ್ರಂಪ್ ಬಯಲಿಗೆಳೆದಿದ್ದಾರೆ. ಅವರ ಒಂದೇ ಒಂದು ಘೋಷಣೆ ಅಮೆರಿಕದಲ್ಲಿ ಕುಳಿತು ದೇಶಭಕ್ತಿಯನ್ನು ಪ್ರದರ್ಶಿಸುತ್ತಾ ಇದ್ದ ಭಾರತೀಯರ ಬಣ್ಣವನ್ನೆಲ್ಲ ಬಯಲಿಗೆಳೆದಿದೆ.

ನಿಜವಾಗಿ, ಅವರದ್ದು ದೇಶಭಕ್ತಿ ಆಗಿರಲಿಲ್ಲ. ಮುಸ್ಲಿಂ ದ್ವೇಷವನ್ನೇ ಅವರು ದೇಶಭಕ್ತಿಯ ಮುಖವಾಡದಲ್ಲಿ ಪ್ರದರ್ಶಿಸ್ತಾ ಇದ್ರು. ಆ ಕಾರಣದಿಂದಲೇ ಅವರು ಸಿಎ ಎ ಎನ್ಆರ್‌ಸಿಯನ್ನ ಬಿಜೆಪಿ ಪಕ್ಷಕ್ಕಿಂತಲೂ ಹೆಚ್ಚಾಗಿ ಬೆಂಬಲಿಸ ತೊಡಗಿದ್ರು. ಯಾರು ವಿರೋಧಿಸ್ತಾರೋ ಅವರನ್ನ ಸೋಶಿಯಲ್ ಮೀಡಿಯಾದಲ್ಲಿ ಹೀಯಾಳಿಸ ತೊಡಗಿದರು. ಭಾರತೀಯರಿಗೆ ದೇಶಭಕ್ತಿಯ ಪಾಠ ಹೇಳಿಕೊಡ ತೊಡಗಿದ್ರು. ಮಾತ್ರ ಅಲ್ಲ ಬಲಪಂಥೀಯ ವಿಚಾರಧಾರೆಯನ್ನು ಪ್ರತಿನಿಧಿಸುತ್ತಿದ್ದ ಟ್ರಂಪರ್ ರನ್ನ ಬೆಂಬಲಿಸಿದ್ರು. ನರೇಂದ್ರ ಮೋದಿ ಮತ್ತು ಟ್ರಂಪ್ ಬಹಳ ಆತ್ಮೀಯ ಗೆಳೆಯರು ಎಂದು ಹೋದಲ್ಲಿ ಬಂದಲ್ಲಿ ಸಾರತೊಡಗಿದರು.

ಆದರೆ ಬಲಪಂಥೀಯ ವಿಚಾರಧಾರೆ ಎಂದಿದ್ದರೂ ಅಪಾಯಕಾರಿ ಅನ್ನೋದನ್ನ ಇದೀಗ ಟ್ರಂಪ್ ತೋರಿಸಿಕೊಟ್ಟಿದ್ದಾರೆ. ಯಾವಾಗ ಸಿಎಎ ಎನ್ಆರ್ಸಿ ರೀತಿಯ ಪೌರತ್ವ ಕಾಯ್ದೆ ಅಮೆರಿಕದಲ್ಲೂ ಜಾರಿಯಾಗುತ್ತೆ ಎಂದು ಅವರಿಗೆ ಗೊತ್ತಾಯ್ತೋ ಅವರು ಭಾರತಕ್ಕೆ ಮರಳುವ ನಿರ್ಧಾರವನ್ನು ಮಾಡುವ ಬದಲು ತಮ್ಮ ಹೊಟ್ಟೆಯಲ್ಲಿ ಇರುವ ಮಗುವನ್ನು ಅವಧಿಗಿಂತ ಮೊದಲೇ ಸಿಜೇರಿಯನ್ ಮೂಲಕ ಹೊರಪಡೆದಾದರೂ ಅಮೆರಿಕದಲ್ಲೇ ಇರುತ್ತೇವೆ ಎಂದು ನಿರ್ಧಾರ ಮಾಡುತ್ತಿದ್ದಾರೆ. ಅಮೆರಿಕಾದ ಆಸ್ಪತ್ರೆಗಳ ತುಂಬಾ ಆರು ತಿಂಗಳು ಏಳು ತಿಂಗಳು ತುಂಬಿದ ಗರ್ಭಿಣಿಯರ ಸಾಲೇ ಇದೆ ಎಂದು ಮಾಧ್ಯಮಗಳು ವರದಿ ಮಾಡ್ತಾ ಇವೆ.

ಅಮೆರಿಕಾದ ಪೌರತ್ವಕ್ಕಾಗಿ ಸಿಜೇರಿಯನ್ ಮೂಲಕ ಮಗುವನ್ನು ಪಡೆಯಲು ಹಾತೊರೆಯುತ್ತಿರುವ ಇವರ ದೇಶಭಕ್ತಿಯನ್ನು ಕಾಲ ಟೆಸ್ಟ್ ಮಾಡಿದೆ. ಹೌದು, ಕಾಲ ಯಾರನ್ನೂ ಕಾಯುವುದಿಲ್ಲ. ದ್ವೇಷದ ಬೆಂಕಿ ಅಂತಿಮವಾಗಿ ದ್ವೇಷಿಸಿದವರನ್ನೇ ಸುಡುತ್ತೆ.