ತಮಿಳ್ನಾಡು: ಸೀರಿಯಲ್ ನಟನ ಹತ್ಯೆ

0
155

ಸನ್ಮಾರ್ಗ ವಾರ್ತೆ

ಚೆನ್ನೈ: ತಮಿಳ್ನಾಡಿನ ನಟ ಸೆಲ್ವರತ್ನಂ ಇರಿದು ಕೊಲೆ ಮಾಡಲಾಗಿದೆ. ರವಿವಾರ ಬೆಳಗ್ಗೆ ಎಂಜಿಆರ್ ನಗರದಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶನಿವಾರ ಸೆಲ್ವರತ್ನಂ ಶೂಟಿಂಗ್‍ಗೆ ಹೋಗಿರಲಿಲ್ಲ. ಅಸಿಸ್ಟೆಂಟ್ ಡೈರಕ್ಟರ್ ಆಗಿರುವ ಗೆಳೆಯನ ಜೊತೆಗಿದ್ದರು. ರವಿವಾರ ಬೆಳಗ್ಗೆ ಒಂದು ಕರೆ ಬಂದು ಅವರು ಹೊರಗೆ ಹೋಗಿದ್ದರು. ನಂತರ ಸೆಲ್ವಂ ಕೊಲೆಯಾದ ಸುದ್ದಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

41 ವರ್ಷದ ಸೆಲ್ವರತ್ನಂ ಶ್ರೀಲಂಕಾದಿಂದ ಮರಳಿದವರು. ಹತ್ತು ವರ್ಷದಿಂದ ನಟನಾ ರಂಗದಲ್ಲಿದ್ದರು. ಹಲವಾರು ಸೀರಿಯಲ್, ಟಿವಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಸಂಶಯಾಸ್ಪದವಾದ ಸಿಸಿಟಿವಿ ದೃಶ್ಯಗಳು ಲಭಿಸಿದೆಯೆಂದು ನಟನ ಫೋನ್ ಕರೆಗಳ ವಿವರಗಳನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.