‘ಬಿಜೆಪಿಯಿಂದ ಸುರಕ್ಷಿತರೇ?’| ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯಿಂದ ಡಿಜಿಟಲ್ ಅಭಿಯಾನ; ವ್ಯಾಪಕ ಬೆಂಬಲ

0
484

ಸನ್ಮಾರ್ಗ ವಾರ್ತೆ

ಕೊಲ್ಕತಾ,ನ.19: ಬಿಜೆಪಿಯಿಂದ ಸುರಕ್ಷಿತರೇ ಎಂದು ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್ ಅಭಿಯಾನ ಆರಂಭಿಸಿದ್ದು ಭಾರೀ ಪ್ರತಿಕ್ರಿಯೆ ದೊರಕಿದೆ. savebengalfrombjp.com(ಬಜೆಪಿಯಿಂದ ಬಂಗಾಳವನ್ನು ರಕ್ಷಿಸಿ) ವೆಬ್‍ಸೈಟ್ ಅನ್ನು ಇದುವರೆಗೆ ಹತ್ತು ಲಕ್ಷಕ್ಕೂ ಅಧಿಕ ಜನರು ಸಂದರ್ಶಿಸಿ ನಾವು ಸುರಕ್ಷಿತರೆಂದು ಹೇಳಿದ್ದಾರೆ.

2021ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಪ್ರಯತ್ನದಲ್ಲಿರುವ ವೇಳೆ ಪ್ರಶಾಂತ್ ಕಿಶೋರ್ ನೇತೃತ್ವದಲ್ಲಿ ಡಿಜಿಟಲ್ ಅಭಿಯಾನ್ ಆರಂಭವಾಗಿದೆ. ಪ.ಬಂಗಾಳವನ್ನು ಗುಜರಾತ್ ಆಗಿ ಬದಲಾಯಿಸಲಾಗುವುದು ಎಂದು ಬಿಜೆಪಿ ಪಶ್ಚಿಮ ಬಂಗಾಳ ಅಧ್ಯಕ್ಷರು ಕಳೆದ ದಿವಸ ಮುನ್ನೆಚ್ಚರಿಕೆ ನೀಡಿದ್ದರು.

ಟಿಎಂಸಿ ಅಭಿಯಾನದ ಅಂಗವಾಗಿ ಫೇಸ್‍ಬುಕ್ ಪುಟವನ್ನೂ ಆರಂಭಿಸಲಾಗಿದೆ. ಡಿಜಿಟಲ್ ಅಭಿಯಾನದ ಮೂಲಕ ಟಿಎಂಸಿ ಯುವಕರನ್ನು ಮುಖ್ಯವಾಗಿ ಗುರಿಯಾಗಿರಿಸಿದೆ.

ತಾವು ಕೋಮುವಾದ ರಾಜಕೀಯಕ್ಕೆ ವಿರುದ್ಧವೋ? ತಾವು ದ್ವೇಷಕ್ಕೆ ವಿರುದ್ಧವೋ, ಸರ್ವಾಧಿಕಾರಕ್ಕೆ ವಿರುದ್ಧವೋ? ತಮ್ಮ ಸ್ವಾತಂತ್ರ್ಯದ ಮೇಲೆ ಹಸ್ತಕ್ಷೇಪ ನಡೆಸುವುದರ ವಿರುದ್ಧ ಮಾತಾಡುವಿರಾ? ಎಂಬ ಪ್ರಶ್ನೆಗಳು ಬಂಗಾಳಿ ಭಾಷೆಯ ವೆಬ್‍ಸೈಟ್‍ನಲ್ಲಿದೆ.