ಶೋಪಿಯಾನ್‍ನಲ್ಲಿ ಘರ್ಷಣೆ: ಇಬ್ಬರು ಭಯೋತ್ಪಾದಕರ ಹತ್ಯೆ

0
319

ಸನ್ಮಾರ್ಗ ವಾರ್ತೆ

ಶೋಪಿಯಾನ್,ಅ.7: ಜಮ್ಮು-ಕಾಶ್ಮೀರದ ಶೋಪಿಯಾನ್‍ನಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಸುರಕ್ಷಾ ಸೇನೆಯು ಹತ್ಯೆಗೈದಿದೆ. ಶೋಪಿಯಾನ್ ಜಿಲ್ಲೆಯ ಸುಗನ್ ಸೇನಪೊರ ಪ್ರದೇಶದಲ್ಲಿ ಘರ್ಷಣೆ ನಡೆದಿದೆ. ಮಂಗಳವಾರ ರಾತ್ರೆ ಘರ್ಷಣೆ ಆರಂಭವಾಗಿತ್ತು. ಪ್ರದೇಶವನ್ನು ಸುತ್ತುವರಿದ ಸೇನೆ ಶೋಧ ನಡೆಸುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.