ಸನ್ಮಾರ್ಗ ವಾರ್ತೆ
ಶಾರ್ಜಾದ ಡಾ ವಸ್ನಾ ಮುಹಮ್ಮದ್ ಬರೆಯುತ್ತಾರೆ..
ದೊಡ್ಡ ಚೀಟಿಯೊಂದಿಗೆ ಆ ತಂದೆ ಮತ್ತು ನನ್ನನ್ನು ಭೇಟಿಯಾಗಲು ಬಂದರು. ಆಂಧ್ರದವರು. ತಂದೆಗೆ 65 ವರ್ಷ ದಾಟಿರಬಹುದು. ಹೃದ್ರೋಗಿ. ಬ್ಲಡ್ ಪ್ರೇಶರ್, ಶುಗರ್, ಕೊಲಸ್ಟ್ರಾಲ್ ಇದೆ. ಗಲ್ಫ್ ಗೆ ಬರುವಾಗಲೇ ಅವರು ಅಗತ್ಯದ ಮದ್ದನ್ನು ಊರಿನಿಂದಲೇ ತಂದಿದ್ದರು. ಆದರೆ ವಿಮಾನ ಸೇವೆ ರದ್ದಾದ್ದರಿಂದ ಊರಿಗೆ ಮರಳುವುದು ಅಸಾಧ್ಯವಾಯಿತು. ಇನ್ನೊಂದು ತಿಂಗಳಿಗೆ ಊರಿನ ಮದ್ದನ್ನೇ ಬರೆದುಕೊಡುವಂತೆ ಕೇಳಿಕೊಳ್ಳಲು ಅವರು ನನ್ನ ಹತ್ತಿರ ಬಂದಿದ್ದರು. ಅದನ್ನು ಬರೆದುಕೊಟ್ಟೆ. ಮೆಡಿಕಲ್ ಗೆ ಹೋದ ಬಳಿಕ ಪುನಃ ಅವರು ನನ್ನ ಬಳಿಗೆ ಬಂದರು. ಇವೆಲ್ಲ ತೆಗೆದುಕೊಳ್ಳಲೇ ಬೇಕೆ ಡಾಕ್ಟರ್ ಎಂದು ಮಗ ಕೇಳಿದ. ಮಗನ ದಯನೀಯ ಸ್ಥಿತಿ ನೋಡಿಯೋ ಏನೋ ತಂದೆ ಹೊರಗೆ ಹೋದರು. ಈ ಮದ್ದೆಲ್ಲ ಅತ್ಯಗತ್ಯದ್ದು ಎಂದು ಚೆನ್ನಾಗಿ ಆ ತಂದೆ ಮತ್ತು ಮಗ ಚೆನ್ನಾಗಿ ತಿಳಿದಿದ್ದರು. ಒಂದು ತಿಂಗಳಿನಿಂದ ಕೆಲಸ ಇಲ್ಲದೆ ಮಗ ಅಲೆದಾಡುತ್ತಿದ್ದಾನೆ. ಇದಕ್ಕಿಂತ ಹೆಚ್ಚು ಮಾಡಲು ಆಗುವುದಿಲ್ಲ. ಸಣ್ಣ ಸಂಬಳ ಇರುವ ಮಗನಿಗೆ ತಂದೆಗೆ ಒಮ್ಮೆ ಗಲ್ಫ್ ತೋರಿಸುವ ಆಶೆ ಇತ್ತು.
ರೋಗದ ವಿಷಯ ಗೊತ್ತಿದ್ದೂ ತಂದೆಯನ್ನು ತನ್ನ ಬಳಿಗೆ ಕರೆಸಿದ್ದ ಆ ಮಗ. ವಿಸಿಟಿಂಗ್ ವೀಸಾ ಸಮಯ ಮುಗಿಯುವ ಮೊದಲು ಊರಿಗೆ ಮರಳಿ ಕಳುಹಿಸುವ ಉದ್ದೇಶವಿತ್ತು. ಆದರೆ ಕೊರೊನಾ ಎಲ್ಲವನ್ನೂ ಮುಗಿಸಿಹಾಕಿತು. ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಮಗನಿಗೆ ಕೆಲಸ ಇಲ್ಲ. ಆಹಾರ ಖರೀದಿಸಲು ಕೂಡ ಕಷ್ಟವಿದೆ. ಹಣ ಇಲ್ಲ. ನೀವು ನಿಂತಲ್ಲೆ ನಿಲ್ಲಿರಿ (ಇದ್ದಲ್ಲೇ ಇರಿ) ಎಂದು ಹೇಳುವ ಊರಿನ ನಾಯಕರಿಗೆ ಏನು ಗೊತ್ತಿದೆ ಎಂದು ಆ ತಂದೆ ತನ್ನಲ್ಲೇ ಸ್ವಗತ ಹೇಳಿಕೊಳ್ಳುತ್ತಿದ್ದಾರೆ. ನಿಜವಾಗಿ, ಇವರೂ ಕೊರನಾದ (ನಿರ್ವಾಹವಿಲ್ಲದಂತಾದವರು) ಪೀಡಿತರೇ ಅಗಿದ್ದಾರೆ.
ಮೂರು ತಿಂಗಳ ವೀಸಾದ ಮೂಲಕ ಮತ್ತೊಬ್ಬ ಯುವಕ ತನ್ನ ಪತ್ನಿಯನ್ನು ಗಲ್ಫ್ ಗೆ ಕರೆತಂದ. ಆದರೆ ಸಂತೋಷಕ್ಕಿಂತ ಹೆಚ್ಚು ಅವರಿಬ್ಬರಲ್ಲಿ ಈಗ ಆತಂಕವಿದೆ. ಗರ್ಭಿಣಿಗೆ ಆರಂಭದಲ್ಲಿ ಅಗತ್ಯವಿರುವ ಪರೀಕ್ಷೆ, ಮದ್ದನ್ನು ಸರಿಯಾಗಿ ಕೊಡಿಸಲೂ ಅವನಿಂದ ಆಗುತ್ತಿಲ್ಲ. ಕೆಲಸ ಇಲ್ಲ. ಸಂಬಳ ಇಲ್ಲ. ಬಾಡಿಗೆ, ಆಹಾರದ ಖರ್ಚನ್ನೂ ಆತ ಭರಿಸಬೇಕಾಗಿದೆ.
ಕೆಲಸದ ಭಾಗವಾಗಿ ಬೇರೆ ದೇಶಕ್ಕೆ ಹೋದ ಪತಿಗೆ ಲಾಕ್ಡೌನ್ನಿಂದ ಮರಳಲು ಆಗಿಲ್ಲ. ಒಂಟಿಯಾದ ಪತ್ನಿ ಮೂರು ಸಣ್ಣ ಮಕ್ಕಳು ಇಲ್ಲಿದ್ದಾರೆ. ಅತಿ ಅಗತ್ಯದ ವಸ್ತು ಖರೀದಿಸಲಿಕ್ಕಾಗಿ ಮಕ್ಕಳನ್ನು ಪ್ಲಾಟ್ನಲ್ಲಿ ಕೂಡಿಹಾಕಿ ಹೊರಗೆ ಹೋಗುವ ಅವಸ್ಥೆ ಅಮ್ಮನಿಗೆ. ಇದೇವೇಳೆ ಒಂದು ಮಗುವಿಗೆ ಅಸೌಖ್ಯವಾದರೆ ಇದ್ದಬಿದ್ದ ಧೈರ್ಯ ಸೋರಿಹೋಯಿತು. ಒಂಟಿಯಾಗಿ ಬಿಟ್ಟವರು ಅನುಭವಿಸುವ ಮಾನಸಿಕ ಹೊಯ್ದಾಟವನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ.
ಇದರ ನಡುವೆಯೂ ಸೌಹಾರ್ದದ, ಪ್ರೀತಿಯ ದೃಶ್ಯಗಳನ್ನು ಕೂಡ ಕೊರನಾ ಕಾಲದಲ್ಲಿ ನಾವು ಕಾಣುತ್ತಿದ್ದೇವೆ. ವಿಶೇಷವಾಗಿ ಬ್ಯಾಚುಲರ್ ಕೋಣೆಗಳಲ್ಲಿ ವಾಸವಿರುವವರು. . ಜೊತೆಗಿರುವವರಿಗೆ ಕೊರೊನಾ ಇರಬಹುದೇ ಎಂದು ಶಂಕಿಸುತ್ತಲೇ ಅವನಿಗೆ ಬೇಕಿದ್ದೆಲ್ಲ ಸಹಾಯ ಸಹಕಾರಗಳನ್ನು ರೂಮ್ಮೇಟ್ ಮಾಡಿಕೊಡುತ್ತಾನೆ. ಕೊರೊನಾ ಪಾಸಿಟಿವ್ ಆಗಿರುವವರ ಸಹಾಯಕ್ಕಾಗಿ ಸಂಗಡಿಗರು ಜೊತೆ ಇದ್ದಾರೆ. ಪರಸ್ಪರ ದೂಷಿಸದೆ ಕ್ಷಮಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಗರಿಷ್ಠ ಎಚ್ಚರಿಕೆ ವಹಿಸಿ ಎಂದು ಅವರೊಂದಿಗೆ ಹೇಳಬೇಕಾಗಿದೆ. ಒಳ್ಳೆಯ ಮನಸಿರುವವರಿಗೆ ದೇವನ ರಕ್ಷೆ ಇರಲಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












