ಸರಕಾರವನ್ನು ಬುಡಮೇಲು ಗೊಳಿಸಲು ಬಿಜೆಪಿ ಯತ್ನಿಸುತ್ತಿದೆ: ಉದ್ಧವ್‍ರಿಂದ ಸಖ್ಯಪಕ್ಷಗಳ ಭೇಟಿ

0
587

ಸನ್ಮಾರ್ಗ ವಾರ್ತೆ

ಮುಂಬೈ,ಮೇ.27: ಮಹಾರಾಷ್ಟ್ರದಲ್ಲಿ ಸರಕಾರವನ್ನು ಉರುಳಿಸುವ ಬಿಜೆಪಿಯ ಯತ್ನ ನಡೆಯುತ್ತಿದ್ದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಖ್ಯ ಪಕ್ಷಗಳಾದ ಕಾಂಗ್ರೆಸ್, ಎನ್‍ಸಿಪಿಯನ್ನು ಬುಧವಾರ ಭೇಟಿಯಾಗಲಿದ್ದಾರೆ.

ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ಮುಂಬೈಯಲ್ಲಿ ಭೇಟಿ ನೀಡಿದ ಬೆನ್ನಿಗೆ ಮಿತ್ರಪಕ್ಷಗಳ ನಡುವೆ ಅಂತರವುಂಟಾಗಿದೆ. ಮಹಾರಾಷ್ಟ್ರದಲ್ಲಿ ಸರಕಾರವನ್ನು ಬೆಂಬಲಿಸುವ ಪಾತ್ರ ಮಾಡುವುದಾಗಿ ಹೇಳಿದ ನಂತರ ಚಟುವಟಿಕೆ ಗರಿಕೆದರಿದ್ದು ಮಹಾಅಘಾಡಿಯಲ್ಲಿ ಬಿರುಕು ಮೂಡಿದೆ ಎಂದು ವದಂತಿ ಹರಡಿವೆ. ಸರಕಾರವನ್ನು ಉರುಳಿಸುವ ಯತ್ನವನ್ನು ಬಿಜೆಪಿ ಆರಂಭಿಸಿದೆ ಎಂದು ಪವಾರ್ ಮುನ್ನೆಚ್ಚರಿಕೆಯನ್ನು ಕೂಡ ನೀಡಿದ್ದಾರೆ.

ಆದರೆ ಸದ್ಯ ಸರಕಾರಕ್ಕೆ ಬೆದರಿಕೆಯಿಲ್ಲ ಎಲ್ಲ ಶಾಸಕರು ತನ್ನ ಜೊತೆಗಿದ್ದಾರೆ. ಕೊರೋನ ಹರಡಿದ್ದನ್ನು ತಡೆಯಲು ಸರಕಾರ ವಿಫಲವಾಗಿದೆ ಎಂದು ಬಿಜೆಪಿ ಬುಡಮೇಲು ಯತ್ನಕ್ಕಿಳಿದಿದೆ. ರಾಷ್ಟ್ರಪತಿಗೆ ಅದು ಪತ್ರ ಬರೆದು ರಾಜ್ಯಪಾಲ ಆಡಳಿತ ಹೇರಲು ಆಗ್ರಹಿಸಿದೆ. ಈ ವಿಷಯದಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣ ರಾಣೆ ರಾಜ್ಯಪಾಲರನ್ನು ಭೇಟಿಯಾಗಿದ್ದರು.

ದೇಶದಲ್ಲಿ ಅತೀ ಹೆಚ್ಚು ಕೊರೋನಾ ಪೀಡಿತರು ಮಹಾರಾಷ್ಟ್ರದಲ್ಲಿ ಕಂಡು ಬಂದಿದ್ದಾರೆ. ಸರಕಾರದ ಕ್ರಮಗಳು ವಿಫಲವಾಗಿದೆ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಜೊತೆ ಸರಕಾರದ ಕ್ರಮಗಳಿಂದ ಯಾರಿಗೂ ತೃಪ್ತಿಯಿಲ್ಲದ ಪರಿಸ್ಥಿತಿಯೂ ಇದೆ.

ಕಳೆದ ವರ್ಷ ನಡೆದ ಚುನಾವಣೆಯ ಬೆನ್ನಿಗೆ ಶಿವಸೇನೆ ಬಿಜೆಪಿಯೊಂದಿಗೆ ಇದ್ದ ತನ್ನ 30 ವರ್ಷದ ಸಂಬಂಧವನ್ನು ಕಡಿದುಕೊಂಡಿತ್ತು. ಬಿಜೆಪಿಯನ್ನು ಸರಕಾರದಿಂದ ದೂರವಿರಿಸಲು ಕಾಂಗ್ರೆಸ್‍ ಜೊತೆ ಪವಾರ್ ಶಿವಸೇನೆಯನ್ನು ಬೆಂಬಲಿಸಿದ್ದರು. ಶಿವಸೇನೆಯ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ.