ದೊಂದಿ ದಾರಿದೀಪ ಹೋರಾಟಕ್ಕೆ ನಾಲ್ಕು ದಿನ

0
586

ಸನ್ಮಾರ್ಗ ವಾರ್ತೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದಾರಿದೀಪದ ಅವ್ಯವಸ್ಥೆಯನ್ನು ಖಂಡಿಸಿ ಆರಂಭಿಸಿರುವ ಪ್ರತಿಭಟನೆಗೆ ನಾಲ್ಕು ದಿನಗಳು ಸಂದಿದ್ದು, ನೂರು ದೊಂದಿಗಳನ್ನು ಉರಿಸಿ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಧಿಕ್ಕಾರ ಕೂಗಲಾಯಿತು. ನಾಳೆಯ ದಿನ ಅವ್ಯವಸ್ಥೆ ಸರಿಯಾಗಿದ್ದಲ್ಲಿ ಸಂಘಟನೆಯ ನೂರು ಕಾರ್ಯಕರ್ತರೊಂದಿಗೆ ದೊಂದಿಗಳನ್ನು ಹೊತ್ತಿಸಿ ಕರಾವಳಿ ಬೈಪಾಸ್ ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆಯನ್ನು ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮದ್ ರವರು ತಿಳಿಸಿರುತ್ತಾರೆ.

ಪ್ರತಿಭಟನೆಯಲ್ಲಿ ಉಡುಪಿ ತಾಲೂಕು ಅಧ್ಯಕ್ಷರಾದ ಸುಧೀರ್ ಪೂಜಾರಿ, ಮುತ್ತಾಕ್ ಅಲಿ, ರಿತೇಶ್, ಶಾಹಿಲ್ ರಹಮತುಲ್ಲಾ, ರಾಹುಲ್ ಪಿಂಟೋ, ಸುಹೇಲ್ ಉದ್ಯಾವರ, ಮನೋಜ್, ಧನಂಜಯ್ ಪುತ್ತೂರು, ಮಂಜು ಸೇರಿದಂತೆ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.