ಭ್ರಷ್ಟಾಚಾರ ಮಾಡುವುದಿಲ್ಲ, ಪಕ್ಷಾಂತರಿಸುವುದಿಲ್ಲ: ಅಫಿದಾವಿತ್‍ಗೆ ಸಹಿ ಹಾಕಿದ ಗೋವಾದ ಆಮ್ ಆದ್ಮಿ ಅಭ್ಯರ್ಥಿಗಳು

0
345

ಸನ್ಮಾರ್ಗ ವಾರ್ತೆ

ಪಣಜಿ: ಭ್ರಷ್ಟಾಚಾರ ಮಾಡುವುದಿಲ್ಲ, ಪಕ್ಷಾಂತರಿಸುವುದಿಲ್ಲ ಎಂದು ಆಮ್ ಆದ್ಮಿ ಅಭ್ಯರ್ಥಿಗಳು ಅಫಿದಾವಿತ್‍ಗೆ ಸಹಿ ಹಾಕಿದ್ದಾರೆ. ಗೋವಾ ರಾಜಕೀಯದಲ್ಲಿ ಕಪ್ಪು ಚುಕ್ಕೆಯಾದ ಪಕ್ಷಾಂತರ ಅಫಿದಾವಿತ್‍ನಿಂದ ತಡೆಯಬಹುದೆಂದು ಆಮ್ ಆದ್ಮಿ ಪಾರ್ಟಿಯ ನಿರೀಕ್ಷೆಯಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು. 40 ಅಭ್ಯರ್ಥಿಗಳೂ ಅವರ ಅಫಿದಾವಿತ್ ಸಹಿತ ಪತ್ರಿಕಾಗೋಷ್ಠಿಗೆ ಬಂದಿದ್ದರು.

ಅಫಿದಾವಿತ್ ಉಲ್ಲಂಘನೆಯು ಕಾನೂನು ಪ್ರಕಾರ ವಿಶ್ವಾಸ ವಂಚನೆಯಾಗಲಿದ್ದು ಆದುದ್ದರಿಂದ ಅದನ್ನು ಅಭ್ಯರ್ಥಿಗಳು ಪಾಲಿಸಬೇಕಾಗಿದೆ. ಅಭ್ಯರ್ಥಿಗಳು ಅಫಿದಾವಿತ್ ಪ್ರತಿಯನ್ನು ಮತದಾರರಿಗೆ ನೀಡಲಿದ್ದಾರೆ. ಗೋವಾದಲ್ಲಿ ಪ್ರಮಾಣಿಕವಾಗಿ ಸರಕಾರ ರಚಿಸುವ ಶ್ರಮ ತಮ್ಮದೆಂದು ಕೇಜ್ರಿವಾಲ್ ಹೇಳಿದರು. ನಾಲ್ಕು ದಿನದ ಸಂದರ್ಶನದಲ್ಲಿ ಕೇಜ್ರಿವಾಲ್ ಗೋವಾಕ್ಕೆ ಬಂದಿದ್ದಾರೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಒಂದು ಸೀಟನ್ನು ಗಳಿಸಲು ಎಎಪಿಗೆ ಆಗಿಲ್ಲ. ಗೋವಾದಲ್ಲಿ 40 ವಿಧಾನಸಭಾ ಸೀಟುಗಳಿದ್ದು ಫೆಬ್ರುವರಿ 14ರಂದು ಚುನಾವಣೆ ನಡೆಯಲಿದೆ. ಮಾರ್ಚ್ ಹತ್ತಕ್ಕೆ ಫಲಿತಾಂಶ ಪ್ರಕಟವಾಗಲಿದೆ.