ಫ್ಲವರ್ ಆಫ್ ಪ್ಯಾರಡೈಸ್ ಶಾಲೆಯ ಅಧ್ಯಕ್ಷರಾದ ಎಫ್.ಎಂ ಅಬ್ದುಲ್ ರಝಾಕ್ ನಿಧನ

0
219

ಸನ್ಮಾರ್ಗ ವಾರ್ತೆ

ಮಲ್ಪೆ: ಸಯ್ಯದಿನಾ ಅಬೂಬಕರ್ ಸಿದ್ದೀಕ್ ಜಾಮಿಯಾ ಮಸೀದಿ ಮಲ್ಪೆ ಮಾಜಿ ಅಧ್ಯಕ್ಷರು ಹಾಗೂ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ ಮಲ್ಪೆ ಅಧ್ಯಕ್ಷರಾದ ಎಫ್.ಎಂ. ಅಬ್ದುಲ್ ರಜಾಕ್ ಸಾಹಿಬ್’ರವರು ಅಲ್ಪಕಾಲದ ಅನಾರೋಗ್ಯದ ನಂತರ ಇಹಲೋಕ ತ್ಯಜಿಸಿದರು. ಇವರು ಜಮಾಅತೆ ಇಸ್ಲಾಮೀ ಹಿಂದ್‌ನ ಸದಸ್ಯರೂ ಆಗಿದ್ದರು. 84ವರ್ಷ ಪ್ರಾಯದವರಾಗಿದ್ದರೂ ಶಾಲೆಯ ಎಲ್ಲಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ ಇವರು ಶಾಲೆಯ ಎಲ್ಲಾ ಸಿಬ್ಬಂದಿಯವರ ಬಗ್ಗೆ ಕಾಳಜಿ ವಹಿಸುವ(ಸುಖ ದುಃಖಗಳಲ್ಲಿ ಭಾಗಿಯಾಗುವ)ಸ್ವಭಾವದವರಾಗಿದ್ದರು, ಇವರ ಜೀವನದ ಸಕ್ರಿಯತೆಯ ಮೂಲಕ ಸದಾ ಸ್ಫೂರ್ತಿಯಾಗಿದ್ದರು. ಮೃತರ ಕುಟುಂಬಕ್ಕೆ ಅವರ ಅಗಲಿಕೆಯ ನೋವಲ್ಲಿ ಸಹನೆಯನ್ನು ದಯಪಾಲಿಸಲಿ ಎಂದು ಹಿತೈಷಿಗಳು ತಿಳಿಸಿದ್ದಾರೆ.