ಸನ್ಮಾರ್ಗ ವಾರ್ತೆ
ಲಂಡನ್, ಎ. 18: ಸುರಕ್ಷಾ ಉಪಕರಣಗಳಿಲ್ಲದೆ ಕೊರೊನಾ ಪೀಡಿತರನ್ನು ಚಿಕಿತ್ಸೆಗೊಳಪಡಿಸಲು ಆರೋಗ್ಯ ಕಾರ್ಯಕರ್ತರಿಗೆ ಆದೇಶ ನೀಡಲಾಗಿದೆ. ಅವಶ್ಯಕ ಸುರಕ್ಷಾ ಸಲಕರಣೆಗಳಿಗೆ ಇಂಗ್ಲೆಂಡಿನಲ್ಲಿ ಕೊರತೆಯಾಗಿದೆ. ಇದಿಲ್ಲದೆಯೇ ರೋಗಿಗಳನ್ನು ಉಪಚರಿಸಬೇಕಾದ ಪರಿಸ್ಥಿತಿಯಿದೆ. ರೋಗಿಗಳನ್ನು ಉಪಚರಿಸುವಾಗ ಇಡೀ ದೇಹಕ್ಕೆ ಸಂರಕ್ಷಣಾ ಉಡುಪು ಧರಿಸಬೇಕಾಗಿಲ್ಲ ಎಂದು ಆರೋಗ್ಯ ಇಲಾಖೆ ಆದೇಶ ನೀಡಿರುವುದು ವರದಿಯಾಗಿದೆ.
ಇಂಗ್ಲೆಂಡಿನ ಆಸ್ಪತ್ರೆಗಳಲ್ಲಿ ವಿತರಣೆಯಾದ ವೈದ್ಯಕೀಯ ವಸ್ತುಗಳು ಒಂದು ಗಂಟೆಯೊಳಗೆ ಮುಗಿಯುತ್ತಿವೆ. ಹೀಗಾಗಿ ಸಾರ್ವಜನಿಕರ ಆರೋಗ್ಯ ಕುರಿತು ಮಾರ್ಗಸೂಚಿಯಲ್ಲಿ ಬದಲಾವಣೆ ತರಲಾಗಿದೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ನೀರು ಹೀರದ ಇಡೀ ಉದ್ದದ ಸರ್ಜಿಕಲ್ ಗೌನ್ಗಳನ್ನು ಉಟ್ಟುಕೊಂಡು ರೋಗಿಗಳನ್ನು ಉಪಚರಿಸಬಹುದು ಎಂದು ಸೂಚನೆ ನೀಡಲಾಗಿದೆ. ಸುರಕ್ಷಾ ವಸ್ತ್ರಗಳು ಮುಗಿದರೆ ಪ್ಲಾಸ್ಟಿಕ್ ಎಪ್ರನ್ ಉಪಯೋಗಿಸಲು, ಉದ್ದದ ಪ್ಲಾಸ್ಟಿಕ್ ಕೋಟ್ ಧರಿಸಲು ಮತ್ತು ಬೇರೆ ಆಸ್ಪತ್ರೆಗಳಿಂದ ಸುರಕ್ಷ ಕವಚಗಳನ್ನು ಸಾಲ ತರಲು ಸರಕಾರ ಸೂಚಿಸಿದೆ. ಒಮ್ಮೆ ಉಪಯೋಗಿಸಿದ್ದನ್ನು ಅಣುಮುಕ್ತಗೊಳಿಸಿ ಇನ್ನೊಮ್ಮೆ ಧರಿಸಲು ತಿಳಿಸಲಾಗಿದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












