ಸನ್ಮಾರ್ಗ ವಾರ್ತೆ
ಲಂಡನ್ : ನಿಕ್ ಜೇಮ್ಸ್ ಎಂಬವರು ಆನ್‍ಲೈನಿನಲ್ಲಿ ಒಂದು ಚೀಲ ಆ್ಯಪಲ್‍ಗೆ ಆರ್ಡರ್ ಮಾಡಿದ್ದರು. ಆದರೆ ಆರ್ಡರ್ ಮಾಡಿದ ವಸ್ತು ಮನೆಗೆ ಬಂದಾಗ ಆ ಐವತ್ತು ವರ್ಷದ ವ್ಯಕ್ತಿಗೆ ಆಶ್ಚರ್ಯ ಕಾದಿತ್ತು.
ಯಾಕೆಂದರೆ ಆ್ಯಪಲ್‍ಗೆ ಆರ್ಡರ್ ಮಾಡಿದ ಅವರಿಗೆ ಅದರೊಂದಿಗೆ ಒಂದು ಆ್ಯಪಲ್ ಐ-ಫೋನ್ ಎಸ್‍ಇ ಕೂಡಾ ಲಭಿಸಿತ್ತು.
ಆದರೆ ಏನಾಯಿತು ಎಂದು ಆಶ್ಚರ್ಯಗೊಂಡ ನಿಕ್‍ರಿಗೆ ಕಂಪೆನಿ ಅಧಿಕಾರಿಗಳ ಸ್ಪಷ್ಟೀಕರಣವೂ ಬಂದಿತ್ತು.
ನಿಮಗೆ ಆ್ಯಪಲ್ ಬದಲಿಗೆ ಆ್ಯಪಲ್ ಐ-ಫೋನ್ ಎಸ್ ಇ ನಾವು ಕಣ್ತಪ್ಪಿನಿಂದ ಕೊಟ್ಟದ್ದಲ್ಲ. ಆನ್‍ಲೈನ್ ಆಫರ್ ನ ಯೋಜನೆಯ ಭಾಗವಾಗಿ ನಿಮೆ ಐಫೋನ್ ಉಚಿತವಾಗಿ ಕೊಟ್ಟದ್ದು ಎಂದು ಸ್ಪಷ್ಟೀಕರಣ ನೀಡಿದರು.
ಇಂಗ್ಲೆಂಡಿನಲ್ಲಿ ಸೂಪರ್ ಮಾರ್ಕೆಟ್ ನ ಗ್ರೂಪ್ ಆಗಿರುವ ಟೆಸ್ಕೊ ಕಂಪನಿಯು ವಸ್ತುಗಳು ಆರ್ಡರ್ ನೀಡಿದಾಗ ಕೊಡುಗೆಯಾಗಿ ಐಫೋನ್ ನೀಡಿತ್ತು.
ಟೆಸ್ಕೊ ಗೆ ಕೃತಜ್ಞತೆ. ಕಳೆದ ದಿವಸ ಆರ್ಡರ್ ಮಾಡಿದ ವಸ್ತುಗಳು ತಲುಪುವಾಗ ಅದರಲ್ಲಿ ಬಹುದೊಡ್ಡ ಅಚ್ಚರಿಯೂ ಇತ್ತು. ಒಂದು ಏಪಲ್ ಐಫೋನ್ ಎಸ್‍ಇ. ಆ್ಯಪಲ್‍ಗೆ ಆರ್ಡರ್ ಮಾಡಿದ್ದೆ. ಜೊತೆಗೆ ಆ್ಯಪಲ್ ಐಫೋನ್ ಸಿಕ್ಕಿತ್ತು. ಏನಿದ್ದರೂ ನನ್ನ ಮಕ್ಕಳಿಗೆ ತುಂಬಾ ಸಂತೋಷವಾಯಿತು ಎಂದು ಗ್ರಾಹಕ ನಿಕ್ ಟ್ವೀಟ್ ಮಾಡಿದರು.
ಬಿಸಿನೆಸ್ ಪ್ರೊಮೇಶನ್ ನ ಭಾಗವಾಗಿ ಟೆಸ್ಕೊ ಇಂತಹ ಬಹುಮಾನಗಳನ್ನು ಗ್ರಾಹಕರಿಗೆ ಇರಿಸುತ್ತದೆ.












