JIHನಿಂದ ನ್ಯಾಷನಲ್ ಫೆಡರೇಷನ್ ಆಫ್ ಯೂತ್ ಮೂವ್ಮೆಂಟ್(NFYM) ಸ್ಥಾಪನೆ

0
19

ಅಧ್ಯಕ್ಷರಾಗಿ ಸುಹೈಬ್ ಸಿ.ಟಿ‌, ಕಾರ್ಯದರ್ಶಿಯಾಗಿ ಉಮರ್ ಖಾನ್‌ ಆಯ್ಕೆ

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶಾದ್ಯಂತ ಯುವ ವಿಭಾಗಕ್ಕೆ ವೇದಿಕೆ ಕಲ್ಪಿಸಲು ಜಮಾಅತೆ ಇಸ್ಲಾಮೀ ಹಿಂದ್, ನ್ಯಾಷನಲ್ ಫೆಡರೇಷನ್ ಆಫ್ ಯೂತ್ ಮೂವ್ಮೆಂಟ್(NFYM) ಎಂಬ ನೂತನ ಘಟಕವನ್ನು ಸ್ಥಾಪಿಸಿದೆ. ಜೆಐಹೆಚ್ ರಾಷ್ಟ್ರಾಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿಯವರ ಉಪಸ್ಥಿತಿಯಲ್ಲಿ ಕೇರಳದ ಸುಹೈಬ್ ಸಿ.ಟಿ‌ ಯವರನ್ನು NFYMನ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿ ಹಾಗೂ ಮಹಾರಾಷ್ಟ್ರದ ಮುಹಮ್ಮದ್ ಉಮರ್ ಖಾನ್‌ರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

ಪ್ರಸ್ತುತ ಸುಹೈಬ್ ಸಿಟಿಯವರು ಕೇರಳ ಸಾಲಿಡಾರಿಟಿ ಯೂತ್‌ ಮೂವ್ಮೆಂಟ್‌ನ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಉಮರ್ ಖಾನ್‌ ರವರು ಮಹಾರಾಷ್ಟ್ರ ಯೂತ್‌ ವಿಂಗ್‌ನ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

NFYM ಮುಖ್ಯವಾಗಿ ಮೂರು ರಂಗಗಳಲ್ಲಿ ಯುವಕರಿಗೆ ಅನುಕೂಲಕರವಾಗಲಿದ್ದು, ಸ್ಥಿತಿ-ಗತಿಗಳ ಬಗ್ಗೆ ಪರಸ್ಪರ ರಾಜ್ಯಗಳೊಂದಿಗೆ ಸಮಾಲೋಚನೆ, ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ನಿಲುವು ತೆಗೆದುಕೊಳ್ಳುವುದು ಮತ್ತು ಯುವಜನರನ್ನು ಮುನ್ನಡೆಸುವುದು ಹಾಗೂ ವಿವಿಧ ವೇದಿಕೆಗಳಲ್ಲಿ ಯುವ ನಾಯಕತ್ವವನ್ನು NFYM ಪ್ರತಿನಿಧಿಸಲಿದೆ.

JIH ರಾಜ್ಯ ಘಟಕಗಳ ಅಡಿಯಲ್ಲಿ ನೇರವಾಗಿ ಕಾರ್ಯನಿರ್ವಹಿಸುತ್ತಿರುವ ಯುವ ಘಟಕಗಳು ತಮ್ಮದೇ ಆದ ರಾಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಹೊಂದಿವೆ. ಎಲ್ಲಾ ರಾಜ್ಯದ ವಿಭಾಗಗಳು ರಾಷ್ಟ್ರೀಯ ಫೆಡರಲ್ ಮಂಡಳಿ, ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ಹೊಂದಿದ್ದು, ಹೊಸದಾಗಿ ರೂಪುಗೊಂಡ ಒಕ್ಕೂಟವು ಜೆಐಹೆಚ್‌ನ ಇತರ ಘಟಕಗಳಂತೆ ಎರಡು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿದೆ ಎಂಬುದಾಗಿ ವರದಿಯಾಗಿದೆ.

LEAVE A REPLY

Please enter your comment!
Please enter your name here