ಉತ್ತರ ಪ್ರದೇಶದಲ್ಲಿ ಹೆಚ್ಚಿದ ಅಪರಾಧ ಕೃತ್ಯ: ವೈದ್ಯೆಯ ಕೊರಳು ಕತ್ತರಿಸಿ ಕೊಲೆ

0
1067

ಸನ್ಮಾರ್ಗ ವಾರ್ತೆ

ಆಗ್ರ,ನ.21: ಉತ್ತರ ಪ್ರದೇಶದಲ್ಲಿ ಕೇಬಲ್ ಟಿವಿ ಟೆಕ್ನಿಷಿಯನ್ ಎಂದು ಪರಿಚಯಿಸಿಕೊಂಡು ಮನೆಗೆ ನುಗ್ಗಿದ ವ್ಯಕ್ತಿ ದಂತ ವೈದ್ಯೆಯ ಕೊರಳು ಕತ್ತರಿಸಿ ಕೊಲೆ ಮಾಡಿದ್ದು 38 ವರ್ಷ ವಯಸ್ಸಿನ ನಿಷಾ ಸಿಂಘಾಲ್ ಕೊಲೆಯಾದ ವೈದ್ಯೆಯಾಗಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇಬಲ್ ಟಿವಿ ಟೆಕ್ನಿಷಿಯನ್ ಎಂದು ಪರಿಚಯಿಸಿಕೊಂಡು ಮನೆಯೊಳಗೆ ಬಂದ ದುಷ್ಕರ್ಮಿ ನಿಶಾರ ಕೊರಳನ್ನು ಕತ್ತರಿಸಿದ್ದಾನೆ. ವೈದ್ಯೆ ಕೊಲೆಯಾಗುವಾಗ ಅವರ ನಾಲ್ಕು ಮತ್ತು ಎಂಟು ವರ್ಷದ ಇಬ್ಬರು ಮಕ್ಕಳು ಕೋಣೆಯಲ್ಲಿದ್ದರು. ಮಕ್ಕಳ ಮೇಲೆ ಹಲ್ಲೆ ಮಾಡಲೂ ದುಷ್ಕರ್ಮಿ ಯತ್ನಿಸಿದ್ದಾನೆ.

ನಿಷಾರ ಪತಿ ಅಜಯ್ ಸಿಂಗಾಲ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಹೋದ ಸಮಯದಲ್ಲಿ ದುಷ್ಕೃತ್ಯ ನಡೆದಿದೆ. ನಿಷಾರ ಕೊಲೆ ಮಾಡಿದ ಬಳಿ ಒಂದು ಗಂಟೆಕಾಲ ಆರೋಪಿ ಆ ಮನೆಯಲ್ಲಿಯೇ ಇದ್ದ. ಆರೋಪಿ ಮನೆಯಲ್ಲಿ ಕಳ್ಳತನ ನಡೆಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದರು. ಆರೋಪಿಯ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಸಿಕ್ಕಿತ್ತು.

ಇದೇ ವೇಳೆ ಪ್ರತಿಪಕ್ಷ ಉತ್ತರ ಪ್ರದೇಶದಲ್ಲಿ ಕೊಲೆ, ಅಪರಾಧಗಳು ಹೆಚ್ಚುತ್ತಿರುವುದನ್ನು ಬೆಟ್ಟು ಮಾಡಿ ಪ್ರತಿಭಟನೆ ವ್ಯಕ್ತಪಡಿಸಿವೆ.