ಬದಾಯೂಂ, ಜೂ. 25: ಉತ್ತರಪ್ರದೇಶ ಬದಾಯೂ ಜಿಲ್ಲೆಯಲ್ಲಿ ವಾಹನ ತಪಾಸಣೆಯನ್ನು ಬಂದೂಕು ತೋರಿಸಿ ಪೊಲೀಸರು ನಡೆಸುತ್ತಿದ್ದಾರೆ. ಸಾಮಾನ್ಯ ಜನರಿಗೂ ಬಂದೂಕು ತೋರಿಸಿ ಕಟ್ಟುನಿಟ್ಟಿನ ತಪಾಸಣೆಯಲ್ಲಿ ತೊಡಗಿದ್ದಾರೆ. ತಪಾಸಣೆಗೆ ವಾಹನ ನಿಲ್ಲಿಸಿ ಹಠಾತ್ತಾಗಿ ಬಂದೂಕು ಎತ್ತಿದಾಗ ಜನರು ಹೆದರಿದ್ದಾರೆ. ಘಟನೆ ವೀಡಿಯೊ ವೈರಲ್ ಆಗಿದ್ದು ಬಂದೂಕು ತೋರಿಸಿ ಅಧಿಕಾರಿಯೊಬ್ಬರು ಹೆಲ್ಮೆಟ್ ಯಾರು ಧರಿಸುವುದು ಎಂದು ಕೇಳುತ್ತಿರುವುದು ವೀಡಿಯೊದಲ್ಲಿದೆ.
Police point gun at people during regular vehicle checking in Wazirganj, Badaun. (20.6.19) pic.twitter.com/N02fSAYwsx
— ANI UP (@ANINewsUP) June 24, 2019
ಬದಾಯೂನ್ನ ವಜೀರ ಗಂಜ್ ಪೊಲೀಸರು ವಾಹನ ತಪಾಸಣೆಯ ವೇಳೆ ಬಂದೂಕು ಗುರಿಯಿಟ್ಟು ಭಯೋತ್ಪಾದಕರನ್ನು ಸೆರೆಹಿಡಿಯುವಂತೆ ಮಾಡಿದ್ದು ವ್ಯಾಪಕ ಟೀಕೆಗೆ ಒಳಗಾಗಿದೆ. ದ್ವಿಚಕ್ರವಾಹನ ಸವಾರರ ಕೈ ಮೇಲೆತ್ತುವಂತೆ ಹೇಳಿ ಬಂದೂಕು ಗುರಿಯಾಗಿಟ್ಟು ದೇಹ ತಪಾಸಣೆ ನಡೆಸುತ್ತಿರುವುದು ವೀಡಿಯೊದಲ್ಲಿದೆ. ಹಾಥ್ ಊಪರ್ ಕರೊ ವರ್ನಾ ಗೋಲಿ ಹಾಥ್ ಮೇ ಲಗ್ಜಾಯೆಗಿ ಎಂದು ಪೊಲೀಸರು ಬೈಕ್ ಸವಾರರನ್ನು ಹೆದರಿಸುತ್ತಿದ್ದಾರೆ.












