ಸನ್ಮಾರ್ಗ ವಾರ್ತೆ
ಲಕ್ನೊ, ಫೆ. 18: ಹೆಲ್ಮೆಟ್ ಧರಿಸದ್ದಕ್ಕಾಗಿ 500 ರೂಪಾಯಿ ದಂಡ ತೆರಬೇಕಾದ ಅನಿವಾರ್ಯತೆ ಪ್ರಶಾಂತ್ ತಿವಾರಿ ಎಂಬವರ ಮುಂದೆ ನಿಂತಿದೆ. ಅವರು ಚಲಾಯಿಸಿದ್ದು ಬೊಲೊರೊ ಕಾರು. ಆದರೆ ದ್ವಿಚಕ್ರ ಚಾಲಕರ ಮೇಲೆ ವಿಧಿಸಲಾಗುವ ಹೆಲ್ಮೆಟ್ ದಂಡವನ್ನು ಉತ್ತರ ಪ್ರದೇಶ ಪೊಲೀಸರು ಅವರ ಮೇಲೆ ಹೇರಿದ್ದಾರೆ. ಟ್ರಾಫಿಕ್ ಪೊಲೀಸರ ಇ- ಚಲನ್ ಕಂಡು ಅವರೇ ಗರಬಡಿದು ಹೋಗಿದ್ದಾರೆ. ಟ್ರಾಫಿಕ್ ಉಲ್ಲಂಘನೆಗೆ ಪೊಲೀಸರು ದಂಡ ವಿಧಿಸುವುದಕ್ಕೆ ಇ-ಚಲನ್ ಜಾರಿಗೆ ಬಂದಿದೆ. ಕಳೆದವರ್ಷ ಅವರು ಮಹೀಂದ್ರ ಬೊಲೊರೊ ಚಲಾಯಿಸಿದಾಗ ಹೆಲ್ಮೆಟ್ ಧರಿಸಿಲ್ಲ ಇದು. ಅವರ ಅಪರಾಧವಾಗಿದೆ.
ಉತ್ತರಪ್ರದೇಶ ಪೊಲೀಸರಿಂದ ಇಂತಹ ಹಲವಾರು ಘಟನೆಗಳು ಆಗಿವೆ. ಆಗಸ್ಟ್ ನಲ್ಲಿ ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂದು ಪಿಯೂಶ್ ವರ್ಶಿನಿ ಎಂಬವರಿಗೆ ಐನೂರು ದಂಡ ವಿಧಿಸಲಾಗಿತ್ತು. ಇದನ್ನು ಪ್ರತಿಭಟಿಸಿ ಅವರು ಹೆಲ್ಮೆಟ್ ಧರಿಸಿ ಕಾರು ಚಲಾಯಿಸಿದ್ದರು. ಟ್ರಾಕ್ಟರ್ ಚಲಾಯಿಸಿದ ವ್ಯಕ್ತಿಗೆ ಹೆಲ್ಮೆಟ್ ಇಟ್ಟಿಲ್ಲ ಎಂದು ಟ್ರಾಫಿಕ್ ಪೊಲೀಸರು 3000 ರೂಪಾಯಿ ದಂಡ ವಿಧಿಸಿದ್ದರು. ವಾಹನ ತಿದ್ದುಪಡಿ ಕಾನೂನು ಜಾರಿಯಾದ ಮೇಲೆ ಉತ್ತರ ಪ್ರದೇಶ ಪೊಲೀಸರಿಂದ ಇಂತಹ ಹಲವು ದಂಡ ಪ್ರಕರಣಗಳು ಬೆಳಕಿಗೆ ಬಂದಿವೆ.












