ಸನ್ಮಾರ್ಗ ವಾರ್ತೆ
ಅಹ್ಮದಾಬಾದ್, ಫೆ. 18: ಶಿಕ್ಷಣ ಮತ್ತು ಸಂಪತ್ತು ವಿವಾಹ ವಿಚ್ಛೇದನಕ್ಕೆ ಕಾರಣವಾಗುತ್ತಿದೆ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ರ ಹೇಳಿಕೆ ವಿವಾದವಾಗಿದೆ.
ಬಾಲಿವುಡ್ ನಟಿ ಸೋನಂ ಕಪೂರ್ ಅವರು, ಸ್ವಪ್ರಜ್ಞೆಯಿರುವವರು ಹೀಗೆ ಮಾತಾಡಿಯಾರೇ? ಮೂರ್ಖ ಹೇಳಿಕೆ ಎಂದು ಟ್ವೀಟ್ ಮಾಡಿದ್ದಾರೆ. ಶಿಕ್ಷಣ ಮತ್ತು ಸಂಪತ್ತು ಅಹಂಕಾರ ಹೆಚ್ಚಿಸುತ್ತದೆ. ಇದು ಕುಟುಂಬಗಳು ಪ್ರತ್ಯೇಕಗೊಳ್ಳುವುದಕ್ಕೆ ಕಾರಣವಾಗುತ್ತಿದೆ ಎಂದು ಅಹ್ಮದಾಬಾದಿನಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಸಭೆಯಲ್ಲಿ ಮೋಹನ್ ಭಾಗವತ್ ಹೇಳಿದ್ದರು. ಮದುವೆ ವಿಚ್ಛೇನದ ಘಟನೆಗಳಲ್ಲಿ ಹೆಚ್ಚಳವಾಗುತ್ತಿದೆ. ಶಿಕ್ಷಣ ಸಂಪತ್ತು ಹೆಚ್ಚು ಇರುವ ಕುಟುಂಬಗಳಲ್ಲಿ ಇದು ಹೆಚ್ಚು ನಡೆಯುತ್ತಿವೆ. ಕುಟುಂಬಗಳು ಪ್ರತ್ಯೇಕಗೊಂಡಾಗ ಸಮಾಜ ಕ್ಷೀಣಿಸುತ್ತದೆ ಎಂದು ಭಾಗ್ವತ್ ಹೇಳಿದ್ದರು.
200 ವರ್ಷ ಹಳೆಯ ಪರಂಪರೆಯ ಮೇಲೆ ಸಮಾಜ ನೆಲೆಯೂರಿದ್ದು ಅಂದಿನ ಮಹಿಳೆಯರನ್ನು ಮನೆಯೊಳಗೆ ಇರಿಸಿಕೊಳ್ಳಲಾಗುತ್ತಿತ್ತು. ಅದು ನಮ್ಮ ಸಮಾಜದ ಸುವರ್ಣ ಕಾಲವಾಗಿತ್ತು. ಭಾರತದಲ್ಲಿ ಹಿಂದೂ ಸಮಾಜಕ್ಕೆ ಬದಲಾಗಿ ಬೇರೆ ಯಾವುದೂ ಇಲ್ಲ ಎಂದು ಭಾಗ್ವತ್ ಹೇಳಿದರು. ಹಿಂದೂ ಸಮುದಾಯ ಶಿಷ್ಟಾಚಾರಿಗಳು, ಸಂಘಟಿತವಾಗಿರಬೇಕು. ಒಂದೇ ಕುಟುಂಬದಂತೆ ವರ್ತಿಸುವುದಲ್ಲದೆ ಹಿಂದೂ ಸಮಾಜಕ್ಕೆ ಬೇರೆ ದಾರಿಯಿಲ್ಲ ಎಂದು ಅವರು ಹೇಳಿದರು.












