ಜಾರಿ ನಿರ್ದೇಶನಾಲಯದ ಮಾಜಿ ಜಂಟಿ ನಿರ್ದೇಶಕ ರಾಜೇಶ್ವರ್ ಸಿಂಗ್ ಬಿಜೆಪಿಗೆ: ಉತ್ತರ ಪ್ರದೇಶದಿಂದ ಟಿಕೆಟ್

0
235

ಸನ್ಮಾರ್ಗ ವಾರ್ತೆ

ಲಕ್ನೊ: ಸೇವೆಯಿಂದ ಸ್ವಯಂ ನಿವೃತ್ತರಾದ ಎಂಪೋರ್ಸ್‍ಮೆಂಟ್ ಡೈರಕ್ಟರೇಟ್(ಇಡಿ) ನ ಮಾಜಿ ಜಂಟಿ ನಿರ್ದೇಶಕ ರಾಜೇಶ್ವರ್ ಸಿಂಗ್ ಬಿಜೆಪಿಗೆ ಸೇರ್ಪಡೆಯಾಗಿದ್ದು ಬಿಜೆಪಿ ಅವರಿಗೆ ಉತ್ತರ ಪ್ರದೇಶದಿಂದ ಟಿಕೆಟ್ ನೀಡಿದೆ. ಮಾಜಿ ಸಚಿವೆ ಸ್ವಾತಿ ಸಿಂಗ್ ಪ್ರತಿನಿಧಿಸಿದ ಕ್ಷೇತ್ರದಿಂದ ರಾಜೇಶ್ವರ್ ಸಿಂಗ್ ಅಭ್ಯರ್ಥಿಯಾಗಲಿದ್ದಾರೆ. ಐಪಿಎಸ್ ಅಧಿಕಾರಿ ಮತ್ತು ಇಡಿ ಅಧಿಕಾರಿಯಾಗಿದ್ದ ರಾಜೇಶ್ವರ್ ಸಿಂಗ್ ಸ್ವಯಂ ನಿವೃತ್ತಿಯಾಗಿದ್ದು, ಅವರ ಅರ್ಜಿಯು ನಿನ್ನೆ ಪುರಸ್ಕೃತವಾಗಿತ್ತು.

24 ವರ್ಷ ಅವರು ಉತ್ತರ ಪ್ರದೇಶ ಪೊಲೀಸ್ ಮತ್ತು ಇಡಿಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ಉತ್ತರ ಪ್ರದೇಶದ ಸುಲ್ತಾನ್ ಪುರ ಸ್ವದೇಶಿಯಾಗಿದ್ದಾರೆ. ರಾಷ್ಟ್ರೀಯ ಗಮನ ಸೆಳೆದ ಹಲವು ಭ್ರಷ್ಟಾಚಾರ ತನಿಖೆಗೆ ಅವರು ನೇತೃತ್ವ ನೀಡಿದ್ದರು. 2ಜಿ ಸ್ಪೆಕ್ಟ್ರಂ, ಅಗಸ್ಟಾ ವೆಸ್ಟ್ ಲೆಂಡ್, ಏರ್‍ಸೆಲ್ ಮಾಕ್ಸಿಸ್, ಅಮ್ರಪಾಲಿ ಮುಂತಾದ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆಯ ಹೊಣೆ ಅವರ ಮೇಲಿತ್ತು.

ರಾಜೇಶ್ವರ್ ಸಿಂಗ್ ಬಿಜೆಪಿಯಿಂದ ಸ್ಪರ್ಧಿಸುವ ಸುದ್ದಿ ಹೊರಬಂದ ನಂತರ ಬಿಜೆಪಿ ಮತ್ತು ಇಡಿಯನ್ನು ಟೀಕಿಸಿ ಕಾರ್ತಿ ಚಿದಂಬರಂ ರಂಗ ಪ್ರವೇಶಿಸಿದರು. ಬಿಜೆಪಿ ಸೇರಲಿಕ್ಕಾಗಿ ವಿಆರ್ ಎಸ್ ತೆಗೆದುಕೊಂಡು ಅವರು ತಮ್ಮ ಮಾತೃ ಸಂಸ್ಥೆಗೆ ಹೋಗುವುದಕ್ಕಾಗಿತ್ತೆಂದು ಕಾರ್ತಿ ಟೀಕಿಸಿದರು. ಕಾರ್ತಿ ಚಿದಂಬರಂ ವಿರುದ್ಧ ಏರ್‍ಸೆಲ್ ಮಾಕ್ಸಿಸ್ ವ್ಯವಹಾರವನ್ನು ಕೂಡ ರಾಜೇಶ್ವರ್ ಸಿಂಗ್ ತನಿಖೆ ಮಾಡಿದ್ದರು.