ಪ್ರಧಾನಿ ಮೋದಿಯವರಲ್ಲಿ ದೈವಿಕ ಚಿಹ್ನೆಗಳಿವೆ: ಮಧ್ಯಪ್ರದೇಶ ಮುಖ್ಯಮಂತ್ರಿ

0
276

ಸನ್ಮಾರ್ಗ ವಾರ್ತೆ

ಭೋಪಾಲ: ಪ್ರಧಾನಿ ನರೇಂದ್ರ ಮೋದಿಯವರು ಅಮಾನುಷಿಕ ವ್ಯಕ್ತಿ, ಅವರಲ್ಲಿ ದೈವಿಕ ಚಿಹ್ನೆಗಳಿವೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಹೇಳಿದರು. ಮೋದಿಯೊಳಗೆ ಅಂತರ್‍ಲೀನವಾದ ಶಕ್ತಿಗಳಿಂದ ಇಷ್ಟು ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದಲ್ಲಿ ಮಾಡಲು ಸಾಧ್ಯವಾಯಿತೆಂದು ಚೌಹಾನ್ ಹೇಳಿದರು. ಗೋವಾದ ಡಂಬೋಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಅವರು ಮಾತಾಡುತ್ತಿದ್ದರು.

ನಾನು ಒಬ್ಬ ಮುಖ್ಯಮಂತ್ರಿ ಮತ್ತು ಬಿಜೆಪಿ ಕಾರ್ಯಕರ್ತನಾಗಿರುವುದರಿಂದ ಹೇಳಿದ್ದಲ್ಲ. ನನ್ನ ಮನಸ್ಸಿಗೆ ಅನಿಸುವುದು ನರೇಂದ್ರ ಮೋದಿ ಒಬ್ಬ ಪ್ರಧಾನಿಯಾಗಿ ಸಿಕ್ಕಿದ್ದು ದೇಶದ ಸೌಭಾಗ್ಯವಾಗಿದೆ. ಅವರು ನಂಬಿಕೆ ಇಡಬಹುದಾದ ವ್ಯಕ್ತಿಯಾಗಿದ್ದಾರೆ ಎಂದು ಚೌಹಾನ್ ಹೇಳಿದರು. ಕಾಂಗ್ರೆಸ್‍ನ ಹಿಂದಿನ ಆಡಳಿತದ ವಿರುದ್ಧ ಚೌಹಾನ್ ಕಟುವಾಗಿ ಟೀಕಿಸಿದರು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ವಿದೇಶಗಳಲ್ಲಿ ಭಾರತಕ್ಕೆ ಅಂಗೀಕಾರ ಸಿಕ್ಕಿತೆಂದು ಚೌಹಾನ್ ಹೇಳಿದರು.