ಉತ್ತರಪ್ರದೇಶ ಆಸ್ಪತ್ರೆಯ ಅವ್ಯವಸ್ಥೆ: ಛಾವಣಿಯಿಂದ ಕೊರೋನ ವಾರ್ಡ್‌ಗೆ ಸುರಿದ ಮಳೆ ನೀರು

0
436

ಸನ್ಮಾರ್ಗ ವಾರ್ತೆ

ಬರೇಲಿ,ಜು.‌20: ಕೋವಿಡ್-19 ರೋಗಿಗಳ ವಾರ್ಡ್‌ನ ಛಾವಣಿಯ ಪೈಪ್‌ನ ರಂಧ್ರದ ಮೂಲಕ ಮಳೆ ನೀರು ಸೋರಿಕೆಯಾಗಿದ್ದು, ಆಸ್ಪತ್ರೆಯಲ್ಲಿ ತುಂಬಿಕೊಂಡ ಘಟನೆಯು ಬರೇಲಿ ಆಸ್ಪತ್ರೆಯಲ್ಲಿ ವರದಿಯಾಗಿದೆ.

ಮಳೆನೀರಿನಿಂದ ಆಸ್ಪತ್ರೆಯಲ್ಲಿ ಪ್ರವಾಹ ಉಂಟಾದ ವಿಡಿಯೋ ವೈರಲ್ ಆದ ನಂತರವೇ ಆಸ್ಪತ್ರೆ ಆಡಳಿತ ಮಂಡಳಿಯು ನೀರು ಸೋರುವಿಕೆಯನ್ನು ತಡೆಯಲು ಕ್ರಮ ಕೈಗೊಂಡಿದೆ ಎಂಬ ಆರೋಪವಿದೆ. ಸೀಲಿಂಗ್‌ನ ರಂಧ್ರದಿಂದ ನೀರು ಸುರಿಯುತ್ತಿರುವುದನ್ನು ಕಂಡು ರೋಗಿಗಳು ಸ್ತಬ್ಧರಾಗಿದ್ದು, ಕಂಡು ಬಂತು.

“ಪೈಪ್ ಸೋರಿಕೆಯಿಂದಾಗಿ ರಾಜಶ್ರೀ ವೈದ್ಯಕೀಯ ಸಂಶೋಧನಾ ಸಂಸ್ಥೆ ಮತ್ತು ಆಸ್ಪತ್ರೆಯಲ್ಲಿ ನೀರು ಪ್ರವೇಶಿಸಿತ್ತು. ತಕ್ಷಣ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ಕುರಿರು ವರದಿಗೆ ಆದೇಶಿಸಲಾಗಿದೆ ಎಂದು ಎಸಿಎಂಒ, ಬರೇಲಿಯ ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ.ಅಶೋಕ್ ಕುಮಾರ್ ಹೇಳಿದ್ದಾಗಿ ಎಎನ್ಐ ವರದಿ ಮಾಡಿದೆ.

ಈ ಘಟನೆಯ ವಿಡಿಯೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ವಾದ್ರಾ ಸಾಂಕ್ರಾಮಿಕ ರೋಗದ ಮಧ್ಯೆ ಆಸ್ಪತ್ರೆಗಳ ಅಧೋಗತಿಯ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಓದುಗರೇ ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ‌.