ಸೂಕಿಯನ್ನು ಬಿಡುಗಡೆಗೊಳಿಸದಿದ್ದರೆ ಪರಿಣಾಮ ಎದುರಿಸಬೇಕಾದೀತು: ಮ್ಯಾನ್ಮಾರಿಗೆ ಅಮೆರಿಕದ ಎಚ್ಚರಿಕೆ

0
655

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಫೆ.1: ಮ್ಯಾನ್ಮಾರ್ ಸೇನೆ ಬಂಧಿಸಿರುವ ಆಂಗ್ ಸಾನ್ ಸೂ ಕೀ ಮುಂತಾದವರನ್ನು ಬಿಡುಗಡೆಗೊಳಿಸಬೇಕೆಂದು ಅಮೆರಿಕ ಹೇಳಿದ್ದು, ಇಲ್ಲದಿದ್ದರೆ ಕಠಿಣ ತಿರುಗೇಟಿಗೆ ಸಿದ್ಧವಾಗಿ ಎಂದು ಮ್ಯಾನ್ಮಾರ್ ಸೇನೆಗೆ ಅಮೆರಿಕ ಎಚ್ಚರಿಕೆ ನೀಡಿದೆ.

ಚುನಾವಣೆ ಫಲಿತಾಂಶವನ್ನು ಬುಡಮೇಲುಗೊಳಿಸುವ ಯಾವ ಕ್ರಮವನ್ನು ಅಮೆರಿಕ ಬೆಂಬಲಿಸುವುದಿಲ್ಲ. ಮ್ಯಾನ್ಮಾರಿನಲ್ಲಿ ಪ್ರಜಾಪ್ರಭುತ್ವದ ಬದಲಾವಣೆ ಅಮೆರಿಕ ಬಯಸುತ್ತದೆ ಎಂದು ವೈಟ್‍ಹೌಸ್ ವಕ್ತಾರ ಜೆನ್ ಹೇಳಿದರು.

ಸೇನಾ ಕಾರ್ಯ ಆಚರಣೆಗೆ ಅಮೆರಿಕದ ಬೆಂಬಲ ಇಲ್ಲ ಎಂದೂ ಅವರು ಹೇಳಿದರು. ಕಳೆದ ಕೆಲವು ವಾರಗಳಿಂದ ಸೂಕಿ ಮತ್ತು ಸೇನೆಯ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಇದರ ಬೆನ್ನಿಗೆ ದೇಶದಲ್ಲಿ ಸೈನಿಕ ಬುಡುಮೇಲು ಕೃತ್ಯ ನಡೆದಿದೆ.