ಆಸ್ಟ್ರೇಲಿಯದ ಕ್ರಿಕೆಟ್‍ನಲ್ಲಿ ಜನಾಂಗೀಯವಾದ ಇದೆ: ಉಸ್ಮಾನ್ ಖ್ವಾಜ

0
286

ಸನ್ಮಾರ್ಗ ವಾರ್ತೆ

ಸಿಡ್ನಿ,ಸೆ.16: ಆಸ್ಟ್ರೇಲಿಯಾದ ಕ್ರಿಕೆಟಿನಲ್ಲಿಯೂ ವಂಶೀಯವಾದ ಇದೆ ಎಂದು ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್ ಉಸ್ಮಾನ್ ಖ್ವಾಜ ಬಹಿರಂಗಪಡಿಸಿದ್ದಾರೆ. ಪ್ರಮುಖ ಕ್ರಿಕೆಟ್ ವೆಬ್‍ಸೈಟ್‍ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಂಶೀಯವಾದದ ಕುರಿತು ಬಹಿರಂಪಡಿಸಿದ್ದು, ಪಾಕಿಸ್ತಾನದ ಮೂಲದ ಖ್ವಾಜ ಆಸ್ಟ್ರೇಲಿಯಕ್ಕಾಗಿ 44 ಟೆಸ್ಟ್ ಮತ್ತು 40 ಏಕದಿನದಲ್ಲಿ ಆಡಿದ್ದಾರೆ.

“ಆಡುವ ವೇಳೆ ನಾನೊಬ್ಬ ಉದಾಸೀನದ ವ್ಯಕ್ತಿಯೆಂದು ಹೇಳಲಾಗುತ್ತಿತ್ತು. ನನ್ನ ಶಾಂತ ಸ್ವಭಾವದಿಂದಾಗಿ ಹಾಗೆ ಹೇಳುತ್ತಾರೆ ಎಂದು ನಾನು ಭಾವಿಸಿದ್ದು. ಪಾಕಿಸ್ತಾನದವರು ಮತ್ತು ಭಾರತ ಉಪಖಂಡದಲ್ಲಿರುವವನ್ನು ಕಾಣುವಾಗ ಆಲಸಿಗರಂತೆ ಕಾಣಬಹುದು.

ನನ್ನ ಓಟ ಯಾವಾಗಲೂ ಸ್ವಾಭಾವಿಕವಾದುದು ಆಗಿರಲಿಲ್ಲ. ಆದ್ದರಿಂದ ನಾನು ಧಾರಳ ಫಿಟ್‍ನೆಸ್ ಟೆಸ್ಟ್‌ಗೊಳಗಾದ ನನ್ನ ಹುಟ್ಟೂರು ನನಗೆ ತೊಂದರೆಯಾಗಿದೆ. ಇದರಿಂದ ನಾನು ಈಗಲೂ ಸಂಪೂರ್ಣ ದಡ ಸೇರಿಲ್ಲ ಎಂದು ಖ್ವಾಜ ಹೇಳಿದರು.

ಭಾರತ ಉಪಖಂಡದ ಕ್ರಿಕೆಟಿಗರು ಈಗಲೂ ಆಸ್ಟ್ರೇಲಿಯನ್ ಕ್ರಿಕೆಟ್‍ನ ಮೇಲೆ ದೊಡ್ಡ ಪ್ರಭಾವ ಮೂಡಿಸಿಲ್ಲ. ಅವರು ಬಹಳಷ್ಟು ಮುಂದೆ ಸಾಗಬೇಕಾಗಿದೆ. ಖ್ವಾಜ ಆಸ್ಟ್ರೇಲಿಯ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಮೊದಲ ಮುಸ್ಲಿಮ್ ಆಟಗಾರ ಮತ್ತು ಪಾಕಿಸ್ತಾನಿ ಮೂಲದ ವ್ಯಕ್ತಿಯಾಗಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.