ಉತ್ತರಪ್ರದೇಶ: ಪುಸ್ತಕ ಮಾರಾಟಗಾರನನ್ನು ಬಂಧಿಸಿದ ಪೊಲೀಸರು

0
258

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರಪ್ರದೇಶದಲ್ಲಿ ಇಸ್ಲಾಮೀ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೊಂಡ ಜಿಲ್ಲೆಯಲ್ಲಿ ಮಕ್ತಬತ್ತುಲ್ ಮದೀನ ಕನ್‍ಸುಲ್ ಈಮಾನ್ ಎಂಬ ಪುಸ್ತಕ ಮಾರಾಟ ಮಳಿಗೆ ನಡೆಸುವ ಗೊಲಾಗಂಜ್ ನಿವಾಸಿ ಇರ್ಷಾದ್ (ಶೇರು-40) ಎಂಬ ವ್ಯಕ್ತಿಯನ್ನು ಭಯೋತ್ಪಾದನಾ ವಿರೋಧಿ ಸ್ಕ್ವಾಡ್ ಎಟಿಎಸ್ ಬಂದಿಸಿದೆ ಎಂದು ವರದಿಯಾಗಿದೆ.

ಪಾಂಡೆ ಬಝಾರ್ ಪೊಲೀಸ್ ಠಾಣೆಯ ಸಮೀಪದಲ್ಲಿರುವ ರಕಬಂಜಿನಲ್ಲಿ ಇವರ ಅಂಗಡಿ ಇದೆ. ಪವಿತ್ರ ಕುರ್‍ಆನ್ ಸಹಿತ ವಿವಿಧ ರೀತಿಯ ಇಸ್ಲಾಮಿಕ್ ಪುಸ್ತಕಗಳು ನಮಾಝ್ ಚಾಪೆ ಟೋಪಿಗಳನ್ನು ಇವರು ಅಂಗಡಿಯಲ್ಲಿ ಮಾರುತ್ತಿದ್ದಾರೆ. ಶೆರು ಒಂದು ವರ್ಷದಿಂದ ಈ ಅಂಗಡಿ ನಡೆಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ.

ಇದೇ ವೇಳೇ ಉತ್ತರಪ್ರದೇಶ ಎಟಿಎಸ್ ಮತ್ತು ಉನ್ನತ ಅಧಿಕಾರಿಗಳಿಗೆ ಮತ್ತು ಗೋಂಡ ಎಸ್ಪಿಗೆ ಕರೆ ಮಾಡಿದಾಗ ಬಂಧನ ವಿವರವನ್ನು ನಿಷೇಧಿಸಿದ್ದಾರೆ ಎಂದು ಸಿಯಾಸತ್ ಸುದ್ದಿ ಪೋರ್ಟಲ್ ತಿಳಿಸಿದೆ. ರವಿವಾರ ಸಂಜೆ ಮಫ್ತಿಯಲ್ಲಿ ಬಂದ ಐದು ಮಂದಿ ಇವರನ್ನು ಕರೆದುಕೊಂಡು ಹೋದರು ಎಂದು ಜನರು ಹೇಳುತ್ತಿದ್ದಾರೆ.