ಸನ್ಮಾರ್ಗ ವಾರ್ತೆ
ಮುಂಬೈ,ಫೆ.2: ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿಸಲಾದ ತೆಲುಗು ಕವಿ ವರವರ ರಾವ್ರ ಜಾಮೀನು ಅರ್ಜಿಯಲ್ಲಿ ಮುಂಬೈ ಹೈಕೋರ್ಟು ವಿಚಾರಣೆ ಮುಗಿದಿದ್ದು ಜಸ್ಟಿಸ್ ಎಸ್ಎಸ್ ಶಿಂಧೆ, ಮನೀಷ್ ಪಿತಾಲೆ ತೀರ್ಪನ್ನು ಮುಂದೂಡಿದ್ದಾರೆ.
ವಯೋಸಹಜ ನೆನಪಿನ ಶಕ್ತಿಯ ಕೊರತೆ, ನಾಡಿ ರೋಗಗಳ ಸಹಿತ ಗಂಭೀರ ರೋಗಿಯಾಗಿರುವ ವರವರ ರಾವ್ರಿಗೆ ಕಠಿಣ ನಿಬಂಧನೆಗಳೊಂದಿಗೆ ಮೂರು ತಿಂಗಳ ಜಾಮೀನು ನೀಡಬೇಕೆಂದು ವರವರ ರಾವ್ರ ವಕೀಲ ಆನಂದ್ ಗ್ರೋವರ್ ಕೋರ್ಟಿನಲ್ಲಿ ವಾದಿಸಿದ್ದಾರೆ. ವಿಚಾರಣಾ ಕೈದಿಗಳಿಗೆ ಆರೋಗ್ಯದಿಂದ ಜೀವಿಸಲಿಕ್ಕಿರುವ ಮೂಲಭೂತ ಹಕ್ಕು ಉಲ್ಲಂಘಿಸಲ್ಪಟ್ಟಿದೆ ಎಂದು ಜಾಮೀನು ಅರ್ಜಿ ಸಲ್ಲಿಸಿದ ರಾವ್ರ ಪತ್ನಿ ಹೇಮಲತಾರಿಗಾಗಿ ಹಾಜರಾದ ಇಂದಿರಾ ಜೈಸಿಂಗ್ ಹೇಳಿದರು.
ದೇಶ ಸುರಕ್ಷೆಗೆ ಸಂಬಂಧಿಸಿದ ಆರೋಪ ಇರುವುದರಿಂದ ಯುಎಪಿಎ ಪ್ರಕಾರ ಕೇಸು ದಾಖಲಾಗಿದೆ ಆದ್ದರಿಂದ ಜಾಮೀನು ನೀಡಬಾರದೆಂದು ಎನ್ಐಎ ಮತ್ತು ಮಹಾರಾಷ್ಟ್ರ ಸರಕಾರ ನಿಲುವು ತಳೆದಿದೆ. ಅಗತ್ಯವಾದರೆ ತಲೋಜ ಜೈಲಿಗೆ ಕಳುಹಿಸುವ ಬದಲು ಜೆಜೆ ಆಸ್ಪತ್ರೆಯ ಪ್ರಿಸನ್ ವಾರ್ಡಿಗೆ ಕಳುಹಿಸಬಹುದೆಂದು ಹೇಳಿದ್ದಾರೆ.
ಕಠಿಣ ನಿಬಂಧನೆಗಳಿಂದ ರಾವ್ರಿಗೆ ಜಾಮೀನು ನೀಡುವ ಬದಲು ವೈದ್ಯಕೀಯ ಸಹಾಯ ಒದಗಿಸಲು ಸರಕಾರಕ್ಕೆ ಕೋರ್ಟು ಕಠಿಣ ನಿಬಂಧನೆಗಳನ್ನು ಹಾಕಬೇಕೆಂದು ಎನ್ಐಎ ಪರ ಹಾಜರಾದ ಅಡಿಶನಲ್ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಹೇಳಿದರು.












