ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಜೂನ್ 26, 27 ರಂದು ವಿವಿಧ ಸ್ಪರ್ಧೆಗಳು

0
172

ಸನ್ಮಾರ್ಗ ವಾರ್ತೆ

ಸ್ಮಾರ್ಟ್ ಸಿಟಿ ಮಿಷನ್ 8ನೇ ವಾರ್ಷಿಕೋತ್ಸವದ ಪ್ರಯುಕ್ತ ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ದಿನಾಂಕ 26/06/2023 ಹಾಗೂ 27/06/2023 ರಂದು ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಸ್ಪರ್ಧೆಗಳ ವಿವರ ಈ ಕೆಳಗಿನಂತಿದೆ..

ಚಿತ್ರಕಲಾ ಸ್ಪರ್ಧೆ
ವಿಷಯ –
ಮಂಗಳೂರು ಸ್ಮಾರ್ಟ್ ಸಿಟಿ ಅಂದು, ಇಂದು, ಮುಂದು.
ಸ್ಪರ್ಧಾ ದಿನಾಂಕ – 26/06/23
ಸ್ಪರ್ಧೆಯ ಅವಧಿ – 2 ಗಂಟೆ. 10am ರಿಂದ 12pm.
ಮುಕ್ತ ಅವಕಾಶ (open to all)
ಸ್ಥಳ – ಮಂಗಳೂರು ಸ್ಮಾರ್ಟ್ ಸಿಟಿ ಕಛೇರಿ, ಮೂರನೇ ಮಹಡಿ, ಮಂಗಳೂರು ನಗರ ಪಾಲಿಕೆ ಕಛೇರಿ, ಲಾಲ್ ಬಾಗ್.

ಪ್ರಬಂಧ ಸ್ಪರ್ಧೆ
ವಿಷಯ – ಸ್ವಚ್ಛತೆ ಮತ್ತು ನಗರ ನೈರ್ಮಲೀಕರನ
ಸ್ಪರ್ಧಾ ದಿನಾಂಕ – 26/06/23
ಸ್ಪರ್ಧೆಯ ಅವಧಿ – 2 ಗಂಟೆ.
2pm ರಿಂದ 4pm.
8 ರಿಂದ 10ನೇ ತರಗತಿಯ ಮಕ್ಕಳಿಗೆ
ಸ್ಥಳ – ಮಂಗಳೂರು ಸ್ಮಾರ್ಟ್ ಸಿಟಿ ಕಛೇರಿ, ಮೂರನೇ ಮಹಡಿ, ಮಂಗಳೂರು ನಗರ ಪಾಲಿಕೆ ಕಛೇರಿ, ಲಾಲ್ ಬಾಗ್.

ಛಾಯಾಗ್ರಹಣ ಸ್ಪರ್ಧೆ (Photography competition)
ವಿಷಯ – ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಅತ್ಯುತ್ತಮವಾದ ಛಾಯಾ ಚಿತ್ರ.
ಮುಕ್ತ ಅವಕಾಶ (open to all) ದಿನಾಂಕ 27.06.23 ರಂದು ಸಂಜೆ 4 ಗಂಟೆಯ ಮೊದಲು ಮಂಗಳೂರು ಸ್ಮಾರ್ಟ್ ಸಿಟಿ ಕಚೇರಿಗೆ A3 size ಡಿಜಿಟಲ್ (Digital hard copy) ಪ್ರತಿಯನ್ನು ಒಪ್ಪಿಸುವುದು ಜೊತೆಗೆ high resolution ನ ಸಾಫ್ಟ್ (soft copy) ಪ್ರತಿಯನ್ನು [email protected] ಗೆ ಸಂಜೆ 4 ಗಂಟೆಗೆ ಮುಂಚಿತವಾಗಿ ಕಳುಹಿಸುವುದು.
ಕಳುಹಿಸುವಾಗ ಸ್ಪರ್ಧಿಯ ಹೆಸರು, ದೂರವಾಣಿ ಸಂಖ್ಯೆ ಹಾಗೂ ಶಾಲೆ ಕಾಲೇಜು ವೃತ್ತಿಪರ ವಿವರ ನಮೂದಿಸ ತಕ್ಕದ್ದು.

ಸ್ಮಾರ್ಟ್ ಸಿಟಿ ರೀಲ್ಸ್ ಸ್ಪರ್ಧೆ (reels)
ವಿಷಯ – ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಒಳಗೊಂಡ ರೀಲ್ಸ್ (reels)
ದಿನಾಂಕ 27.06.23 ರಂದು ಸಂಜೆ 4 ಗಂಟೆಯ ಮೊದಲು ಸ್ಮಾರ್ಟ್ ಸಿಟಿ ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ರೀಲ್ಸ್ ನ್ನು ಮಂಗಳೂರು ಸ್ಮಾರ್ಟ್ ಸಿಟಿ ಇ-ಮೇಲ್- [email protected] ಗೆ ಸಲ್ಲಿಸುವುದು ಹಾಗೂ #smartcitiesmission #smartcitiesmission@8mangalurusmartcity ಎಂಬ # ನೊಂದಿಗೆ @smartcitymangaluru instagram ಖಾತೆಯಲ್ಲಿ tag ಮಾಡಿ ಸಲ್ಲಿಸುವುದು.

ಮುಕ್ತ ಅವಕಾಶ (open to all)

ಸೂಚನೆ :
ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಗೆ ಭಾಗವಹಿಸುವ ಸ್ಪರ್ಧಿಗಳು ಅರ್ಧ ಗಂಟೆ ಮುಂಚಿತವಾಗಿ ಮಂಗಳೂರು ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಹಾಜರಿರಬೇಕು.

ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಡ್ರಾಯಿಂಗ್ ಶೀಟನ್ನು ಮಾತ್ರ ಒದಗಿಸಲಾಗುವುದು ಹಾಗೂ ಸ್ಪರ್ಧೆಯಲ್ಲಿ ರಚಿಸಿದ ಚಿತ್ರಗಳು ಸ್ಮಾರ್ಟ್ ಸ್ಮಾರ್ಟ್ ಸಿಟಿಗೆ ಹಸ್ತಾಂತರಿಸತಕ್ಕದ್ದು ಯಾವುದೇ ಕಾರಣಕ್ಕೂ ರಚಿಸಿದ ಚಿತ್ರಗಳನ್ನು ಮರುಪಡೆಯುವಂತಿಲ್ಲ.

ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ A4 ಶೀಟನ್ನು ನೀಡಲಾಗುವುದು.

ಸ್ಪರ್ಧೆಗಳಲ್ಲಿ ತೀರ್ಪುಗಾರರು ನೀಡಿರುವ ನಿರ್ಣಯ ಅಂತಿಮವಾಗಿರುತ್ತದೆ ಯಾವುದೇ ಕಾರಣಕ್ಕೂ ಚರ್ಚೆಗೆ ಅವಕಾಶ ಇರುವುದಿಲ್ಲ

ಸ್ಮಾರ್ಟ್ ಸಿಟಿ ಯೋಜನೆಯ ವಿವರ ಹಾಗೂ ಲೊಕೇಶನ್ ಗಳಿಗಾಗಿ (location) ಮಂಗಳೂರು ಸ್ಮಾರ್ಟ್ ಸಿಟಿ ವೆಬ್ಸೈಟ್ www.smartcitymangaluru.net ಅನ್ನು ವೀಕ್ಷಿಸಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಚಿತ್ರಕಲಾ ಸ್ಪರ್ಧೆ- 9743702425
ಪ್ರಬಂಧ ಸ್ಪರ್ಧೆ – 9108881199
ಛಾಯಾಚಿತ್ರ ಹಾಗೂ ರೀಲ್ಸ್ ಸ್ಪರ್ಧೆ – 9731929509
ಮೇಲೆ ನೀಡಿರುವ ದೂರವಾಣಿಗೆ 10 ಗಂಟೆಯಿಂದ 6ಗಂಟೆಯ ಒಳಗಾಗಿ ಸಂಪರ್ಕಿಸಬಹುದಾಗಿದೆ.
ಕಚೇರಿ ದೂರವಾಣಿ ಸಂಖ್ಯೆ: 0824 2986321