ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಣ್ಣವನ್ನು ಕಾಗೆಗೆ ಹೋಲಿಸಿದ ಪತ್ರಕರ್ತ ವಿಶ್ವೇಶ್ವರ ಭಟ್: ಕ್ರಮಕ್ಕೆ ಆಗ್ರಹ

0
373

ಸನ್ಮಾರ್ಗ ವಾರ್ತೆ

ಮಂಗಳೂರು: ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ್ ಭಟ್ ತಮ್ಮ ಅಂಕಣ ಬರಹದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರವರ ಬಣ್ಣವನ್ನು ಅವಹೇಳನ ಗೈಯ್ಯುವ ರೀತಿಯಲ್ಲಿ ಚಿತ್ರಿಸಿ ಜನಾಂಗೀಯ ನಿಂದನೆಗೈದಿದ್ದಾರೆ. ಬರಹದಲ್ಲಿ “ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ!” ಎಂದು ಬರೆದಿದ್ದಾರೆ.

ವಿಶ್ವವಾಣಿ ಪತ್ರಿಕೆಯ ಅಕ್ಟೋಬರ್ 6ರ ನೂರೆಂಟು ವಿಶ್ವ ಎಂಬ ಅಂಕಣದಲ್ಲಿ ನದಿಯ ಹೆಸರಿಟ್ಟುಕೊಂಡು ನೀರಿಗಾಗಿ ನರಳುವ ಜೋರ್ಡಾನ್! ಎಂಬ ಬರಹದಲ್ಲಿ “ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ!” ಎಂದು ಬರೆಯುವ ಮೂಲಕ ರಾಷ್ಟ್ರಪತಿಯವರ ಮೈಬಣ್ಣವನ್ನು ಅವಹೇಳನ ಮಾಡಿದ್ದಾರೆ ಎಂದು ಪೀಪಲ್ ಮೀಡಿಯಾ ವರದಿ ಮಾಡಿದೆ.

ವಿಶ್ವೇಶ್ವರ ಭಟ್ ತಮ್ಮ ಅಂಕಣದಲ್ಲಿ ಜೋರ್ಡಾನ್ ದೇಶದ ಬಿಸಿಲಿನ ಝಳವನ್ನು ವರ್ಣಿಸುವಾಗ “ಅಪ್ಪಟ ಬೀನ್ಕಿ ಕೆಂಡ! ಅರ್ಧಗಂಟೆ ಆ ಮರುಭೂಮಿಯಲ್ಲಿ ನಿಂತರೆ ಇಡೀ ಶರೀರವೆಲ್ಲ ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ! ಕಣ್ಮುಚ್ಚಿದರೂ ಜೋಗದ ಜಲಪಾತದಂತೆ ಸುರಿಯುವ ನಿಗಿನಿಗಿ ಬಿಸಿಲ ಧಾರೆ” ಎಂದು ಬರೆದಿದ್ದು, ರಾಷ್ಟ್ರಪತಿಯವರ ಬಣ್ಣವನ್ನು ಅಪಹಾಸ್ಯ ಮಾಡಿದ್ದಾರೆ.

ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ‘ಮುರ್ಮು ಅವತಾರ’ ಎಂದು ಕಾಗೆಗೆ ಹೋಲಿಸಿ ಬಣ್ಣ ನಿಂದನೆಗೈದರೂ ವಿಶ್ವೇಶ್ವರ ಭಟ್ ವಿರುದ್ಧ ಇದುವರೆಗೆ ಕ್ರಮ ಕೈಗೊಳ್ಳದೇ ಇರುವುದನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.