ಕಣ್ತುಂಬಿಕೊಂಡ ಅಮ್ಮ; ಒಂದೇ ಹೆರಿಗೆಯಲ್ಲಿ ಐದು ಮಕ್ಕಳ ಜನನ; ಗರ್ಭ ಪಾತ್ರೆಯಲ್ಲಿ ಹೀಗಿದ್ದುವು…

0
8583

ಸನ್ಮಾರ್ಗ ವಾರ್ತೆ

ಲಕ್ನೊ,ಮೇ 9: ಒಂದೇ ಹೆರಿಗೆಯಲ್ಲಿ ಐದು ಮಕ್ಕಳಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದಾರೆ. ಉತ್ತರಪ್ರದೇಶದ ಸೂರತ್‍ಗಂಜ್ ಸಾಮುದಾಯಿಕ ಆರೋಗ್ಯ ಕೇಂದ್ರದಲ್ಲಿ ಐದು ಮಕ್ಕಳ ಹೆರಿಗೆಯಾಗಿದೆ. ಮಕ್ಕಳಿಗೂ, ತಾಯಿಗೂ ಹೇಳಿಕೊಳ್ಳುವ ಆರೋಗ್ಯ ಸಮಸ್ಯೆಯಿಲ್ಲ. ಆರೋಗ್ಯವಾಗಿದ್ದಾರೆ. ಆದರೆ ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ಬಾರಬಂಕಿ ಜಿಲ್ಲಾಸ್ಪತ್ರೆಗೆ ತಾಯಿ ಮಕ್ಕಳನ್ನು ಸೇರಿಸಲಾಗಿದೆ ಎಂದು ಸಾಮುದಾಯಿಕ ಆರೋಗ್ಯ ಕೇಂದ್ರ ಹೊಣೆಯಿರುವ ಡಾಕ್ಟರ್ ರಾಜರ್ಷಿ ಹೇಳಿದರು.

ಐದು ವರ್ಷ ಮೊದಲು ಮದುವೆಯಾಗಿದ್ದ ಅನಿತಾ ಈ ಅಪೂರ್ವ ಅಮ್ಮ ಆಗಿದ್ದಾರೆ. ಇವರ ಎರಡನೆ ಹೆರಿಗೆ ಇದು. ಮೊದಲ ಹೆರಿಗೆಯಲ್ಲಿ ಒಂದು ಗಂಡು ಮಗು ಇದೆ. ಈಗಿನ ಐದು ಮಕ್ಕಳಲ್ಲಿ ಮೂರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು. ಎರಡು ಮಕ್ಕಳು 1.2 ಕಿಲೊ ಭಾರ. ಎರಡು ಮಕ್ಕಳು 900 ಗ್ರಾಮ ಭಾರ ಒಂದು ಮಗು 800ಗ್ರಾಂ ಭಾರವನ್ನು ಹೊಂದಿದೆ. ಎರಡು ಮಕ್ಕಳಿಗೆ ಸಣ್ಣ ಉಸಿರಾಟ ಅಡಚಣೆ ಇದೆ. ಆದ್ದರಿಂದ ಪರೀಕ್ಷೆ ಮಾಡುವ ಸಲುವಾಗಿ ಮಹಿಳೆಯನ್ನು ಮತ್ತು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿದೆ.

ಮಕ್ಕಳು ತಾಯಿಯ ಗರ್ಭದಲ್ಲಿ 28 ವಾರ ಇದ್ದವು ಎಂದು ಡಾ. ರಾಜರ್ಷಿ ಹೇಳಿದರು. ಐದು ಮಕ್ಕಳು ಗರ್ಭ ಪಾತ್ರೆಯಲ್ಲಿ ಬೇರೆ ಬೇರೆ ಕೋಣೆಯಲ್ಲಿವೆ ಎಂಬತ್ತಿದ್ದವು. ಹೊಕ್ಕಳ ಬಳ್ಳಿ ಕೂಡ ಬೇರೆ ಬೇರೆಯಿತ್ತು ಎಂದು ಡಾ. ರಾಜರ್ಷಿ ತಿಳಿಸಿದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.