ಪಶ್ಚಿಮಬಂಗಾಳದಲ್ಲಿ ಬಿಜೆಪಿ ಕಚೇರಿಗೆ ಅಜ್ಞಾತರಿಂದ ಬೆಂಕಿ

0
637

ಸನ್ಮಾರ್ಗ ವಾರ್ತೆ-

ಕೊಲ್ಕತಾ, ಜ. 13: ಪಶ್ಚಿಮ ಬಂಗಾಲದ ಅನ್‍ಸೊಲ್‍ನಲ್ಲಿ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಸಲಾನ್‍ಪುರದ ಬಿಜೆಪಿ ಕಚೇರಿಗೆ ಅಜ್ಞಾತರು ಬೆಂಕಿ ಹಚ್ಚಿ ಸುಟ್ಟುಹಾಕಿದರು.

ರವಿವಾರ ಮಧ್ಯರಾತ್ರೆ ಘಟನೆ ನಡೆಯಿತು. ಕಚೇರಿ ಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಯ ಹಿಂದೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆಂದು ಬಿಜೆಪಿ ಆರೋಪಿಸಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.