ಅನ್ನಹ್ದ ಬೆಂಬಲಿತ ಹಬೀಬ್ ಜಮಲಿ ಸರಕಾರವನ್ನು ತಿರಸ್ಕರಿಸಿದ ಟುನಿಷ್ಯ ಸಂಸತ್ತು

0
542

ಸನ್ಮಾರ್ಗ ವಾರ್ತೆ-

ಟ್ಯುನಿಶ್, ಜ. 13: ನಿಯೋಜಿತ ಪ್ರಧಾನಿ ಹಬೀಬ್ ಜಮಲಿ ಸರಕಾರವನ್ನು ಟುನಿಶ್ಯನ್ ಪಾರ್ಲಿಮೆಂಟು ತಿರಸ್ಕರಿಸಿದೆ. ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಸೀಟುಗಳು ಗೆದ್ದ ಅನ್ನಹ್ದ ಪಾರ್ಟಿ ಸೂಚಿಸಿದ ಹಬೀಬ್ ಜಮಲಿ ಸರಕಾರವನ್ನು ಪಾರ್ಲಿಮೆಂಟು ಮತದಾನ ಮೂಲಕ ತಿರಸ್ಕರಿಸಿತು.

ಹೆಚ್ಚು ಸೀಟು ಗೆದ್ದರೂ ಅನ್ನಹ್ದಕ್ಕೆ ಬಹುಮತ ಇಲ್ಲ. ನಂತರ ಹಬೀಬ್ ಜಮಲಿಯ ನೇತೃತ್ವದಲ್ಲಿ ಪಕ್ಷೇತರ ಸದಸ್ಯರ ಸರಕಾರ ರಚಿಸಲು ಅಧ್ಯಕ್ಷ ಖೈಸ್ ಸಯೀದ್ ವಿವಿಧ ಪಾರ್ಟಿಗಳೊಂದಿಗೆ ದೀರ್ಘ ಸಮಾಲೋಚನೆಯ ಬಳಿಕ ಪಾರ್ಲಿಮೆಂಟಿನಲ್ಲಿ ಮತದಾನ ನಡೆಯಿತು. ಆದರೆ, ರಾಜಕೀಯ ನೇಮಕಾತಿಯ ಹೆಸರಿನಲ್ಲಿ ವಿವಿಧ ಪಾರ್ಟಿಗಳಲ್ಲಿ ಭಿನ್ನ ಅಭಿಪ್ರಾಯವಿದ್ದು ಜಮಲಿಗೆ ಬೆಂಬಲ ಸಿಗಲಿಲ್ಲ. ಇನ್ನು ಇನ್ನೋರ್ವ ಸದಸ್ಯನನ್ನು ಸೂಚಿಸಿ ಅಧ್ಯಕ್ಷರು ಸರಕಾರ ರಚಿಸುವ ನಿಟ್ಟಿನಲ್ಲಿ ಪುನಃ ಚರ್ಚೆ ನಡೆಸುತ್ತಿದ್ದಾರೆ