ಉತ್ತರ ಪ್ರದೇಶ ಕೊರೋನವನ್ನು ಅಸಾಮಾನ್ಯ ರೀತಿಯಲ್ಲಿ ಎದುರಿಸಿದೆ: ಹಾಡಿ ಹೊಗಳಿದ ಪ್ರಧಾನಿ ಮೋದಿ

0
467

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರ ಪ್ರದೇಶ ಅಸಾಮಾನ್ಯ ರೀತಿಯಲ್ಲಿ ಕೊರೊನ ಎರಡನೇ ಅಲೆಯನ್ನು ನಿರ್ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ. ಅವರು ತನ್ನ ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ ವೇಳೆ ಮಾತನಾಡುತ್ತಿದ್ದರು.

ಕೊರೊನ ಎರಡನೇ ತರಂಗದ ಹಾನಿಯಲ್ಲಿ ಉತ್ತರ ಪ್ರದೇಶದಲ್ಲಿ ಕೊರೊನ ಪೀಡಿತರ ಸಂಖ್ಯೆ ಪತ್ರಿದಿನ 30,000 ಎಂಬಂತಿತ್ತು. ಆದರೂ ಕೊರೋನ ವಿರುದ್ಧ ಸೆಟೆದು ನಿಂತು ದಕ್ಷವಾಗಿ ಹೋರಾಡಲಾಗಿದೆ. ಮಹಾಮಾರಿಯನ್ನು ನಿರ್ವಹಿಸಿದ ರೀತಿ ಪ್ರಶಂಸೆಗೆ ಅರ್ಹವಾಗಿದೆ ಎಂದು ಮೋದಿ ಹೇಳಿದ್ದು, ವ್ಯಾಪಕ ನಗೆಪಾಟಲಿಗೀಡಾಗಿದೆ.

ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಗೌರವ ಸೂಚಿಸಿದ ಅವರು. ಅಲ್ಲದೆ, ವ್ಯಾಕ್ಸಿನೇಶನ್‍ಗಾಗಿಯೂ ಉತ್ತರ ಪ್ರದೇಶವನ್ನು ಪ್ರಧಾನಿ ಹೊಗಳಿದರು. ಕೊರೊನ ಲೆಕ್ಕದ ಪ್ರಕಾರ 3.89 ಕೋಟಿ ಜನರು ಉತ್ತರ ಪ್ರದೇಶದಲ್ಲಿ ವ್ಯಾಕ್ಸಿನ್ ಸ್ವೀಕರಿಸಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರ ಕನ್ವರ್ ತೀರ್ಥ ಯಾತ್ರೆಗೆ ಅನುಮತಿ ನೀಡಿದ ಬಳಿಕ ಮೋದಿ ಉತ್ತರ ಪ್ರದೇಶ ಸರಕಾರವನ್ನು ಹೊಗಳಿ ಮಾತನಾಡಿದ್ದಾರೆ. ಕೊರೋನ ನಿರ್ವಹಣೆಯ ರೀತಿಯಲ್ಲಿ ಉತ್ತರಪ್ರ ದೇಶ ಸರಕಾರದ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬಂದಿತ್ತು. ಗಂಗಾ ನದಿಯಲ್ಲಿ ಕೊರೊನ ಪೀಡಿತರ ಮೃತದೇಹ ಹರಿದು ಬಂದಿರುವುದು ಸುದ್ದಿಯಾಗಿತ್ತು.