ಸನ್ಮಾರ್ಗ ವಾರ್ತೆ
ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಇದೀಗ ಡೆಸ್ಕ್ ಟಾಪ್ ಅಪ್ಲಿಕೇಶನ್ನಲ್ಲೂ ಒನ್ ಟು ಒನ್ ಧ್ವನಿ ಮತ್ತು ವಿಡಿಯೊ ಕರೆಗಳ ಸೇವೆ ಆರಂಭಿಸಿರುವುದಾಗಿ ಹೇಳಿದೆ. ಈ ಮೂಲಕ ವಾಟ್ಸಾಪ್ ಬಳಕೆದಾರರು ತಮ್ಮ ಲ್ಯಾಪ್ಟಾಪ್ ಅಥವಾ ಡೆಸ್ಕ್ ಟಾಪ್ ಪಿಸಿಗಳ ಮೂಲಕ ಧ್ವನಿ ಮತ್ತು ವಿಡಿಯೋ ಕರೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿದು ಬಂದಿದೆ.
ವಿಂಡೋಸ್ ಮತ್ತು ಮ್ಯಾಕ್ ಗಳಲ್ಲಿ ಡೆಸ್ಕ್ಟಾಪ್ ಅಪ್ಲಿಕೇಶನ್ನಿಂದ ಬಳಕೆದಾರರು ಒಂದರಿಂದ ಒಂದಕ್ಕೆ ಕರೆಗಳನ್ನು ಮಾತ್ರ ಮಾಡಬಹುದು ಎಂದು ಪ್ರಕಟಣೆಯಲ್ಲಿ ವಾಟ್ಸಾಪ್ ಹೇಳಿದೆ. “ವಿಶ್ವಾಸಾರ್ಹ ಮತ್ತು ಉತ್ತಮ-ಗುಣಮಟ್ಟದ” ಅನುಭವವನ್ನು ತಲುಪಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಈ ಕ್ರಮ ಎಂದು ಫೇಸ್ಬುಕ್ ಒಡೆತನದ ಕಂಪನಿ ಹೇಳಿದೆ. ಭವಿಷ್ಯದಲ್ಲಿ ಗುಂಪು ಧ್ವನಿ ಮತ್ತು ವೀಡಿಯೊ ಕರೆಗಳನ್ನು ಸೇರಿಸಲು ವೈಶಿಷ್ಟ್ಯವನ್ನು ವಿಸ್ತರಿಸಲಾಗುವುದು ಎಂದು ಹೇಳಿದೆ.
“ನಾವು ವಾಟ್ಸ್ ಆ್ಯಪ್ ಡೆಸ್ಕ್ ಟಾಪ್ ಅಪ್ಲಿಕೇಶನ್ನಲ್ಲಿ ವಿಡಿಯೊ ಮತ್ತು ಧ್ವನಿ ಕರೆಗಳನ್ನು ಒನ್ ಟು ಒನ್ ಮೂಲಕ ಪ್ರಾರಂಭಿಸುತ್ತಿದ್ದೇವೆ. ಆದ್ದರಿಂದ, ನಾವು ನಿಮಗೆ ವಿಶ್ವಾಸಾರ್ಹ ಮತ್ತು ಉತ್ತಮ ಗುಣಮಟ್ಟದ ಅನುಭವವನ್ನು ನೀಡಬಹುದೆಂದು ಖಚಿತಪಡಿಸುತ್ತೇವೆ.
ವಾಟ್ಸ್ ಅಪ್ ಪ್ಲಾಟ್ಫಾರ್ಮ್ನಲ್ಲಿನ ಧ್ವನಿ ಮತ್ತು ವಿಡಿಯೊ ಕರೆಗಳು ಎಂಡ್ ಟು ಎಂಡ್ ಎನ್ಕ್ರಿಪ್ ಆಗಿವೆ. ಆದ್ದರಿಂದ ಫೋನ್ಗಳು ಅಥವಾ ಕಂಪ್ಯೂಟರ್ಗಳಿಂದ ಮಾಡಲಾದ ಕರೆಗಳನ್ನು ವಾಟ್ಸಾಪ್ ಸಂಸ್ಥೆಯು ಕೇಳಲು ಅಥವಾ ನೋಡಲು ಸಾಧ್ಯವಿಲ್ಲ ಎಂದು ಕಂಪನಿ ತಿಳಿಸಿದೆ.
ಭವಿಷ್ಯದಲ್ಲಿ ನಮ್ಮ ಸೇವೆಯನ್ನು ಗುಂಪು ಧ್ವನಿ ಮತ್ತು ವಿಡಿಯೊ ಕರೆಗೆ ವಿಸ್ತರಿಸುವ ವೈಶಿಷ್ಟ್ಯವನ್ನು ಪರಿಚಯಿಸುತ್ತೇವೆ,” ವಾಟ್ಸ್ ಅಪ್ ಎಂದು ಸಂಸ್ಥೆ ಹೇಳಿದೆ. ಕಳೆದ ವರ್ಷದಲ್ಲಿ ದೀರ್ಘ ಸಂಭಾಷಣೆ ಸೇರಿದಂತೆ ಪರಸ್ಪರ ಕರೆಗಳಿಗಾಗಿ ಜನರು ವಾಟ್ಸ್ ಅಪ್ ಬಳಕೆ ಮಾಡುವುದರಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ ಎಂದು ವಾಟ್ಸ್ ಅಪ್ ಹೇಳಿದೆ.












