ಅಧಿಕಾರಿಗಳಿಗೆ ವಿದ್ಯುತ್ ವಾಹನ ಕಡ್ಡಾಯ: ಕೇಂದ್ರ ಸಾರಿಗೆ ಸಚಿವ ಗಡ್ಕರಿ

0
630

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ತನ್ನ ಇಲಾಖೆಯ ಅಧಿಕಾರಿಗಳಿಗೆ ವಿದ್ಯುತ್‍ ಚಾಲಿತ ವಾಹನವನ್ನು ಕಡ್ಡಾಯಗೊಳಿಸುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಪೆಟ್ರೋಲ್, ಡೀಸೆಲ್ ವಾಹನಗಳ ಬದಲಿಗೆ ವಿದ್ಯುತ್ ವಾಹನ ಉಪಯೋಗವನ್ನು ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ವಿದ್ಯುತ್ ವಾಹನ ಚಾರ್ಜಿಂಗ್ ಸೌಕರ್ಯ, ವಿದ್ಯುತ್ ಉಪಯೋಗದ ಅಡುಗೆ ಇವುಗಳ ಗುಣಗಳನ್ನು ಜಾಗೃತಿ ಮೂಡಿಸುವ ಗೊ ಇಲೆಕ್ಟ್ರಿಕ್ ಅಭಿಯಾನ್ ಉದ್ಘಾಟಿಸುವ ವೇಳೆ ಘೋಷಿಸಿದ್ದಾರೆ.

ದಿಲ್ಲಿಯಲ್ಲಿ 10,000 ವಿದ್ಯುತ್ ವಾಹನಗಳನ್ನು ಉಪಯೋಗಿಸಿದರೆ ಪ್ರತಿದಿನ ಇಂಧನ ಬಳಕೆ ಕಡಿಮೆಯಾಗಿ 30 ಕೋಟಿ ರೂಪಾಯಿ ಲಾಭ ಮಾಡಲು ಆಗುತ್ತದೆ ಎಂದು ಗಡ್ಕರಿ ವಾದ ಮಂಡಿಸಿದ್ದಾರೆ. ಜೊತೆಗೆ ವಾಯು ಮಲಿನೀಕರಣವನ್ನು ಕೂಡ ಕಡಿಮೆ ಮಾಡಲಿದೆ. ಫಾಸಿಲ್ ಇಂಧನ ತರಿಸಿಕೊಳ್ಳಲು ಎಂಟು ಲಕ್ಷ ಕೋಟಿ ರೂಪಾಯಿ ಭಾರತ ವ್ಯಯಿಸುತ್ತಿದೆ. ಇದಕ್ಕೆ ಮುಖ್ಯ ಪರ್ಯಾಯ ವಿದ್ಯುತ್ ಇಂಧನವಾಗಿದೆ. ಪರಂಪರಾಗತ ಇಂಧನಕ್ಕೆ ಹೋಲಿಸಿದರೆ ವಿದ್ಯುತ್ ವಾಹನದಲ್ಲಿ ಖರ್ಚು ಕೂಡ ಕಡಿಮೆ ಎಂದು ಗಡ್ಕರಿ ಹೇಳಿದರು.

ಉಷ್ಣತಾ ವಿದ್ಯುತ್ ನಿಲಯದಿಂದ ಹೊರಬರುವ ಕಾರ್ಬನ್ ಡೈ ಆಕ್ಸೈಡ್ ಮೌಲ್ಯವರ್ಧನೆ ಮಾಡಲು ಪ್ರೋತ್ಸಾಹಿಸಲಿಕ್ಕಾಗಿ ವಿದ್ಯುತ್ ಸಚಿವರಾದ ಆರ್ ಕೆ ಸಿಂಗ್‍ರನ್ನು ಗಡ್ಕರಿ ಮನವಿ ಮಾಡಿದ್ದಾರೆ. ಪ್ರಕೃತಿ ಸೌಹಾರ್ದ ಮತ್ತು ಮಾಲಿನ್ಯ ಇಲ್ಲದ ಭವಿಷ್ಯಕ್ಕಾಗಿ ಗೊ ಇಲಕ್ಟ್ರಿಕ್ ಅಭಿಯಾನದಲ್ಲಿ ಗಡ್ಕರಿ ಮಾತನಾಡುತ್ತಿದ್ದರು.