ಎರಡನೇ ಶಾಹಿನ್ ಬಾಗ್ ಇರುವುದಿಲ್ಲ; ತನ್ನ ಹೇಳಿಕೆಗೆ ವಿಷಾದವಿಲ್ಲ- ಕಪಿಲ್ ಮಿಶ್ರ

0
1589

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 26: ಬಿಜೆಪಿಯ ನಾಯಕ ಮಾಜಿ ಶಾಸಕ ಕಪಿಲ್ ಶರ್ಮ ಪುನಃ ದ್ವೇಷಪೂರಿತ ಹೇಳಿಕೆ ನೀಡಿದ್ದಾರೆ. ಜಾಫಾರಾಬಾದ್ ತೆರವುಗೊಳಿಸಿದ ಬಳಿಕ ಪುನಃ ಎರಡನೆ ಶಾಹಿನ್ ಬಾಗ್ ಉಂಟಾಗದು ಎಂದು ಕಪಿಲ್ ಶರ್ಮ ಟ್ವೀಟ್ ಮಾಡಿದ್ದಾರೆ. ಮಂಗಳವಾರ ನೀಡಿದ್ದ ಹೇಳಿಕೆಗೆ ವಿಷಾದವಿಲ್ಲ ಎಂದೂ ಮಿಶ್ರ ಹೇಳಿದ್ದಾರೆ. ಜಾಫರಾಬಾದಿನಲ್ಲಿ ಕಪಿಲ್ ಮಿಶ್ರ ಮಾಡಿದ ಭಾಷಣ ವಿವಾದವಾಗಿತ್ತು. ಇನ್ನೊಂದು ಶಾಹೀನ್ ಬಾಗ್‍ಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದರು. ಕಪಿಲ್ ಮಿಶ್ರರ ಭಾಷಣದ ಬಳಿಕ ದುಷ್ಕರ್ಮಿಗಳು ಜಾಫರಾಬಾದಿನಲ್ಲಿ ನುಸುಳಿ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ್ದರು. ದ್ವೇಷಪೂರಿತ ಹೇಳಿಕೆ ನೀಡಿದ ಕಪಿಲ್ ಮಿಶ್ರ ವಿರುದ್ಧ ಜಾಮಿಅ ಕೊಆರ್ಡಿನೇಶನ್ ಕಮಿಟಿ ದೂರು ನೀಡಿತ್ತು. ರವಿವಾರ ಜಾಫರಾಬಾದ್‍ನಲ್ಲಿ ಮಹಿಳೆಯರು ನಡೆಸುವ ಹೋರಾಟಕ್ಕೆ ಹಿಂಸಾ ನಿರತರ ಒಂದು ತಂಡದೊಂದಿಗೆ ಕಪಿಲ್ ಮಿಶ್ರ ಬಂದಿದ್ದರು. ನಂತರ ಘರ್ಷಣೆ ಆರಂಭವಾಗಿತ್ತು. ಈ ತಂಡದ ಗಲಭೆಯ ಪರಿಣಾಮದಿಂದ ಪೊಲೀಸ್ ಅಧಿಕಾರಿಗಳ ಸಹಿತ ಹಲವಾರು ಹತ್ಯೆಯಾದರು. ಅಂಗಡಿ ವಾಹನಗಳು ಬೆಂಕಿಗಾಹುತಿಯಾದವು. ಈವರೆಗೆ ಹದಿನೆಂಟು ಮಂದಿ ಮೃತಪಟ್ಟು ನೂರೈವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ಭಾರತ ಸಂದರ್ಶನದ ಸಮಯವಾದ್ದರಿಂದ ಕ್ಷಮಿಸುತ್ತಿದ್ದೇವೆ. ಮೂರು ದಿವಸಗಳಲ್ಲಿ ಪೌರತ್ವ ವಿರೋಧಿ ಪ್ರತಿಭಟನಾಕಾರರನ್ನು ತೆರವುಗೊಳಿಸಲು ದಿಲ್ಲಿ ಪೊಲೀಸರಿಗೆ ಕಪಿಲ್ ಶರ್ಮ ಅಂತಿಮ ಎಚ್ಚರಿಕೆ ನೀಡಿ ರವಿವಾರ ಹೇಳಿಕೆ ನೀಡಿದ್ದರು.

“ಇದು ದಿಲ್ಲಿ ಪೊಲೀಸರಿಗಿರುವ ಕೊನೆಯ ಎಚ್ಚರಿಕೆಯಾಗಿದೆ. ಕಿವಿಗೊಟ್ಟು ಕೇಳದಿದ್ದರೆ ನಿಮ್ಮ ಮಾತುಗಳಿಗೆ ನಾವು ಕಿವಿಗೊಡುವುದಿಲ್ಲ . ಕೇವಲ ಮೂರು ದಿವಸ ಮಾತ್ರ” ಎಂದು ಡಿಸಿಪಿ ವೇದ್‍ಪ್ರಕಾಶರ ಮುಂದೆ ಕಪಿಲ್ ಮಿಶ್ರ ಬೆದರಿಕೆ ಹಾಕಿದ್ದರು. ನಂತರ ಟ್ರಂಪ್ ಮರಳುವ ಮೊದಲೇ ದಿಲ್ಲಿ ಉರಿಯಿತು. ಇವರ ಅನುಯಾಯಿಗಳು ಹಿಂಸಾಚಾರಕ್ಕೆ ಇಳಿದರು. ರವಿವಾರ ಬೆಳಗ್ಗಿನಿಂದ ಕೈಯಲ್ಲಿ ಆಯುಧ ಮತ್ತು ಕಲ್ಲುಗಳೊಂದಿಗೆ ಪ್ರತಿಭಟನಾಕಾರರ ಮೇಲೆ ಎರಗಿದರು.