ತಜ್ಞರು ಏನು ಹೇಳುತ್ತಾರೆ ಕೇಳಿ… ಕೊರೋನ 3ನೇ ತರಂಗ ಬಾಧಿಸುವುದು ಮಕ್ಕಳಿಗೆ?

0
594

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೊರೋನ ಎರಡನೇ ತರಂಗ ಭೀಕರವಾಗಿ ಮುಂದುವರಿಯುತ್ತಿದ್ದು ತಿಂಗಳು ಕಳೆದ ನಂತರ ಮೂರನೆ ತರಂಗ ಬರಲಿದೆ. ಮೂರನೇ ಅಲೆಯು ಅತ್ಯಂತ ಹೆಚ್ಚು ಮಕ್ಕಳನ್ನು ಬಾಧಿಸಲಿದೆ. ಹಿರಿಯರು ವ್ಯಾಕ್ಸಿನ್ ಸ್ವೀಕರಿಸಿದ್ದು ಮಕ್ಕಳು ಇನ್ನೂ ಆದ್ಯತಾ ಪಟ್ಟಿಯಲ್ಲಿಲ್ಲ ಅಂತಿರುವಾಗ ಈ ಭೀತಿ ಜನರನ್ನು ಕಾಡುತ್ತಿದೆ.

ಕೆಲವು ತಜ್ಞರ ಅಭಿಪ್ರಾಯಗಳು ಈ ರೀತಿಯಿವೆ-

ಮಕ್ಕಳಲ್ಲಿ ಕೊರೊನ ವ್ಯಾಪಿಸುವುದು ತೀವ್ರಗೊಳ್ಳಬಹುದೆಂದು ಹೇಳಲಾಗದು. ರೋಗ ವ್ಯಾಪಿಸುವುದು ಹೆಚ್ಚು ಮಕ್ಕಳಲ್ಲಿ ಗೋಚರಿಸಬಹುದಾದರೂ ಗಂಭೀರವಾಗುವ ಸಾಧ್ಯತೆ ಕಡಿಮೆಯಾಗಿದೆ. ಅಮೆರಿಕದಲ್ಲಿ ಮಕ್ಕಳನ್ನು ನೋಡಿದರೆ ಹಿರಿಯರಲ್ಲಿಯೇ ನಲ್ವತ್ತು ಪಟ್ಟು ಸಾವಿನ ದರವಿದೆ.
-ಡಾ.ರಾಹುಲ್ ನಾಗ್‍ಪಾಲ್
(ಪೋಟ್ರ್ಸ್ ಆಸ್ಪತ್ರೆ ಪೀಡಿಯಾಟ್ರಿಕ್ಸ್ ನಿಯೊ ನ್ಯೂರೋಲಜಿ ಡೈರಕ್ಟರ್)

ಎರಡನೇ ತರಂಗದಲ್ಲಿ ಮಕ್ಕಳಲ್ಲಿ ರೋಗ ಹರಡಿದರೂ ಅಪಾಯಕರವಾಗಿಲ್ಲ. ಆದ್ದರಿಂದ ರೋಗಿಯಾದ ಮಕ್ಕಳನ್ನು ಮನೆಯಲ್ಲಿರಿಸಲು ನಿರ್ದೇಶಿಸಲಾಯಿತು. ಈಗಲೂ ಇದೇ ಪರಿಸ್ಥಿತಿ ಇದೆ. ಆದರೆ ನಾವು ಎಲ್ಲದ್ದಕ್ಕೂ ಸಿದ್ಧವಾಗಿರಬೇಕಾಗಿದೆ. ವೈರಸ್ ಹೇಗೆ ವರ್ತಿಸುತ್ತದೆ ಎಂದು ಹೇಳಲಾಗದು. ನಂತರ ವಿಷಾದ ಪಡುವ ಬದಲು ಸುರಕ್ಷಿತವಾಗಿರುವುದು ಉತ್ತಮ. ಮಕ್ಕಳನ್ನು ಹೆಚ್ಚು ಬಾಧಿಸುತ್ತದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ.