ಅಲ್‍ ಜಝೀರ ಚ್ಯಾನೆಲ್‍ಗೆ ನಿಯಂತ್ರಣ ಹೇರಿ ಹಿಂದೆಗೆದ ಯೂಟ್ಯೂಬ್

0
8205

ಸನ್ಮಾರ್ಗ ವಾರ್ತೆ

ಜೆರುಸಲೇಮ್: ಗಾಝದಲ್ಲಿ ಇಸ್ರೇಲ್ ನಡೆಸುತ್ತಿರುವ ಮನುಷ್ಯರ ಮಾರಣಹೋಮದ ಕುರಿತು ನೈಜ ವರದಿಯನ್ನು ಕೂಡಲೇ ನೀಡುತ್ತಿರುವ ಜಗತ್ಪ್ರಸಿದ್ಧ ಅಲ್ ಜಝೀರ ಟಿವಿ ಚ್ಯಾನೆಲ್‍ಗೆ ಯೂಟ್ಯೂಬ್ ನಿಯಂತ್ರಣ ಹೇರಿತ್ತು. ಅಲ್‍ಜಝೀರ ಚ್ಯಾನೆಲ್‍ನ ಅರೇಬಿಕ್ ಲೈವ್ ಸ್ಟ್ರೀಂ ನೋಡದಂತೆ ಬುಧವಾರ ಬೆಳಗ್ಗಿನಿಂದ ನಿಷೇಧವಿತ್ತು. ಆದರೆ, ವ್ಯಾಪಕ ಟೀಕೆಗೆ ತುತ್ತಾದ ಬಳಿಕ ತನ್ನ ನಿಯಂತ್ರಣವನ್ನು ಯುಟ್ಯೂಬ್ ಹಿಂಪಡೆದುಕೊಂಡಿದೆ. ಯೂಟ್ಯೂಬ್ ಗೂಗಲ್ ಮಾಲಕತ್ವವನ್ನು ಹೊಂದಿದೆ.

ಚ್ಯಾನೆಲ್‍ನ ಸಾರ ಅನುಚಿತವಾಗಿರಬಹುದು. ಲೈವ್ ಸ್ಟ್ರೀಂ ನೋಡುವುದು ಉಪಯೋಗಿಸುವವರ ಪ್ರಾಯ ಮಿತಿ ಪರಿಶೀಲಿಸಬೇಕಾಗುತ್ತದೆ ಎಂದು ಸೂಚಿಸುವ ಸಂದೇಶ ಅಲ್ ಜಝೀರ ಅರೇಬಿಕ್ ಯೂಟ್ಯೂಬ್ ಪುಟದಲ್ಲಿ ಪ್ರತ್ಯಕ್ಷವಾಗಿತ್ತು. ಅಲ್ ಜಝೀರ ಆಕ್ರಮಣ ದೃಶ್ಯಗಳ ಸಹಿತ ಸಾರಾಂಶವವೆಲ್ಲವೂ ಎಲ್ಲ ವೀಕ್ಷಕರಿಗೆ ಸೂಕ್ತವಾಗಿಲ್ಲ ನೋಡಬೇಕಾದವರು ಸೈನ್ ಇನ್ ಮಾಡಿ ತಮಗೆ ಹದಿನೆಂಟು ವಯಸ್ಸಿಗಿಂತ ಮೇಲ್ಪಟ್ಟಿದೆ ಎಂದು ದೃಢೀಕರಣ ಕೊಡಬೇಕೆಂದು ಸೂಚಿಸಲಾಗಿತ್ತು. ಯಾಕೆ ನಿಷೇಧ ಹೇರಿದ್ದೀರಿ ಎಂದು ಯುಟ್ಯೂಬ್‍ಗೆ ಅಲ್ ಜಝೀರದ ಅಧಿಕಾರಿಗಳು ಸಂಪರ್ಕಿಸಿದಾಗ ಈ ರೀತಿ ಯುಟ್ಯೂಬ್ ಅಧಿಕಾರಿಗಳು ಉತ್ತರಿಸಿದ್ದರು.

ಆದರೆ ಸಂಜೆಯ ಹೊತ್ತಿಗೆ ನಿಯಂತ್ರಣ ತೆಗೆದು ಹಾಕಲಾಗಿದೆ ಎಂದು ತಿಳಿಸಲಾಯಿತು. ಅಕ್ರಮ ದೃಶ್ಯಗಳನ್ನು ಪ್ರಸಾರ ಮಾಡಿದ್ದರಿಂದ ಅಲ್ ಜಝೀರ ಅರೇಬಿಕ್ ಲೈವ್ ವಯೋಮಾನ ನಿಯಂತ್ರಣ ವಿಧಿಸಿದ್ದು, ಆದರೆ ಈಗ ಅಂತಹ ಸಾರಾಂಶ ಇಲ್ಲ ಆದ್ದರಿಂದ ಪ್ರಸ್ತುತ ವಯೋ ನಿರ್ಬಂಧ ತೆರವುಗೊಳಿಸಲಾಗಿದೆ ಎಂದು ಹೇಳಲಾಯಿತು. ಉಚಿತ ಮತ್ತು ವಿಶ್ವಾಸನೀಯವಾದ ವಿವರಗಳನ್ನು ಬಯಸುವ ವೀಕ್ಷಕರಿಗೆ ಇರುವ ಒಂದು ಪ್ಲಾಟ್‍ಫಾರ್ಮ ಆಗಿ ಯುಟ್ಯೂಬ್ ಮುಂದುವರಿಯಲಿದೆ ಎಂದೂ ತಿಳಿಸಲಾಗಿದೆ.

ಫೆಲಸ್ತೀನಿನಲ್ಲಿ ಇಸ್ರೇಲ್ ನಡೆಸುತ್ತಿರುವ ಮಾನವಹಕ್ಕು ಉಲ್ಲಂಘನೆಯನ್ನು ಹೊರ ಜಗತ್ತು ನೋಡದಿರುವಂತಾಗಲು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್‍ಗಳು ಒಟ್ಟಾಗಿ ನಡೆಸುತ್ತಿರುವ ಸಂಚಿನ ಭಾಗ ಇದೆಂದು ಆಕ್ಟಿವಿಸ್ಟ್‌ಗಳು ಮತ್ತು ಪ್ರಮುಖ ಪತ್ರಕರ್ತರು ಆರೋಪಿಸಿದ್ದರು. ಈ ತಿಂಗಳು ಫೇಸ್‍ಬುಕ್ ಮತ್ತು ಅದರ ಸಹ ಸಂಸ್ಥೆ ಇನ್ಸ್ಟಾಗ್ರಾಂ ಜೆರುಸಲೇಮ್‌ನ ಶೇಕ್ ಜರ್ರಾಹ್‍ನ ದಾಳಿಯ ಕುರಿತ ದೃಶ್ಯ ಮತ್ತು ವರದಿಗಳು, ಅಂತಹ ಖಾತೆಗಳನ್ನು ವ್ಯಾಪಕವಾಗಿ ತೆರುವುಗೊಳಿಸಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಆರೋಪಿಸಿದ್ದಾರೆ.