ಸನ್ಮಾರ್ಗ ವಾರ್ತೆ
ರೋಹ್ಟಕ್: ಹರಿಯಾಣದ ರೋಹ್ಟಕ್ ಕುಸ್ತಿ ತರಬೇತಿ ಕೇಂದ್ರದಲ್ಲಿ ಗುಂಡು ಹಾರಾಟ ನಡೆದಿದ್ದು, ಐದು ಮಂದಿ ಮೃತಪಟ್ಟಿದ್ದಾರೆ. ಕುಸ್ತಿ ತರಬೇತುದಾರ ಮತ್ತು ಅವರ ಪತ್ನಿ ಮೃತಪಟ್ಟವರಲ್ಲಿ ಒಳಗೊಂಡಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕುಸ್ತಿ ತರಬೇತುದಾರ ಮನೋಜ್, ಪತ್ನಿ ಸಾಕ್ಷಿ, ಇನ್ನೊಬ್ಬ ತರಬೇತಿದಾರ ಸತೀಶ್, ಪ್ರದೀಪ್ ಫೌಜಿ, ಪೂಜ ಮೃತಪಟ್ಟಿರುವ ನತದೃಷ್ಟರಾಗಿದ್ದು, ಮನೋಜ್ರ ಮೂರುವರ್ಷದ ಮಗ ಗಾಯಗೊಂಡಿದ್ದಾನೆ. ತರಬೇತಿದಾರರ ನಡುವ ನಡೆದ ವಿವಾದ ಗುಂಡು ಹಾರಾಟಕ್ಕೆ ಕಾರಣವಾಗಿತ್ತು. ಕುಸ್ತಿ ತರಬೇತಿದಾರ ಸುಕ್ವೀಂದರ್ ಸಿಂಗ್ ಎಂಬಾತ ಇವರ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸರು ಮತ್ತು ಫಾರೆನ್ಸಿಕ್ ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದು, ಗಾಯಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












