ನ. 22: ರಾಜ್ಯ ಮಟ್ಟದ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಬಹುಭಾಷಾ ಕವಿಗೋಷ್ಠಿ

0
851

ಸನ್ಮಾರ್ಗ ವಾರ್ತೆ-

ರಾಜ್ಯ ಮಟ್ಟದ ಮುಸ್ಲಿಂ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಏ ಕೆ ಕುಕ್ಕಿಲ ಅವರ ಎಣ್ಣೆ ಬತ್ತಿದ ಲಾಟೀನು ಕೃತಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಬಹುಭಾಷಾ ಕವಿಗೋಷ್ಠಿಯು ನ. 22ರಂದು ಶುಕ್ರವಾರ ಸಂಜೆ 6 ನಡೆಯಲಿದೆ ಎಂದು ರಾಜ್ಯ ಮುಸ್ಲಿಂ ಲೇಖಕರ ಸಂಘವು ತಿಳಿಸಿದೆ.

ದಿವಂಗತ ಯು ಟಿ ಫರೀದ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಮಾಜಿ ಸಚಿವ ಯು ಟಿ ಕಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಂಗಳೂರು ನಗರದ ಹಂಪನಕಟ್ಟೆಯಲ್ಲಿರುವ ಮಸ್ಜಿದುನ್ನೂರ್ ಬಳಿಯ ಐ ಎಂ ಎ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಅಲ್ಲದೆ, “ಜಾತ್ಯತೀತ ಭಾರತದ ಮುಂದಿರುವ ಸವಾಲುಗಳು” ಎಂಬ ವಿಷಯದಲ್ಲಿ “ವಾರ್ತಾ ಭಾರತಿ” ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆಯವರು ದಿಕ್ಸೂಚಿ ಭಾಷಣ ಮಾಡಲಿದ್ದು, ಆ ಬಳಿಕ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಇದರಲ್ಲಿ ಖ್ಯಾತ ಕವಿಗಳಾದ ಮುಹಮ್ಮದ್ ಬಡ್ಡೂರು, ರಾಜಾರಾಮ್ ವರ್ಮಾ, ವಿಟ್ಲ, ಜಲೀಲ್ ಮುಕ್ರಿ, ಮಲ್ಲಿಕಾ ಅಜಿತ್ ಶೆಟ್ಟಿ, ಸಿದ್ದಕಟ್ಟೆ, ಮುಹಮ್ಮದ್ ಷರೀಫ್, ನಿರ್ಮುಂಜೆ, ಆಯಿಷಾ ಉಳ್ಳಾಲ್, ಮಿಸ್ರಿಯಾ ಇಸ್ಮತ್ ಫಜೀರ್, ಮೌ! ಇಮ್ರಾನುಲ್ಲಾ ಖಾನ್ ಮನ್ಸೂರಿ ಭಾಗವಹಿಸಲಿದ್ದು, ಬಿ ಎ ಮಹಮ್ಮದ್ ಅಲಿ ಕವಿಗೋಷ್ಠಿಯನ್ನು ನಡೆಸಿಕೊಡಸಲಿದ್ದಾರೆ. ಸಂಘದ ಅಧ್ಯಕ್ಷ ಉಮರ್ ಯು ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.