ಯೋಗಿ ಸರಕಾರ ಕೋಟ್ಯಂತರ ರೂಪಾಯಿ ಜಾಹೀರಾತಿಗೆ ನೀಡಿ ವೈಫಲ್ಯವನ್ನು ಮರೆಮಾಚಲು ಯತ್ನಿಸುತ್ತಿದೆ- ಕಾಂಗ್ರೆಸ್ ಆರೋಪ

0
465

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಕೋಟ್ಯಂತರ ರೂಪಾಯಿ ಜಾಹೀರಾತು ಮತ್ತು ಇವೆಂಟ್ ಮ್ಯಾನೆಜ್‍ಮೆಂಟ್‍ಗೆ ಖರ್ಚು ಮಾಡಿ ತನ್ನ ವೈಫಲ್ಯವನ್ನು ಅಡಗಿಸಿಡುತ್ತಿದೆ ಮತ್ತು ಜನರನ್ನು ವಂಚಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪಿಆರ್ ಕೆಲಸದ ಮೂಲಕ ಹಾರ್ಡಿಂಗ್, ಬಂಟಿಂಗ್, ಇವೆಂಟ್ ಮ್ಯಾನೇಜ್‍ಮೆಂಟ್ ಸಹಾಯದಿಂದ ಯೋಗಿ ಸರಕಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಅಜಯ್‍ ಕುಮಾರ್ ಲಲ್ಲು ಆರೋಪಿಸಿದರು.

ಆದರೆ ರಾಜ್ಯದ ಪರಿಸ್ಥಿತಿ ಹಿಂದಿಗಿಂತ ಎಷ್ಟು ಹೆಚ್ಚು ಕೆಟ್ಟದಾಗಿದೆ. ತಪ್ಪು ಪ್ರಚಾರ, ರೈತರ ಘೋಷಣೆಗಳನ್ನು ಉಪಯೋಗಿಸಿ ಬಿಜೆಪಿ ರಂಗಪ್ರವೇಶಿಸಿತ್ತು. ಆದರೆ ಜನರು ಬಿಜೆಪಿಯೊಂದಿಗೆ ತೋರಿಸಿದ ಪ್ರಮಾಣಿಕತೆಗೆ ಪ್ರತಿಯಾಗಿ ಒಂದೇ ಒಂದು ಭರವಸೆಯನ್ನು ಸರಕಾರ ಈಡೇರಿಸಿಲ್ಲ.

ಬಿಜೆಪಿ ಸರಕಾರದ ಕೆಟ್ಟ ಆಡಳಿತದಲ್ಲಿ ಸಮಾಜವಾದಿ ಪಾರ್ಟಿ, ಬಿಎಸ್ಪಿ ಮೌನವಹಿಸಿದೆ ಎಂದು ಲಲ್ಲು ಬೆಟ್ಟು ಮಾಡಿದರು. ಈ ಎರಡು ಪಾರ್ಟಿಯು ಬಿಜೆಪಿಯೊಂದಿಗೆ ಸಮನ್ವಯ ಸಾಧಿಸಿಕೊಂಡಿದೆ. ಐದು ವರ್ಷದಲ್ಲಿ 70ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವೆ ಎಂದಿದ್ದ ಬಿಜೆಪಿ ವಿಫಲವಾಗಿದೆ. ಕೇವಲ ಐದು ಲಕ್ಷ ಮಂದಿಗೆ ಮಾತ್ರ ಉದ್ಯೋಗ ಕೊಡಲು ಅವರಿಂದಾಗಿದೆ ಎಂದು ಯೋಗಿಯೇ ಒಪ್ಪಿಕೊಂಡಿದ್ದಾರೆಂದು ಲಲ್ಲು ಹೇಳಿದರು.