✍️ ಅರಫಾ ಮಂಚಿ
ಸರಕಾರದ ಫ್ಯಾಶಿಸ್ಟ್ ಮುಖ:
ದಿಲ್ಲಿಯ ಜಂತರ್ ಮಂತರ್ನಲ್ಲಿ ಜುಲೈ 20ನೇ ತಾರೀಕು ವಿದ್ಯಾರ್ಥಿ ಯುವಜನರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಮತ್ತು ದಬ್ಬಾಳಿಕೆಯು ಫ್ಯಾಶಿಸ್ಟ್ ವಿಕೃತ ಮುಖ ಆಗಿದೆ. ದಿಲ್ಲಿ ಪೊಲೀಸರು ಮತ್ತು ಸಿಆರ್ಪಿಎಫ್ ಬಲ ಪ್ರಯೋಗಿಸಿದ್ದಾರೆ. ಶುದ್ಧ ಫ್ಯಾಶಿಸ್ಟ್ ಶೈಲಿಯಲ್ಲಿ ಲಾಠಿಚಾರ್ಜು ನಡೆಸಿದ್ದಾರೆ ಮತ್ತು ಅಶ್ರುವಾಯು ಸಿಡಿಸಿದ್ದಾರೆ. ಅಲ್ಲದೇ, ಸಿವಿಲ್ ಡ್ರೆಸ್ನಲ್ಲಿದ್ದವರು ಲಾಠಿ ಚಲಾಯಿಸಿದ್ದಾರೆಂದು ವರದಿಯಾಗಿದೆ. ಇವಕ್ಕೆಲ್ಲ ಹೆದರದೆ ವಿದ್ಯಾರ್ಥಿಗಳು “ಬಾಗ್ ಮೋದಿ ಬಾಗ್” ಎಂದು ಘೋಷಣೆ ಕೂಗುತ್ತಿದ್ದಾರೆ. ದೇಶದ ಹಿಂದುತ್ವವಾದಿ ಸರಕಾರ ಮುಸ್ಲಿಮರನ್ನು ನಾನಾ ಆಯಾಮಗಳಿಂದ ಬಡಿದು ತುಳಿದು ಮಾಡಿದಂತೆ ವಿದ್ಯಾರ್ಥಿಗಳ ಮೇಲೆಯೂ ಪ್ರಯೋಗಕ್ಕಿಳಿಯಿತು. ಆದರೆ ವಿಫಲವಾಯಿತು.
ದಿಲ್ಲಿಯಲ್ಲಿ ನಡೆದ ಘಟನೆಗಳು ಬಹುತೇಕ ದೇಶವನ್ನೇ ಕೆರಳುವಂತೆ ಮಾಡಿದೆ. ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗಳನ್ನು ದೇಶ ಸಹಿಸದು. ಇನ್ನೊಂದು ಕಡೆ ಮೋದಿ ಸರಕಾರದ ಮೇಲೆ ಚಂದಾ ಚೋರಿ ಪ್ರಕರಣದಲ್ಲಿ ರಾಮಭಕ್ತರು ಕೋಪದಲ್ಲಿದ್ದಾರೆ. ಈಗ ವಿದ್ಯಾರ್ಥಿಗಳ ವಿಚಾರದಲ್ಲಿ ಅದು ಎಡವಟ್ಟು ಮಾಡಿಕೊಂಡಿತು. ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದೇ ಬಿಜೆಪಿಗೆ ಎನ್ಡಿಎ ಕೂಡ ಬುದ್ಧಿ ವಾದ ಹೇಳತೊಡಗಿದೆ. ವಿದ್ಯಾರ್ಥಿಗಳ ಆಕ್ರೋಶ ನೇಪಾಳದಲ್ಲಿ, ಬಾಂಗ್ಲಾದೇಶದಲ್ಲಿ ಅವರು ತಂದಿಟ್ಟ ಅವಸ್ಥೆ ಕೂಡ ಕಾರಣ ಇರಬಹುದು. ಅಲ್ಲಿನಂತೆ ಇಲ್ಲಿಯೂ ಸರಕಾರ ಬಿದ್ದು ಹೋಗುವ ಭಯ NDA ಗೆ ಕಾಡುವುದು ತಪ್ಪಲ್ಲ. ಬಹುಶಃ ಅಧಿಕಾರ ಕಳೆದುಕೊಳ್ಳುವುದು ಯಾರಿಗೆ ಬೇಕು? ಜನರನ್ನು ಆಳುವುದಕ್ಕೇ ಹುಟ್ಟಿಕೊಂಡಿರುವವರು ಎಂಬ ಭ್ರಮೆಯಲ್ಲಿರುವವರಿಗೆ ಅಧಿಕಾರ ಮುಖ್ಯ. ಆದ್ದರಿಂದ ಈ ಭಯ ಬಿಜೆಪಿಯ ಹಲವರನ್ನು ಕಾಡುತ್ತಿರಬಹುದು.
ನೂರೈವತ್ತಕ್ಕೂ ಹೆಚ್ಚು ಪ್ರಶ್ನೆ ಪತ್ರಿಕೆಗಳು ಲೀಕ್ ಔಟ್ ಆಗಿರುವ ಮತ್ತು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿ ಆತ್ಮಹತ್ಯೆಗಳಿಗೆ ಕಾರಣವಾಗಿರುವ ಘಟನೆ. 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವೇ ಮಂಕಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ನೀಟ್ ಪೇಪರ್ ಲೀಕ್ ಪ್ರಶ್ನಿಸುವುದು ಅವರ ಭವಿಷ್ಯದ ದೃಷ್ಟಿಯಿಂದ ತಪ್ಪಲ್ಲ. ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಬೀಸಿದ್ದು ದೊಡ್ಡ ಎಡವಟ್ಟಾಗಿ ಮುಂದುವರಿಯುವುದು ಖಚಿತ. ಅಧಿಕಾರದ ದರ್ಪದಿಂದ ಹೆದರಿಸಿ ಬಾಯಿಮುಚ್ಚಿಸುವ ತಂತ್ರ ಎಲ್ಲ ಸಮಯದಲ್ಲೂ ನಡೆಯುವುದಿಲ್ಲ ಎಂಬುದನ್ನು ಖಂಡಿತ ವಿದ್ಯಾರ್ಥಿಗಳು ಜಂತರ್ ಮಂತರ್ನಿಂದ ಸರಕಾರಕ್ಕೆ ಅರ್ಥ ಮಾಡಿ ಕೊಟ್ಟಿದ್ದಾರೆ.
ಗುಜರಾತಿನ ಸರ್ಕ್ಯೂಲರ್:
ಇಂತಹದೇ ಫ್ಯಾಸಿಸಂ ಮುಖ ಗುಜರಾತ್ ಸರಕಾರದ ಪೊಲೀಸರು ಹೊರಡಿಸಿದ ಸರ್ಕ್ಯೂಲರ್ನಿಂದಲೂ ಹೊರ ಇಣುಕಿದೆ. ಗುಜರಾತ್ ಪೊಲೀಸ್ ಇಂಟೆಲಿಜೆನ್ಸ್ ಸೂಪ ರಿಂಟೆಂಡೆಂಟ್ ಪ್ರಫುಲ್ ವಾನಿ ಹೆಸರಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಆಂಟಿ ರ್ಯಾಡಿಕಲೈಶೇಶನ್ ಸೆಲ್ ರಹಸ್ಯ ಸ್ವಭಾವದ ಒಂದು ನೋಟಿಸ್ ಮತ್ತು ಒಂದು ಚೆಕ್ಲಿಸ್ಟ್ ಹೊರಡಿಸಿತ್ತು. ಅದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿದೆ. ತೀವ್ರವಾದಕ್ಕೆ ತುತ್ತಾದ ಜನರನ್ನು ಗುರುತಿಸಿ ಕೌನ್ಸೆಲಿಂಗ್ ನಡೆಸುವ ಬಗ್ಗೆ ಆ ನೋಟಿಸು ಸೂಚನೆ ನೀಡಿದೆ. ಗಡ್ಡ ಇರಿಸುವುದು, ನಿಕಾಬ್ ಧರಿಸುವುದು, ಆಗಾಗ ಅರಬಿ ಪದ ಉಚ್ಚರಿಸುವುದು, ಅರಬಿಕ್ ಕಾಲೇಜುಗಳು ಮದ್ರಸಗಳಿಗೆ ಭೇಟಿ ನೀಡುವುದು, ಮಸೀದಿಯಲ್ಲಿ ಇಹ್ತಿಕಾಫ್ (ಜಪಕ್ಕೆ ಕುಳಿತುಕೊಳ್ಳುವುದು) ಇಸ್ಲಾಮೀ ಹೊಣೆಗಾರಿಕೆ ಹೇಳಿ ಹಠಾತ್ತನೆ ಕಲಿಕೆ ಅಥವಾ ಕೆಲಸ ತೊರೆಯುವುದು ಇತ್ಯಾದಿಗಳು. ಸರ್ಕ್ಯುಲರ್ನಲ್ಲಿ ಗುಜರಾತ್ ಪೊಲೀಸರ ಅಧಿಕೃತ ಮೊಹರು ಕೂಡ ಇದೆ. ವಿಪಿಎನ್ ಆಪ್ ಡೌನ್ಲೋಡ್, ಸಿಗ್ನಲ್, ಎಲಿಮೆಂಟ್ ಮುಂತಾದ ಮೆಸೆಜಿಂಗ್ ಆಪ್ ಉಪಯೋಗಿಸುವುದು ಕೂಡ ಭಯೋತ್ಪಾದೀಕರಣ ಅಥವಾ ತೀವ್ರವಾದಿತ್ವದ ಲಕ್ಷಣಗಳೆಂದು ಅವರಲ್ಲಿ ಹೆಸರಿಸಲಾಗಿದೆ.
ಬಿಜೆಪಿ ಸರಕಾರಕ್ಕೆ ಮುಸ್ಲಿಮರೆಂದರೆ ಇಷ್ಟು ಹೆದರಿಕೆ ಇದೆ. ಮುಸ್ಲಿಂ ಐಡೆಂಟಿಟಿಯೇ ಗಡ್ಡ, ಟೋಪಿ ಇನ್ಶಾ ಅಲ್ಲಾಹ್ ಮಾಷಾ ಅಲ್ಲಾಹ್ ಮುಸ್ಲಿಮರ ಜೀವನದಲ್ಲಿ ಅವಿಭಾಜ್ಯ ಅಂಗವೇವಾಗಿರುತ್ತದೆ. ಮಾತ್ರವಲ್ಲ ಭಯೋತ್ಪಾದನೆ ತೀವ್ರವಾದಗಳಿಂದ ದೂರ ನಿಲ್ಲಬೇಕೆಂದು ದೇಶದ ಪ್ರಮುಖ ಮುಸ್ಲಿಮ್ ವಿದ್ವಾಂಸರು ಮತ್ತು ಸಂಘಟನೆಗಳು ಈಗಾಗಲೇ ಘೋಷಿಸಿವೆ. ಹಾಗಿದ್ದೂ ಇಂತಹದೊಂದು ಸಂದೇಹವನ್ನು ಜನರಿಗೆ (ಮುಸ್ಲಿಮರಿಗೂ) ಸುರಕ್ಷೆ ನೀಡ ಬೇಕಾದ ಪೊಲೀಸರೇ ಸಮಾಜಕ್ಕೆ ಎರಚುತ್ತಿದ್ದಾರೆ. ಅವರ ಸಂದೇಹ ಇಷ್ಟಕ್ಕೆ ನಿಂತಿಲ್ಲ. ಭಯೋತ್ಪಾದನೆಯ ಸೈದ್ಧಾಂತಿಕ ಹಿನ್ನೆಲೆಯ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವರೇ ಇತ್ಯಾದಿ ವಿವರಗಳನ್ನೊಳಗೊಂಡ ಮದ್ರಸಾ ಮೌಲವಿಗಳ ಡೈರೆಕ್ಟರಿ ತಯಾರಿಸಲು ಸೂಚಿಸಲಾಗಿದೆ. ಅಂದರೆ ಫ್ಯಾಸಿಸಂ ಸಮಾಜವನ್ನು ವಿಭಜಿಸಿ ಆಳುತ್ತದೆ. ಕಡಿಮೆ ಸಂಖ್ಯೆಯಲ್ಲಿರುವವರು ದೊಡ್ಡ ಸಂಖ್ಯೆಯಲ್ಲಿರುವವರಿಗೆ ಅಪಾಯ ಎಂಬ ಭಾವನೆಯನ್ನು ಬಿತ್ತಿ ಸಹ ಪ್ರಜೆಗಳ ನಡುವೆ ಗುಮಾನಿ ಹುಟ್ಟಿಕೊಳ್ಳುವಂತೆ ಮಾಡುತ್ತದೆ. ಯಹೂದಿಗಳನ್ನು ಬೇಟೆಯಾಡಿದ ನಾಝಿ ನಮ್ಮನ್ನು ನೆನಪಿಸುವಂತಿದೆ ಗುಜರಾತ್ ಪೊಲೀಸರ ಸರ್ಕ್ಯುಲರ್. ಮುಸ್ಲಿಮರಿಂದ ತಮ್ಮ ಅಧಿಕಾರಕ್ಕೆ ಅಪಾಯ ಇದೆ ಎಂಬ ಭ್ರಮೆಯಲ್ಲಿ ಹಿಂದುತ್ವವಾದಿಗಳಿದ್ದಾರೆ.
ಸರಕಾರಕ್ಕೆ ಫ್ಯಾಶಿಸ್ಟ್ ಮುಖ ಇಲ್ವಾ?:
ಮುಸ್ಲಿಮರು ಮತ್ತು ಕ್ರೈಸ್ತರಿಗೆ ಸಾಮಾಜಿಕ ಬಹಿಷ್ಕಾರ ಹಾಕಲು ಕರೆ ನೀಡುವ ಸಮ್ಮೇಳನಗಳು, ಭಾಷಣಗಳು ಮೋದಿ ಸರಕಾರದ ಅವಧಿಯಲ್ಲಿ ಗೋದಿ ಮೀಡಿಯಾದ ಚಾವಡಿಯಲ್ಲೂ ಸಾಮಾನ್ಯ ಎನಿಸಿಕೊಂಡಿದೆ. ಇದೂ ಫ್ಯಾಸಿಸಂನ ಒಂದು ಮುಖವಾಗಿದೆ. ಗುಜರಾತಿನಲ್ಲಿ 2002 ರಲ್ಲಿ ಈ ಶತಮಾನದಲ್ಲೇ ದೇಶ ಕಂಡ ಬಹು ದೊಡ್ಡ ವಂಶ ಹತ್ಯೆ ನಡೆದಿತ್ತು. ಕೇಂದ್ರದಲ್ಲಿರುವ ಮೋದಿ ಆಡಳಿತವು ಎಷ್ಟೋ ಪ್ರತಿಭಟನೆಗಳನ್ನು ಹತ್ತಿಕ್ಕಿದೆ. ಉತ್ತರಪ್ರದೇಶದ ಯೋಗಿ ಸರಕಾರ ಕೆಲವು ಮುಸ್ಲಿಮರ ಮನೆಯ ಮೇಲೆ ಬುಲ್ಡೋಝಿಂಗ್ ಮಾಡಿದೆ. ಉತ್ತರ ಪ್ರದೇಶದ್ದು ಅಝಂ ಖಾನ್ರ ಜೌಹರ್ ಯುನಿವರ್ಸಿಟಿಯ ಬುಲ್ಡೋಝಿಂಗ್ಗೆ ಕ್ಷಣಗಣನೆ ನಡೆಯುತ್ತಿದೆ. ಈಗ ಗುಜರಾತಿನ ಭೂಪೇಂದ್ರ ಪಟೇಲ್ ಸರಕಾರದ ಪೊಲೀಸರು ಹೊರಡಿಸಿದ ಮುಸ್ಲಿಮ್ ವಿರೋಧಿ ಸರ್ಕ್ಯುಲರ್ ಮತ್ತೊಂದು ಹತ್ಯಾಕಾಂಡಕ್ಕೆ ಮುನ್ನುಡಿ ಬರೆಯುವಂತಿದೆ. ಬಿಜೆಪಿ ಆಡಳಿತದಲ್ಲಿ ಹೀಗೆ ಫ್ಯಾಸಿಸಮ್ಮಿನ ತಾಂಡವ ಮುಸ್ಲಿಮರು, ಕ್ರೈಸ್ತರು ಮತ್ತು ವಿದ್ಯಾರ್ಥಿಗಳನ್ನು ಬೆನ್ನಟ್ಟಿದೆ.
ಸರಕಾರದ ಉದ್ದೇಶ ಏನು?:
ಫ್ಯಾಸಿಸಂನ ಉದ್ದೇಶವೇ ರೂಲಿಂಗ್ ಮತ್ತು ಪವರ್ ತಮ್ಮ ಬಳಿ ಇಟ್ಟುಕೊಳ್ಳುವುದು. ಅದಕ್ಕಾಗಿ ಮರ್ದನಕ್ಕಿಳಿಯುವುದು. ಪ್ರಶ್ನಿಸಿದರೆ ದಮನಿಸುವುದು. ಸರಕಾರಕ್ಕೆ ಇಷ್ಟ ಇಲ್ಲದವರು ಮತ್ತು ಸರಕಾರದ ತಪ್ಪು ನೀತಿಗಳಿಗೆ ಸವಾಲಾಗಿರುವವರ ವಿರುದ್ಧ ಸುಳ್ಳಾರೋಪ ಹೊರಿಸಿ ನಕಲಿ ಕೇಸಿನಲ್ಲಿ ಸಿಲುಕಿಸುವುದಕ್ಕಾಗಿ ದೌರ್ಜನ್ಯದೊಂದಿಗೆ ಅಧಿಕಾರ ಶಕ್ತಿಯನ್ನು ಬಳಸಲಾಗುತ್ತಿದೆ.
ಕುಚ್ ನಯಾ ಹೋನೆ ವಾಲ ಹೈ:
ಮತ್ತೆ ಜಂತರ್ ಮಂತರ್ ವಿಚಾರವನ್ನೇ ಎತ್ತಿಕೊಳ್ಳುವುದಾದರೆ ಪ್ರತಿಭಟನಕಾರರಿಗೆ ಜಾತಿ ಇಲ್ಲ. ನಿನ್ನೆ ವರೆಗೆ ಸಿಜೆಪಿ ಹೋರಾಟವಾಗಿದ್ದ ನೀಟ್ ಲೀಕ್ ಪ್ರತಿಭಟನೆ ಪೊಲೀಸ್ ದೌರ್ಜನ್ಯದ ಫ್ಯಾಶಿಸ್ಟ್ ಮುಖ ತೆರೆದುಕೊಳ್ಳುವುದರೊಂದಿಗೆ ಮನೆ ಮನೆ ಹೋರಾಟವಾಯಿತು. ಕಲಿತರೂ ಉದ್ಯೋಗ ಇಲ್ಲ, ಪರೀಕ್ಷೆ ಬರೆದರೂ ಪೇಪರ್ ಲೀಕ್ ಆಗುತ್ತಿದೆ. ಇದು ಇಂದು ವಿದ್ಯಾರ್ಥಿಗಳ ಕುಟುಂಬಗಳನ್ನು ಕಾಡುವ ಆತಂಕವಾಗಿದೆ. ಆದ್ದರಿಂದ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸರಕಾರದ ಧೋರಣೆಯ ವಿರುದ್ಧ ಪ್ರತಿಭಟಿಸಲು ಬಂದಿದ್ದಾರೆ.
ಸರಕಾರ ವಿದ್ಯಾರ್ಥಿಗಳನ್ನು ನಡೆಸಿಕೊಂಡ ರೀತಿ ನೋಡಿ ಪ್ರಧಾನಿ ಮೋದಿ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು ಮತ್ತು ಸಮಾಜವಾದಿ ಪಾರ್ಟಿಯ ಎಲ್ಲ ಸಂಸದರು ಜಂತರ್ ಮಂತರ್ಗೆ ಭೇಟಿ ನೀಡುವುದರೊಂದಿಗೆ ವಿದ್ಯಾರ್ಥಿ ಪ್ರತಿಭಟನೆ ರಾಜಕೀಯವಾಗಿ ಹೊರಳಿಕೊಂಡಿದೆ. ಎನ್ಡಿಎ ಕೂಡ ಬಿಜೆಪಿಗೆ ಬುದ್ಧಿವಾದ ಹೇಳಿದೆ. ಶಬಾನಾ ಆಜ್ಮಿ, ಪ್ರಕಾಶ್ ರಾಜ್ ಸಹಿತ ಸಾಮಾಜಿಕ ಕಾರ್ಯಕರ್ತರು ಜಂತರ್ ಮಂತರ್ಗೆ ತೆರಳಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಮಡುಗಟ್ಟಿದೆ. ದಿಲ್ಲಿ ಮೇ ಅಬ್ ಕುಚ್ ನಯಾ ಹೋನೆ ವಾಲ ಹೈ ಪೋಸ್ಟ್ ಹಾಕಲ್ಪಡುತ್ತಿವೆ. ಹೌದು, ಹೊಸತು ಸಂಭವಿಸುತ್ತೋ ಇಲ್ಲವೋ. ಮಕ್ಕಳ ಮೇಲೆ ದಿಲ್ಲಿ ಪೊಲೀ ಸರು ದೌರ್ಜನ್ಯ ನಡೆಸಿದ್ದರಿಂದ ಸರಕಾರ ಚಳ್ಳೆಹಣ್ಣು ತಿಂದಂತಾಗಿದೆ. ಸಾಲದ್ದಕ್ಕೆ ಬಿಬಿಸಿ, ನ್ಯೂಯಾರ್ಕ್ ಟೈಮ್ಸ್, ದ ಜಪಾನ್ ಟೈಮ್ಸ್, ವಾಲ್ ಸ್ಟ್ರೀಟ್ ಜರ್ನಲ್, ಅಲ್ ಜಝೀರಾ, ಫೈನಾನ್ಸಿಯಲ್ ಟೈಮ್ಸ್ನಲ್ಲಿ ಮಕ್ಕಳ ಪ್ರೊಟೆಸ್ಟ್ ಸುದ್ದಿ ಬಂದುದರಿಂದ ಇದು ಅಂತಾರಾಷ್ಟ್ರೀಯವಾಗಿಯೂ ಮೋದಿಗಾದ ಮುಖಭಂಗವೇ ಆಗಿದೆ.
ಯಾರಿವರು? ಮುಸ್ಲಿಮರಲ್ಲ:
ಈ ಪ್ರತಿಭಟನಾಕಾರರದ್ದು ವಿದ್ಯಾರ್ಥಿ ಜಾತಿ. ಇವರಲ್ಲಿ ಬಹುತೇಕ ಎಲ್ಲರೂ ಕಾಲೇಜಿಗೆ ಹೋಗುವವರಾಗಿದ್ದಾರೆ. ಹೆತ್ತವರು ತಮ್ಮ ಭವಿಷ್ಯ ಎಂದು ಹೆಚ್ಚು ಆಸ್ಥೆಯಿಂದ ಇವರನ್ನೆಲ್ಲ ಪೋಷಿಸಿ ಬೆಳೆಸಿರುತ್ತಾರೆ. ನೀಟ್ ಸೋರಿಕೆಗೆ ವಿರುದ್ಧ ಸಿಜೆಪಿ ಹುಟ್ಟಿಕೊಂಡು ವೇದಿಕೆಯಾಗಿ ಪರಿವರ್ತನೆಯಾಗಿದೆ ಅಷ್ಟೇ. ಭವಿಷ್ಯ ಮಂಕು ಕವಿದಂತಾದ ವಿದ್ಯಾರ್ಥಿಗಳು ಸಿಜೆಪಿಯ ಸಂಸದ್ ಚಲೋ ಮಾರ್ಚ್ಗೆ ಬಂದಿದ್ದಾರೆ. ಕಾಲೇಜಿಗೆ ಹೊರಟು ಬಂದಂತೆ ಜಂತರ್ ಮಂತರ್ಗೆ ಬರುವಾಗಲೂ ಈ ಮಕ್ಕಳ ಬೆನ್ನಲ್ಲಿ ಬ್ಯಾಗು ವಾಟರ್ ಕ್ಯಾನ್ ಇತ್ತು. ಆದರೂ ಪೊಲೀಸರು ಅವರ ಮೇಲೆ ದೇಶದ್ರೋಹಿಗಳಂತೆ ದೌರ್ಜನ್ಯ ನಡೆಸಿದ್ದಾರೆ. ಆದರೂ ಬೆದರದೇ ಜಂತರ್ ಮಂತರ್ಗೆ ಬಂದು ಮತ್ತೆ ಹೋರಾಟ ಮುಂದುವರಿಸಿದ್ದಾರೆ. “ಬಾಗ್ ಮೋದಿ ಬಾಗ್” ಮೋದಿ ಎಂದು ಘೋಷಣೆ ಕೂಗುತ್ತಾ ಪ್ಲೇಕಾರ್ಡ್ ಹಿಡಿದಿದ್ದಾರೆ.












