ಭಯೋತ್ಪಾದಕರು ಮದ್ರಸದಲ್ಲಿ ಬೆಳೆಯುತ್ತಿದ್ದಾರೆ- ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್ ವಿವಾದಾತ್ಮಕ ಹೇಳಿಕೆ

0
461

ಸನ್ಮಾರ್ಗ ವಾರ್ತೆ

ಇಂದೋರ್,ಅ.21: ಭಯೋತ್ಪಾದಕರು ಮದ್ರಸದಲ್ಲಿ ಬೆಳೆಯುತ್ತಾರೆ ಎಂಬ ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್‌ರ ಹೇಳಿಕೆ ವಿವಾದ ಸೃಷ್ಟಿಸಿದೆ. ಇಂದೋರಿನಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತಿದ್ದರು. ಭಯೋತ್ಪಾದಕರು ಜಮ್ಮು-ಕಾಶ್ಮೀರವನ್ನು ಭಯೋತ್ಪಾದನೆಯ ಫ್ಯಾಕ್ಟರಿಯನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರೀಯತೆ ಪಾಲಿಸಲು ಸಾಧ್ಯವಾಗದ ಮದ್ರಸಾಗಳು, ಈಗಿನ ಶಿಕ್ಷಣ ಸಂಪ್ರದಾಯದೊಂದಿಗೆ ವಿಲೀನವಾಗಿ ಸಂಪೂರ್ಣ ಪ್ರಗತಿಯನ್ನು ಖಚಿತಪಡಿಸಬೇಕೆಂದು ಉಷಾ ಹೇಳಿದರು. ನೀವು ದೇಶದ ಒಬ್ಬ ಪ್ರಜೆಯಾಗಿದ್ದರೆ ಎಲ್ಲ ಭಯೋತ್ಪಾದಕರು ಮದ್ರಸದಲ್ಲಿ ಕಲಿತಿರುವುದನ್ನು ಕಾಣಬಹುದು. ಮಕ್ಕಳು ರಾಷ್ಟ್ರೀಯತೆಯೊಂದಿಗೆ ಜೋಡಿಸಲು ಮದ್ರಸಗಳು ವಿಫಲವಾಗಿವೆ ಎಂದು ಉಷಾ ಠಾಕೂರ್ ಹೇಳಿದರು.

ಸರಕಾರದ ನಿಯಂತ್ರಣದಲ್ಲಿರುವ ಮದ್ರಸಾಳನ್ನು ಮುಚ್ಚಬೇಕೆಂದು ಅಸ್ಸಾಂ ವಿತ್ತ ಸಚಿವ ಹಿಮಂದ್ ಬಿಸ್ವ ಶರ್ಮ ಕಳೆದ ದಿವಸ ಹೇಳಿದ್ದರು. ಈ ವಿಷಯವನ್ನು ಬೆಟ್ಟು ಮಾಡಿ ಇಂದೋರಿನ ಬಿಜೆಪಿ ಶಾಸಕಿ ಕೂಡ ಆಗಿರುವ ಉಷಾ ಠಾಕೂರ್ ವಿವಾದಿತ ಹೇಳಿಕೆ ನೀಡಿದ್ದಾರೆ.

ಬೋಡೊ ಲೆಂಡ್ ಪ್ರಾಂತ್ಯ ಚುನಾವಣೆ ಮತ್ತು ಮುಂದಿನ ವರ್ಷ ಅಸ್ಸಾಂ ವಿಧಾನಸಭಾ ಚುನಾವಣೆ ನಡೆಯಲಿದೆ ಇದಕ್ಕೆ ಮುಂಚಿತವಾಗಿ ವಂಶ-ಭಾಷೆಯ ಘರ್ಷಣೆಯ ಮುಳ್ಳಿನ ಮೊನೆಯಲ್ಲಿ ನಿಂತಿರುವ ಅಸ್ಸಾಮಿನಲ್ಲಿ ಮದ್ರಸಾ ಮುಚ್ಚುವ ಕ್ರಮಕ್ಕೆ ಸರಕಾರ ಮುಂದಾಗಿದೆ.