ಕೊಡಗಿನಲ್ಲಿ ಕೊರೋನಾ: ಈವರೆಗೆ ವರದಿಯಾದ 23 ಪ್ರಕರಣಗಳಲ್ಲಿ ಕೊರೋನಾ ಸೋಂಕಿನ ಲಕ್ಷಣಗಳೇ ಇರಲಿಲ್ಲ- ಜಿಲ್ಲಾಧಿಕಾರಿ

0
568

ಸನ್ಮಾರ್ಗ ವಾರ್ತೆ

ಕೊಡಗು ಜಿಲ್ಲೆಯಲ್ಲಿ ಇದೀಗ 26 ಕೋರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. 3 ಮಂದಿ ಗುಣಮುಖರಾಗಿದ್ದು 23 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಶ್ವಿನಿ ಆಸ್ಪತ್ರೆಯಲ್ಲಿ ಕಾಯ೯ನಿವ೯ಹಿಸುತ್ತಿದ್ದ ಹಿರಿಯ ತಜ್ಞ ವೈದ್ಯರೂ ಸೇರಿದಂತೆ ಮೂವರು ವೈದ್ಯರು, ಎಲೆಕ್ಟ್ರಿಷಿಯನ್, ಸ್ವಾಗತಕಾರಿಣಿ, ವೈದ್ಯರ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ 7 ಮಂದಿಗೆ ಸೋಂಕು ತಗುಲಿದೆ.

ಸದ್ಯಕ್ಕೆ ಅಶ್ವಿನಿ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ತುತು೯ ಚಿಕಿತ್ಸೆಗೆ ಮಾತ್ರ ತೆರೆಯಲಾಗಿದೆ. ಪ್ರಸ್ತುತ 8 ರೋಗಿಗಳು ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಯಾವ ವೈದ್ಯರೂ, ವೈದ್ಯಕೀಯ ಸಿಬ್ಬಂದಿಗೂ ಸೋಂಕು ತಗುಲಲಿಲ್ಲ. ಎಲ್ಲಾ ಸೋಂಕು ಪೀಡಿತ ರೋಗಿಗಳನ್ನು ಕೋವಿಡ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಅಸ್ಸಾಂ ನಿಂದ ಬಂದ ನಿವೖತ್ತ ಸೈನಿಕರೋವ೯ರು ಮುಳ್ಳೂರು ಗ್ರಾಮಕ್ಕೆ ಬಂದಿದ್ದು ಇವರಲ್ಲಿಯೂ ಸೋಂಕು ಪತ್ತೆಯಾಗಿದೆ. ಅಂತೆಯೇ ಶಿರಂಗಾಲದ ಹಣ್ಣಿನ ವ್ಯಾಪಾರಿಯ ಸಂಪಕ೯ದಲ್ಲಿದ್ದ ಕಾರ್ ಮೆಕ್ಯಾನಿಕ್ ಸೇರಿದಂತೆ ಇಬ್ಬರಿಗೆ ಸೋಂಕು ಬಂದಿದೆ. ದೊಡ್ಡಳ್ಳಿ ಗ್ರಾಮದ ಮಹಿಳೆಯ ಪತಿ., ಪತಿಯ ಸಹೋದರನಿಗೂ ಸೋಂಕು ತಗುಲಿದೆ. ಬಿಟ್ಟಂಗಾಲದಲ್ಲಿ ಹೋಂಸ್ಟೇ ನಡೆಸುತ್ತಿದ್ದ 70 ವಷ೯ದ ಮಹಿಳೆಗೂ ಸೋಂಕು ತಗುಲಿದ್ದು ಹೋಂಸ್ಟೇಗೆ ಬಂದ ಪವಾಸಿಗರಿಂದಲೂ ಸೋಂಕು ತಗುಲಿರುವ ಸಾಧ್ಯತೆಯಿದೆ.

ಕುಶಾಲನಗರದ ಮೆಡಿಕಲ್ ಶಾಪ್ ಮಾಲೀಕನ ಮಗನಿಗೂ ಸೋಂಕು ತಗುಲಿದೆ. ರಥಬೀದಿಯನ್ನು ಕಂಟೈನ್ ಮೆಂಟ್ ಜೋನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಕೊಡಗಿನಲ್ಲಿ ಸೀಲ್ ಡೌನ್ ಪ್ರದೇಶಗಳು-

ಕೋರೋನಾ ಸೋಂಕು ಪೀಡಿತರು ಇದ್ದ ಮಡಿಕೇರಿಯ ಪುಟಾಣಿ ನಗರ, ಡೈರಿ ಫಾರಂ, ಮಂಗೇರಿರ ಮುತ್ತಣ್ಣ ಸಕ೯ಲ್ – ಓಂಕಾರೇಶ್ನರ ದೇವಾಲಯ ರಸ್ತೆ, ಕೋಟೆ ಮಾರಿಯಮ್ಮ ದೇವಾಲಯ ರಸ್ತೆ, ಮಡಿಕೇರಿ ಬಳಿಯ ಕಗ್ಗೋಡ್ಲು, ತಾಳತ್ತಮನೆ, ಕುಶಾಲನಗರದ ರಥಬೀದಿ,,ವಿರಾಜಪೇಟೆ ಬಳಿಯ ಬಿಟ್ಟಂಗಾ ಲ , ಶಿರಾಗಂಲ, ದೊಡ್ಡಳ್ಳಿ, ಮುಳ್ಳೂರು, ಬಳಗುಂದ ಸೇರಿದಂತೆ 12 ಪ್ರದೇಶಗಳನ್ನು ಸಂಪೂಣ೯ವಾಗಿ 28 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶಗಳಿಗೆ ತೆರಳುವ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ವಾಹನ, ಜನ ಸಂಚಾರಕ್ಕೆ ನಿಷೇಧಿಸಲಾಗಿದೆ. ಸೀಲ್ ಡೌನ್ ಪ್ರದೇಶಗಳಲ್ಲಿರುವ ಜನ 28 ದಿನಗಳ ಕಾಲ ಹೊರಬರುವಂತಿಲ್ಲ. ಒಳಹೋಗುವಂತೆಯೂ ಇಲ್ಲ.

ಇದೇವೇಳೆ, ಕೊಡಗಿನಲ್ಲಿ ರೆಸಾಟ್೯, ಹೋಂಸ್ಟೇ, ಲಾಡ್ಜ್ ಗಳನ್ನು 21 ದಿನ ಮುಚ್ಚಲು ಸ್ವಯಂಪ್ರೇರಿತರಾಗಿ ಅಸೋಸಿಯೇಷನ್ ಪ್ರಮುಖರೇ ನಿಧ೯ರಿಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಪನ್ನೇಕರ್, ಆರೋಗ್ಯಾಧಿಕಾರಿ ಡಾ. ಮೋಹನ್, ಡಾ. ಮಹೇಶ್ ಹಾಜರಿದ್ದರು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.