ನಾನು ಏನು ಕಂಡಿರುವೆನೋ ಅದನ್ನು ಹೇಗೆ ವಿವರಿಸಲಿ? ಸಿರಿಯದ ಸದ್ಯದ ಪರಿಸ್ಥಿತಿಯ ಸುತ್ತ ಬರೆದ ಲೇಖನ

0
801

ಫರಾಹ್ ನಜ್ಜಾರ್

ರಷ್ಯದ ಬೆಂಬಲದೊಂದಿಗೆ ಸಿರಿಯದ ಈಶಾನ್ಯ ಭಾಗದಲ್ಲಿ ಸಿರಿಯದ ಸೈನ್ಯ ನಡೆಸಿದ ನಿರಂತರ ದಾಳಿಯಲ್ಲಿ ಮಕ್ಕಳ ಸಹಿತ ಹದಿನೈದು ನಾಗರಿಕರು ಕಳೆದ ವಾರ ಕೊಲ್ಲಲ್ಪಟ್ಟರು. ಬಂಡುಕೋರ ಪ್ರಭಾವ ಇರುವ ಕೊನೆಯ ಸ್ಥಳ ಇದೆಂದು ಹೋರಾಟಗಾರರು ಮತ್ತು ಪ್ಯಾರ ಮೆಡಿಕಲ್ ಸ್ವಯಂ ಸೇವಕರು ಹೇಳುತ್ತಾರೆ. ಇವೆಲ್ಲ ವಾದಗಳು, ವಾಸ್ತವವೇ. ಆದರೆ ರಕ್ತರಂಜಿತ ಇತಿಹಾಸಕ್ಕೆ ಇವೆಲ್ಲ ಸಬೂಬುಗಳಾಗಿವೆ ಎಂಬುದಂತೂ ಸತ್ಯವೇ ಆಗಿದೆ.

ಇತ್ತೀಚೆಗೆ ನಡೆದ ಇದ್ಲಿಬ್ ಪ್ರಾಂತದ ರಾಸಲ್‍ಐನ್‍ನ ತರಕಾರಿ ಮಾರುಕಟ್ಟೆ ಮತ್ತು ಸಮೀಪದ ಗ್ರಾಮದಲ್ಲಿ ನಡೆದ ಬಾಂಬಿಂಗ್‍ನಲ್ಲಿ ಮೂರು ಮಕ್ಕಳು ಐವರು ಸಾಮಾನ್ಯ ಪ್ರಜೆಗಳು ಸಾವಿಗೀಡಾದರು. 20 ಮಂದಿ ಗಾಯಗೊಂಡರು. ಇಂಥ ಅದೆಷ್ಟೋ ದಾಳಿಗಳು ಈ ಹಿಂದೆಯೂ ನಡೆದಿವೆ. ಎಲ್ಲ ದಾಳಿಗಳಲ್ಲಿ ನಾಗರಿಕರೇ ಹೆಚ್ಚು ಸಾಯುವುದು. ಪ್ರತಿಯೊಂದೂ ದಾಳಿಯೂ ಹೋರಾಟಗಾರರನ್ನೇ ಗುರಿಯಾಗಿರಿಸಿಕೊಳ್ಳುತ್ತದೆ. ಆದರೆ ಗುರಿತಪ್ಪಿ ಜನಸಾಮಾನ್ಯರು ಬಲಿಯಾಗುವುದು ಮುಂದುವರಿಯುತ್ತಿದೆ.

“ನಾನು ನನ್ನ ಮೂವರು ಸಹೋದರರನ್ನು ಕಳೆದು ಕೊಂಡೆ. ಇವರಲ್ಲಿ ಅತ್ಯಂತ ಚಿಕ್ಕ ತಮ್ಮನಿಗೆ ಐದು ವರ್ಷ. ನಾನು ಮನೆಯ ಮುಂದೆ ನಿಂತು ಮಕ್ಕಳು ಆಡುತ್ತಿರುವುದನ್ನು ನೋಡುತ್ತಾ ನಿಂತಿದ್ದೆ. ತಟ್ಟನೆ ಘೋರವಾದ ಸ್ಫೋಟದ ಶಬ್ದ ಕೇಳಿಸಿತು. ಈ ಸ್ಫೋಟ ನಮ್ಮ ಹತ್ತಿರವೇ ನಡೆಯಿತು” ಎಂದು ಹುಸೈನ್ ಅಲ್ ಶೇಕ್ ಹೇಳಿದರು. ಹಠಾತ್ ಆಗಿ ಆ ಕಟ್ಟಡ ಧ್ವಂಸವಾಗಿ ಮಕ್ಕಳು ಬಾಗಿಲಿನೆಡೆಗೆ ಓಡಿದರು. ನಂತರ ಅವರನ್ನು ಕಟ್ಟಡದ ಅಡಿಯಿಂದ ಹೊರತೆಗೆಯಲಾಗಿತು. ಆ ದೃಶ್ಯ ತೀರ ಭಯಾನಕವಾಗಿತ್ತು. ನಾನು ಏನನ್ನು ನೋಡಿದೆ ಎಂದು ವಿವರಿಸಲು ನನ್ನಿಂದ ಸಾಧ್ಯವಿಲ್ಲ”- ನಲ್ವತ್ತು ವರ್ಷದ ಹುಸೈನ್ ಹೇಳಿದರು. ಒಬ್ಬ ಮನೆಯ ಹಿರಿಯಣ್ಣನಿಗೆ ತನ್ನ ಕಣ್ಣ ಮುಂದೆಯೇ ತನ್ನವರನ್ನು ಕಳಕೊಂಡ ಘಟನೆಯನ್ನು ಇಷ್ಟು ನಿರಾಳವಾಗಿ ವಿವರಿಸಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟಿತು. ಆದರೆ ಸಿರಿಯದಲ್ಲಿ ಸಾವು ಕ್ಷಣ ಕ್ಷಣಕ್ಕೂ ಬೆನ್ನಟ್ಟುತ್ತಿದೆ ಎಂಬ ಸತ್ಯ ಅವರಲ್ಲಿ ಇಂಥ ನಿರಾತಂಕ ಮತ್ತು ನಿರಾಳತೆಯನ್ನು ತಂದು ನಿಲ್ಲಿಸಿದ್ದಾಗಿರಬಹುದು.

ಇತ್ತೀಚೆಗೆ ನಡೆದ ಶೆಲ್ ದಾಳಿ ಮತ್ತು ಬಾಂಬಿಂಗ್‍ನಲ್ಲಿ ಬಂಡುಕೋರರು ಇದ್ದಾರೆ ಎನ್ನಲಾದ ಇನ್ನೊಂದು ಕೇಂದ್ರ ಜಿಸ್ರ್ ಅಲ್ ಶುಗುರ್‍ನಲ್ಲಿ ಆರು ಮಂದಿ ಕೊಲೆಯಾದರು. ಇದು ಹೆದ್ದಾರಿ ಸಮೀಪ ನಡೆದಿತ್ತು.

ಇದ್‍ಲಿಬ್ ಪ್ರಾಂತದ ರಾಷ್ಟ್ರೀಯ ಹೆದ್ದಾರಿ ತೆರೆದು ಕೊಂಡಿರುವುದರಿಂದ ಪತನಗೊಂಡ ಆರ್ಥಿಕ ವ್ಯವಸ್ಥೆಯ ಚೇತರಿಕೆಗೆ ಇದು ಕಾರಣವಾಗಬಹುದು ಎನ್ನುತ್ತಾರೆ. ಯುದ್ಧದಿಂದಾಗಿ ಈ ಹೆದ್ದಾರಿಯನ್ನು ಮುಚ್ಚಲಾಗಿತ್ತು. ಇದೇ ವೇಳೆ ಈ ದಾಳಿಗೆ ಅಲ್ ಕಾಯಿದ ಸಂಬಂಧವಿರುವ ಹಯಾತೆ ತಹ್ರೀರ್ ಅಲ್ ಶಾಮ್ ಎಂಬ ಗುಂಪು ಕಾರಣವೆಂದು ಹೇಳಲಾಗುತ್ತದೆ. ಅಂದರೆ ಅವರು ಇವರನ್ನು ಮುಟ್ಟುವುದು, ತಟ್ಟವುದು, ಚಿವುಟುದು. ಇವರು ಆಕಾಶದಲ್ಲಿ ಬಾಂಬು ತಂದು ಸುರಿಸುವುದು. ಒಟ್ಟು ಪರಿಣಾಮವಾಗಿ ಇವರ ಹಳಿ ತಪ್ಪಿದ ಹೋರಾಟ ಮತ್ತು ಯುದ್ಧದಿಂದ ಸಾಮಾನ್ಯ ಜನರು ಹತರಾಗುತ್ತಲೇ ಇದ್ದಾರೆ.

ಕಳೆದ ಎಪ್ರಿಲ್ 26ರಂದು ಅಸದ್‍ರ ಸೇನೆ ತೀರ ಭಯಾನಕವಾದ ವಾಯು ದಾಳಿ ನಡೆಸಿತು. ವಿಶ್ವಸಂಸ್ಥೆಯ ಲೆಕ್ಕ ಪ್ರಕಾರ ಕಳೆದ ವರ್ಷ ಮಾತ್ರ ಒಂದೂವರೆ ಲಕ್ಷದಷ್ಟು ಮಂದಿ ಈಶಾನ್ಯ ಪ್ರಾಂತದಿಂದ ವಲಸೆಹೋಗಿ ವಾಸಿಸಿದರು. ಜನರು ಗುಂಪಾಗಿ ಬದುಕುವ ಕೇಂದ್ರಗಳಿಗೆ ವಾಯುದಾಳಿ ನಡೆಸಲಾ ಯಿತು. ನೂರಾರು ಜನಸಾಮಾನ್ಯರು ಕೊಲೆಯಾದರು, ಗಾಯಗೊಂಡರು. ಇವೆಲ್ಲ ನಮ್ಮನ್ನು ಅಸ್ವಸ್ಥಗೊಳಿಸುತ್ತಿದೆ ಎಂದು ವಿಶ್ವಸಂಸ್ಥೆ ಅಧಿಕಾರಿ ಡೇವಿಡ್ ಸ್ವಾನ್ಸನ್ ಹೇಳಿದರು.
1,52,000ಕ್ಕೂ ಹೆಚ್ಚು ಮಹಿಳೆಯರು ಅಲೆಪ್ಪೊ, ಇದ್ಲಿಬ್‍ನಿಂದ ಬೇರೆಡೆಗೆ ವಲಸೆ ಹೋಗಿ ವಾಸಿಸಿದರು. ದಾಳಿ ಆರಂಭಗೊಂಡ ಬಳಿಕ ಪೂರ್ವ ಇದ್ಲಿಬ್‍ನಲ್ಲಿ 65 ಮಂದಿ ಕೊಲೆ ಯಾದರು. 146 ಮಂದಿ ಗಾಯ ಗೊಂಡರು ಎಂದು ಸಿರಿಯನ್ ಸಿವಿಲ್ ಡಿಫೆನ್ಸ್ ಗ್ರೂಪ್ ತಿಳಿಸಿತು. ದಾಳಿಯ ಮೇಲೆ ದಾಳಿಯೇ ಪರಿಹಾರವೆಂಬಂತಾ ಗಿರುವಾಗ ಜನರು ಸಾಯುವುದೊಂದೇ ಅದರ ನೇರ ಪರಿಣಾಮವಾಗಿದೆಯಷ್ಟೇ. ಸಿರಿಯದಲ್ಲಿ ಶಾಂತಿ ನೆಲೆಸುವಂತಾಗಲು ಸರಕಾರಿ, ಬಂಡುಕೋರ ಪ್ರತಿನಿಧಿಗಳು ಎಲ್ಲೆಲ್ಲ ಚರ್ಚೆ ಮಾಡುತ್ತಾ ಮುಂದುವರಿಸುತ್ತಾ ಇದ್ದಾರೆ. ಇವರ ಚರ್ಚೆ ಮುಗಿಯುವಾಗ ಅರ್ಧಾಂಶ ಸಿರಿಯದ ಜನಸಂಖ್ಯೆ ಮುಗಿದಿರುತ್ತದೆ ಎಂಬ ಆತಂಕ ಕಾಣಿಸುತ್ತಿದೆ.

ಸಿರಿಯದಲ್ಲಿ ಇದ್ಲಿಬ್ ಹೆಚ್ಚು ಜನಸಾಂಧ್ರತೆಯಿರುವ ಸ್ಥಳವಾಗಿದೆ. ಇಲ್ಲಿ ಮೂರು ಮಿಲಿಯನ್ ಜನರು ವಾಸವಿದ್ದಾರೆ. ಇವುಗಳಲ್ಲಿ ಹೆಚ್ಚಿನಂಶ ಜನರು ಈಗಾಗಲೇ ಇಲ್ಲಿಂದ ಹೊರತಳ್ಳಲ್ಪಟ್ಟರು. ವಲಯ ಈಗ ವಿವಿಧ ಸಶಸ್ತ್ರ ಸಂಘಟನೆಗಳ ನಿಯಂತ್ರಣದಲ್ಲಿದೆ. ಇವರಲ್ಲಿ ಪ್ರತಿಪಕ್ಷ ದವರು ಮತ್ತು ಟರ್ಕಿಯ ಬೆಂಬಲದ ಸೈನ್ಯ ಬೇರೆಯಾಗಿದೆ.

ಇದ್ಲಿಬ್‍ನ ಅತಿದೊಡ್ಡ ವಿಭಾಗ ಹಯಾತೆ ತಹ್ರೀರ್ ಅಲ್ ಶಾಮ್ ಎಚ್‍ಟಿಎಸ್ ಆಗಿದೆ. ಇವರು ವಲಯದಲ್ಲಿ ಟರ್ಕಿಯ ಸಹಿತ ಪ್ರತಿ ಪಕ್ಷಗಳಿಂದ ಸ್ವತಂತ್ರವಾಗಿ ಕಾರ್ಯ ವೆಸಗುತ್ತಿದ್ದಾರೆ. ಎಚ್.ಟಿ.ಎಸ್. ಅನ್ನು ಸಾಮಾನ್ಯವಾಗಿ ಭಯೋತ್ಪಾದಕ ಸಂಘಟ ನೆಯೆಂದು ಲೆಕ್ಕ ಹಾಕಲಾಗಿದೆ. ಇದರ ನೆಪದಲ್ಲಿ ಇದ್ಲಿಬ್‍ನಲ್ಲಿ ಸಿರಿಯದ ಸೇನೆ ದಾಳಿ ನಡೆಸುತ್ತಿದೆ. ಆದರೆ ಇದ್ಲಿಬ್ ದಾಳಿಯನ್ನು ಸಂಪೂರ್ಣ ದೂರ ಇರಿಸುವ ಒಂದು ಒಪ್ಪಂದವನ್ನು ರೂಪೀಕರಿಸಲಾಗಿದೆ. ಒಪ್ಪಂದದಲ್ಲಿ ರಷ್ಯ ಟರ್ಕಿ ಸಹಿ ಹಾಕಿವೆ. ವಲಯದಿಂದ ಸೈನ್ಯವನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಒಪ್ಪಂದ ಇದು.

ಒಪ್ಪಂದದ ಎಲ್ಲ ಪಾಶ್ರ್ವಗಳನ್ನು ಒಪ್ಪಿಕೊಳ್ಳಬೇಕೆಂದು ವಿಶ್ವಸಂಸ್ಥೆ ಆಗ್ರಹಿಸಿದೆ. ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದ ಪ್ರಕಾರ ಎರಡು ವಿಭಾಗವೂ ಜನರೊಂದಿಗೆ ಮಾನವೀಯ ಪರಿಗಣನೆಯನ್ನು ತೋರಿಸಬೇಕು ಮತ್ತು ಟರ್ಕಿ ಗಡಿಗೆ ನಿರಾಶ್ರಿತರು ಹೋಗದಂತೆ ತಡೆಯಬೇಕೆಂದು ಒಪ್ಪಂದಲ್ಲಿದೆ.