ಶಿಹಾಬ್ ಪೂಕೋಟರ್
“ವಾಸ್ತವದಲ್ಲಿ ಮಾನವನು ತನ್ನ ಪ್ರಭುವಿಗೆ ಬಹಳ ಕೃತಘ್ನನಾಗಿದ್ದಾನೆ.” (ಅಲ್ ಆದಿಯಾತ್: 6)
ಕೃತಘ್ನ ಮನುಷ್ಯ ಯಾರು ಎಂದು ಪ್ರವಾದಿ ವರ್ಯರಲ್ಲಿ(ಸ) ಕೇಳಿದಾಗ ಅವರು ಈ ರೀತಿ ಉತ್ತರಿಸಿದರು: “ಸ್ವತಃ ತನ್ನ ವಾಸ ಸ್ಥಳದ ಬಗ್ಗೆ ಮಾತ್ರ ಚಿಂತಿಸುವವರು. ತನ್ನ ಆಹಾರವನ್ನು ಮಾತ್ರ ಹುಡುಕುವವರು. ತನ್ನ ಕೆಳಗೆ ಉದ್ಯೋಗ ಮಾಡುವವರನ್ನು ಹಿಂಸಿಸುವವರು. ಪರೋಪಕಾರ ವನ್ನು ತಡೆಯುವವರು.” (ಪ್ರವಾದಿ ವಚನ)
ಕೃತಘ್ನ ಮನುಷ್ಯರ ಕುರಿತು ವಿವರಿಸುವಾಗ ಪ್ರವಾದಿವರ್ಯರು(ಸ) ಪ್ರತಿಪಾದಿಸಿದ ನಾಲ್ಕು ವಿಚಾರಗಳು ಕೂಡಾ ಅಲ್ಲಾಹನೊಂದಿಗೆ ನೇರ ಸಂಬಂಧವಿರುವುದಾಗಿದೆ. ಆದರೆ ಅವೆಲ್ಲವೂ ಮನುಷ್ಯರಿಗೆ ಪರಸ್ಪರ ಸಂಬಂಧಿಸಿದ್ದಾಗಿದೆ. ಸಕಲ ಸೃಷ್ಟಿಗಳಿಗೆ ಸಂಬಂಧಿಸಿದ ಅಕ್ರಮಗಳಾಗಿವೆ. ಕೃತಜ್ಞತೆ ಸಲ್ಲಿಸುವುದು ಎಂಬುದು ಸತ್ಯವಿಶ್ವಾಸಿಯ ಪಾಲಿಗೆ ಅತಿ ಅನಿವಾರ್ಯವಾದ ಗುಣವಾಗಿದೆ. ಎಲ್ಲಾ ಮನುಷ್ಯರಿಗೂ ಅಲ್ಲಾಹನು ಅಪಾರ ಅನುಗ್ರಹಗಳ ಮಳೆಯನ್ನೇ ಸುರಿಸಿರುವನು. ಒಂದೇ ಒಂದು ಅನುಗ್ರಹ ನೀಡದೇ ಯಾವುದೇ ಮನುಷ್ಯನನ್ನು ಅಲ್ಲಾಹನು ಈ ಭೂಮಿಗೆ ಕಳಿಸಿಲ್ಲ. ಅದರ ಜೊತೆಗೆ ನಿಮ್ಮ ಎಲ್ಲಾ ಸಾಮಥ್ರ್ಯಗಳನ್ನು ಮತ್ತು ಅದು ಪ್ರಕಟಿಸುವ ರೀತಿಯು ವ್ಯತ್ಯಸ್ತವಾಗಿದೆಯೆಂದು ಅಲ್ಲಾಹನು ಹೇಳಿರುತ್ತಾನೆ. ಮರುಭೂಮಿಯಲ್ಲಿ ಪ್ರವಾದಿ ವರ್ಯರು(ಸ) ಮತ್ತು ಅನುಚರರು ಸಂಚರಿಸುತ್ತಿರುವಾಗ ಕುಷ್ಠರೋಗ ಪೀಡಿತರಾಗಿ ಆ ಗಾಯಗಳಲ್ಲಿ ಹುಳುಗಳು ತುಂಬಿರುವ ಓರ್ವ ಗುಲಾಮ ಕಷ್ಟಪಟ್ಟು ಮೂತ್ರ ಶಂಕೆ ಮಾಡುತ್ತಿರುವುದು ಪ್ರವಾದಿವರ್ಯರ ಗಮನಕ್ಕೆ ಬಂತು. ಈ ವ್ಯಕ್ತಿಯಲ್ಲಿ ಏ ನಾದರೂ ಅಲ್ಲಾಹನ ಅನುಗ್ರಹವಿರುವುದು ನಿಮಗೆ ಕಾಣುತ್ತಿದೆಯೇ? ಎಂದು ಪ್ರವಾದಿವರ್ಯರು(ಸ) ಅನುಚರರಲ್ಲಿ ಕೇಳಿದರು. ಆಗ ಅನುಚರರು “ಇಲ್ಲ ಯಾವುದೇ ಅನುಗ್ರಹಗಳನ್ನು ನಾವು ಕಾಣುತ್ತಿಲ್ಲ” ಎಂದರು.
“ಅವರು ಮೂತ್ರ ಶಂಕೆ ಮಾಡುತ್ತಿರುವುದು ನೋಡುತ್ತಿಲ್ಲವೇ! ಅದು ಅಲ್ಲಾಹನು ನೀಡಿದ ಮಹತ್ತರವಾದ ಅನುಗ್ರಹವಾಗಿದೆ. ಅಲ್ಲಾಹನು ನೀಡಿದ ಎಲ್ಲಾ ಅನುಗ್ರಹಗಳಿಗೆ ಕೃತಜ್ಞತೆ ತೋರು ವುದು ಮನುಷ್ಯನ ಕರ್ತವ್ಯವಾಗಿದೆ.
ಸಂಪತ್ತು, ಸಂತಾನ, ಸಾಮಥ್ರ್ಯ, ಸಮಯ ಮುಂತಾದವುಗಳು ಅಲ್ಲಾಹನು ಮನುಷ್ಯನಿಗೆ ನೀಡಿದ ಮಹತ್ತರವಾದ ಅನುಗ್ರಹವಾಗಿದೆ. ಈ ನಾಲ್ಕನ್ನೂ ಅಲ್ಲಾಹನಿಗೆ ಮರಳಿಸಲು ಮನುಷ್ಯನು ಬಾಧ್ಯಸ್ತನಾಗಿದ್ದಾನೆ ಎಂದು ಅಲ್ಲಾಹನು ಕುರ್ಆನಿ ನಲ್ಲಿ ಅನೇಕ ಕಡೆ ಪ್ರಸ್ಥಾಪಿಸಿದ್ದಾನೆ. ಸಂಪತ್ತು ಮತ್ತು ಸಂತಾನ ಜೀವನದ ಶೃಂಗಾರದ ಮಹಾ ಅನುಗ್ರಹ ಮತ್ತು ಪರೀಕ್ಷೆಯಾಗಿದೆಯೆಂದೂ ಕುರ್ಆನ್ ಹೇಳಿದೆ. ಇದರಲ್ಲಿ ಸಆಲಬರವರ ಇತಿಹಾಸ ಬಹಳ ಪಾಠ ಭೋಧಕವಾಗಿದೆ. ನಮಾಝ್ಗೆ ನಿರಂತರ ತಡವಾಗಿ ಬರುತ್ತಿರುವುದರ ಕುರಿತು ಪ್ರವಾದಿವರ್ಯರು(ಸ) ಕೇಳಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದ್ದರು: “ನನಗೆ ನಮಾಝ್ ನಿರ್ವಹಿಸಲು ಮನೆಯಲ್ಲಿ ಒಂದೇ ಬಟ್ಟೆಯಿರು ವುದು. ಅದಾನ್ ಕೊಟ್ಟ ಕೂಡಲೇ ನನ್ನ ಪತ್ನಿ ಅದನ್ನುಟ್ಟು ನಮಾಝ್ ನಿರ್ವಹಿಸುವಳು. ಅವಳ ನಮಾಝ್ ಮುಕ್ತಾಯದ ಬಳಿಕ ಅದನ್ನು ಧರಿಸಿ ನಾನು ಮಸೀದಿಗೆ ಬರುತ್ತಿರುವ ವೇಳೆ ಪ್ರವಾದಿವರ್ಯರು(ಸ) ನಮಾಝ್ ಪ್ರಾರಂಭಿಸಿ ರುತ್ತಿದ್ದರು. ಈ ಕಾರಣದಿಂದ ನಾನು ನಮಾಝ್ಗೆ ತಡವಾಗಿ ಬರುತ್ತಿದ್ದೇನೆ. ಆದ್ದರಿಂದ ನನಗೆ ಸಂಪತ್ತು ವೃದ್ಧಿಸಲು ಅಲ್ಲಾಹನಲ್ಲಿ ಪ್ರಾರ್ಥಿಸ ಬೇಕೆಂದು ಎಂದು ಭಿನ್ನವಿಸಿದರು. ಆಗ ಪ್ರವಾದಿ ವರ್ಯರು(ಸ) ಅದರ ಅಗತ್ಯವಿಲ್ಲ, ಇದ್ದುದರಲ್ಲಿ ತೃಪ್ತಿಪಟ್ಟು ಜೀವಿಸಿರಿ ಎಂದರು. ಆದರೆ ನಿರಂತರ ಅವರಿಂದ ಸಂಪತ್ತಿನ ವೃದ್ಧಿಗೆ ಪ್ರಾರ್ಥಿಸಲು ಬೇಡಿಕೆ ಇಟ್ಟಾಗ ಕೊನೆಗೆ ಸಂಪತ್ತಿನ ವೃದ್ಧಿಗಾಗಿ ಪ್ರವಾದಿವರ್ಯರು(ಸ) ಪ್ರಾರ್ಥಿಸಿದರು. ಎರಡು ವರ್ಷಗಳಲ್ಲಿ ಸಅಲಬ ಅಗರ್ಭ ಶ್ರೀಮಂತರಾದರು. ಝಕಾತ್ ಸಂಗ್ರಹಿಸಲು ಪ್ರವಾದಿವರ್ಯರು(ಸ) ನೌಕರರನ್ನು ಕಳಿಸಿದಾಗ ಇದೆಲ್ಲಾ ನನ್ನ ಕಠಿಣ ಪರಿಶ್ರಮದಿಂದ ಉಂಟಾದ ಸಂಪತ್ತು ಎನ್ನುತ್ತಾ ನೌಕರರನ್ನು ಹಿಂದೆ ಕಳುಹಿಸಿದರು. ತಡವಾಗಿ ಯಾದರೂ ಮಸೀದಿಗೆ ಬರುತ್ತಿದ್ದ ಸಅಲಬ ಹಲವು ಬಾರಿ ಮಸೀದಿಯಲ್ಲಿ ನಮಾಝ್ಗೆ ಗೈರುಹಾಜರಾಗುತ್ತಿದ್ದರು. ಸಆಲಬರ ಅಂತ್ಯ ಅಲ್ಲಾಹನೊಡನೆ ಕೃತಘ್ನತೆ ತೋರಿದ ಸ್ಥಿತಿಯಲ್ಲಾ ಗಿತ್ತು ಎಂದು ಇತಿಹಾಸದಲ್ಲಿ ದಾಖಲಾಗಿದ್ದನ್ನು ಕಾಣಬಹುದು. ಸಂಪತ್ತು ಮನುಷ್ಯನನ್ನು ನರಕವಾಸಿಯಾಗಿಯೂ ಸ್ವರ್ಗವಾಸಿಯಾಗಿಯೂ ಮಾಡಬಲ್ಲುದು.
ಬಿಲಾಲ್ ಸ್ವರ್ಗದಲ್ಲಿ ಪ್ರವೇಶಿಸಿದ ಬಳಿಕವೇ ಅಬ್ದುರ್ರಹ್ಮಾನ್ ಬಿನ್ ಔಫ್ ಸ್ವರ್ಗ ಪ್ರವೇಶಿಸುವುದು ಎಂಬ ಪ್ರವಾದಿ ವಚನವು ಅಬ್ದುರ್ರಹ್ಮಾನ್ ಬಿನ್ ಔಫ್ರಿಗೆ ತಿಳಿದಾಗ ಕೂಡಲೇ ಓಡುತ್ತಾ ಪ್ರವಾದಿ ವರ್ಯರ(ಸ) ಬಳಿ ತೆರಳಿ ತಾವು ಈ ರೀತಿ ಹೇಳಿ ದ್ದೀರಾ ಎಂದು ಕೇಳಿದರು. ಆಗ ಪ್ರವಾದಿ ವರ್ಯರು(ಸ) ಹೌದು. ಸರಿ. ಬಿಲಾಲ್ರಲ್ಲಿ ಸೊತ್ತು ಕಡಿಮೆಯಿರುವ ಕಾರಣ ಅವರ ವಿಚಾರಣೆಯು ಲಘುವಾಗಿರುವುದು. ಅಬ್ದುರ್ರಹ್ಮಾನ್ ಹಾಗಲ್ಲವಲ್ಲ.! ನಾನು ಹೇಳಿದುದರ ಉದ್ದೇಶ ಇದಾಗಿದೆ. ತಾವು ಸ್ವರ್ಗ ಪ್ರವೇಶಿಸಲಾರಿರಿ ಎಂದು ಇದರರ್ಥವಲ್ಲ. ಇದನ್ನು ಕೇಳಿದ ಅಬ್ದುರ್ರಹ್ಮಾನ್ ಬಿನ್ ಔಫ್ ಅಳುತ್ತಾ ಪ್ರವಾದಿ ವರ್ಯರೇ, ನನಗೆ ಮದೀನದಲ್ಲಿ ಎರಡು ತೋಟಗಳಿವೆ. ಅದರಲ್ಲೊಂದನ್ನು ಅಲ್ಲಾಹನ ಮಾರ್ಗಕ್ಕೆ ಸಮರ್ಪಿಸುತ್ತೇನೆ ಎಂದು ಘೋಷಿಸಿ ದರು. ಆದರೆ ನಾನು ಬಿಲಾಲ್ಗಿಂತ ಮೊದಲೇ ಸ್ವರ್ಗ ಪ್ರವೇಶಿಸಬೇಕು ಎಂದು ಹೇಳಿದರು. ಪ್ರವಾದಿವರ್ಯರು(ಸ) ಅದನ್ನು ಅಂಗೀಕರಿಸಿದರು. ಮಾತ್ರವಲ್ಲ ಸ್ವರ್ಗ ಪ್ರವೇಶಿಸುವ ಸುವಾರ್ತೆ ಪಡೆದ ಹತ್ತು ಮಹನೀಯರ ಪಟ್ಟಿಯಲ್ಲಿ ಅಬ್ದುರ್ರಹ್ಮಾನ್ ಬಿನ್ ಔಫ್ (ರ)ರ ಹೆಸರನ್ನು ಕಾಣಬಹುದು.
ಉರ್ವತ್ ಬಿನ್ ಝುಬೈರ್(ರ) ಮದೀನ ಮಸೀದಿಯಲ್ಲಿ ಪ್ರವಚನ ನೀಡುತ್ತಿದ್ದರು. ಆಗ ಓರ್ವ ಮಹಿಳೆಯರ ಕಡೆಯಿಂದ ಒಂದು ಗಂಟನ್ನು ಅವರ ಮುಂದೆ ತಂದು ಇಡಲಾಯಿತು. ಈ ಪ್ರವಚನದಲ್ಲಿ ಅಲ್ಲಾಹನು ನೀಡಿದ ಅನುಗ್ರಹ ಗಳನ್ನು ಅಲ್ಲಾಹ ನಿಗೆ ಮರಳಿ ನೀಡುವ ಬಗ್ಗೆ ವಿವಿಧ ರೀತಿಯಲ್ಲಿ ವಿವರಿಸಲಾಗಿತ್ತು. ಗಂಟಿನ ಜೊತೆ ಒಂದು ಪತ್ರವೂ ಇತ್ತು. ಅದು ತೆರೆದು ಓದಿದಾಗ ಅದರಲ್ಲಿ ಈ ರೀತಿ ಬರೆಯಲಾಗಿತ್ತು. “ಗೌರವಾನ್ವಿತರಾದ ಉರ್ವತ್! ತಮ್ಮ ಪ್ರವಚನ ಆಲಿಸಿದಾಗ ಅಲ್ಲಾಹನು ನನಗೆ ನೀಡಿದ ಅನುಗ್ರಹ ಗಳ ಬಗ್ಗೆ ಯೋಚಿಸುತ್ತಿದ್ದೆ. ನನಗೆ ಸಂಪತ್ತು ಸಂತಾನವಲ್ಲದೆ ನೀಳವಾದ ಕೂದಲನ್ನು ಅಲ್ಲಾಹನು ಕರುಣಿಸಿದ್ದಾನೆ, ತಾವು ಅಲ್ಲಾಹನ ಮಾರ್ಗದಲ್ಲಿ ಹೋರಾಡುವ ಸತ್ಯವಿಶ್ವಾಸಿಗಳಿಗೆ ಜಿಹಾದ್ನಲ್ಲಿ ಕುದುರೆಗಳಿಗೆ ಕಡಿವಾಣವಾಗಿ ನನ್ನ ಈ ಕೂದಲಿನ ಗಂಟನ್ನು ಉಪಯೋಗಿಸಲು ನೀಡಬೇಕು! ನನಗೆ ಇದು ಮಾತ್ರ ನೀಡಲು ಸಾಧ್ಯ.
ಅಲ್ಲಾಹನು ನೀಡಿದ ಅನುಗ್ರಹಗಳನ್ನು ಅವನಿಗೇ ಮರಳಿ ನೀಡಬೇಕು. ಅದರ ಹೊರತು ಮನೆ ಸೊತ್ತುವಿತ್ತ ಉದ್ಯೋಗ, ಆಹಾರ ಮುಂತಾದವುಗಳ ಬಗ್ಗೆ ಮಾತ್ರ ಚಿಂತಿಸಿ ಮುನ್ನಡೆ ಯುವುದು ಸತ್ಯವಿಶ್ವಾಸಿಗೆ ಹೇಳಿ ಮಾಡಿಸಿದ್ದಲ್ಲ.
ಉಪವಾಸದ ದಿನಗಳಲ್ಲಿ ಹಲವು ರೀತಿ ಪ್ರಾರ್ಥನೆಗಳನ್ನು ಮಾಡುತ್ತಿದ್ದೇವೆ. ಇವೆಲ್ಲವೂ ಸಾಮಾಜಿಕವಾಗಿ ಮಹತ್ವವಿರುವಂತಹದ್ದು. ಭೂಮಿಯಲ್ಲಿದ್ದವರೊಡನೆ ಕರುಣೆ ತೋರಿಸಿ ಅಲ್ಲಾಹನೊಡನೆ ಕರುಣೆಗಾಗಿ ಮೊರೆಯಿಡುವಾಗ ಅಲ್ಲಾಹನು ನಮಗೆ ಕರುಣೆ ತೋರಿಸುತ್ತಾನೆ. ಭೂಮಿಯಲ್ಲಿರುವವರಿಗೆ ಕ್ಷಮೆ ನೀಡಿದ ಬಳಿಕ ಅಲ್ಲಾಹನೇ ನನ್ನ ಮೇಲೆ ಕೃಪೆ ತೋರು ಎಂದು ಪ್ರಾರ್ಥಿಸಿದಾಗ ಅದಕ್ಕೆ ಅಲ್ಲಾಹನು ಉತ್ತರ ನೀಡುತ್ತಾನೆ. ನಲುವತ್ತು ಕೋಟಿಯಷ್ಟು ಮನುಷ್ಯರು ಐವತ್ತು ರೂಪಾಯಿಗಿಂತ ಕೆಳಗಿನ ವರಮಾನದಲ್ಲಿ ಜೀವಿಸುವ ಒಂದು ದೇಶದಲ್ಲಿ ವಾಸಿಸುವಾಗ ಬಡತನದ ದಾರಿದ್ರ್ಯತೆಯ ಹಸಿವಿನ ಸಂಕಷ್ಟದಲ್ಲಿರು ವವರನ್ನು ಸಂರಕ್ಷಿಸುವ ಯಾವುದಾದರೂ ಕಾರ್ಯ ಮಾಡಿದ ಬಳಿಕ ನಾವು ಅಲ್ಲಾಹನಲ್ಲಿ ನರಕ ವಿಮೋಚನೆಯ ಕುರಿತು ಪ್ರಾರ್ಥಿಸಬೇಕು. ಅಲ್ಲಾಹನಿಗೆ ನೆರವಾಗಲು ನಾವು ಸಿದ್ಧವಾದಾಗ ಅಲ್ಲಾಹನು ನಮಗೆ ನೆರವಾಗಲು ಸಿದ್ದನಾಗುತ್ತಾನೆ. ನಮ್ಮ ಸಂಪತ್ತು ಸಂತಾನ ಅಲ್ಲಾಹನ ಮಾರ್ಗದಲ್ಲಿ ವಿನಿಯೋಗ ಮಾಡಿದಾಗ ಅದು ಭಾರೀ ದೊಡ್ಡ ದಾನವಾಗಿ ಮರಣಾನಂತರ ನಮಗೆ ಅನುಗ್ರಹ ವಾಗಿ ದೊರೆಯುವುದು.
ಸತ್ಯವಿಶ್ವಾಸಿಗಳು ಸೊತ್ತು, ಸಂಪತ್ತು ಸಂತಾನ, ವಿವಿಧ ರೀತಿಯ ಸಾಮಥ್ರ್ಯಗಳು, ಸಮಯ ಇವೆಲ್ಲಾ ಅಲ್ಲಾಹನಿಗಾಗಿ ನೀಡಿ ಸ್ವರ್ಗ ಪಡೆಯ ಬೇಕೆಂಬ ಕರಾರು ಪಡೆದವರಾಗಿದ್ದಾರೆ. ನಿಮ್ಮ ದೇಹ, ಸೊತ್ತು ನನಗೆ ನೀಡಲು ನೀವು ಸಿದ್ಧರಾದರೆ ನಿಮಗೆ ಸ್ವರ್ಗ ನೀಡುತ್ತೇನೆಂದು ಅಲ್ಲಾಹನು ಸತ್ಯವಿಶ್ವಾಸಿಗಳೊಂದಿಗೆ ಕರಾರು ಮಾಡಿಕೊಂಡಿದ್ದಾನೆ. “ಮಾಲ” ಎಂಬ ಪದ ಅಲ್ಲಾಹನು ಬಳಸಿರುವುದು ಸಂಪತ್ತಿಗೆ ಮಾತ್ರವಲ್ಲ. ಅದರಲ್ಲಿ ಅಲ್ಲಾಹನು ನೀಡಿದ ಎಲ್ಲಾ ಅನುಗ್ರಹ ಗಳೂ ಸಾಮಥ್ರ್ಯಗಳೂ ಒಳ ಪಡುವುದು. ಅಲ್ಲಾಹನು ನೀಡಿದ ಈ ಮಹತ್ತರವಾದ ಅನುಗ್ರಹವನ್ನು ಸ್ವಹಿತಾಸಕ್ತಿಗಾಗಿ ಬಳಸುವವನು ನಿಂದ್ಯನಾಗಿದ್ದಾನೆ. ರಮಝಾನ್ ಇಂತಹ ನಮ್ಮ ಸಾಮಥ್ರ್ಯಗಳನ್ನು ಅಲ್ಲಾಹನಿಗೆ ನೀಡುವ ಸಮಯವಾಗಿದೆ, ಅದು ಫಲಪ್ರದವಾಗಿ ಅಲ್ಲಾಹನಿಗೆ ಮರಳಿ ನೀಡಲು ನಾವು ಸಿದ್ಧರಾದರೆ ಅಲ್ಲಾಹನು ನಮಗೆ ಸ್ವರ್ಗ ನೀಡಿ ಅನುಗ್ರಹಿಸುವನು.












