ಸ್ಮಾರ್ಟ್ ರಸ್ತೆಗಳ ಕುರಿತು ನಾವ್ಯಾಕೆ ಯೋಚಿಸುವುದಿಲ್ಲ?

0
377

@ ಮುಹಮ್ಮದ್ ನೌಶಾದ್ ಖಾನ್


ಪ್ರತೀ ವರ್ಷ, ಪ್ರತೀ ಗಂಟೆ, ಪ್ರತೀ ಕ್ಷಣವು ಕೊಲೆಗಾರ ರಸ್ತೆಗಳು ಹಂತಕ ಮತ್ತು ಮಾರಕ ವಾಗುತ್ತಿದ್ದರೂ ನಾವ್ಯಾಕೆ ಎಚ್ಚೆತ್ತುಕೊಳ್ಳುತ್ತಿಲ್ಲ? ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮ ಪ್ರಯಾಣ ಸುಗಮವಾಗಿರಬೇಕೆಂಬ ಬಯಕೆಯಿದೆಯಾದರೂ ಉತ್ತಮ ರಸ್ತೆಗಳಿಲ್ಲ, ಸಂಚಾರಿ ನಿಯಮಗಳನ್ನು ಪಾಲಿಸುವ ಆಸಕ್ತಿಯೂ ಇಲ್ಲ. ಆದಷ್ಟು ಬೇಗ ತಲುಪಿದರೆ ಸಾಕಿತ್ತು ಎಂಬ ಮನೋಭಾವನೆಯೇ ನಮ್ಮೆಲ್ಲರ ಸಂಚಾರಿ ನಿಯಮವಾಗಿಬಿಟ್ಟಿದೆ. ಭಯಾನಾತ್ಮಕವಾದ ಆ ಅಪಘಾತ ಮರಣಗಳು ಇನ್ನೂ ಯಾಕೆ ನಮ್ಮನ್ನು ಎಚ್ಚರಿಸುತ್ತಿಲ್ಲ? ಪ್ರಾಕೃತಿಕ ವಿಕೋಪಗಳಿಗಿಂತಲೂ ಹೆಚ್ಚಿನ ಜನರು ರಸ್ತೆ ಅಪಘಾತಗಳಲ್ಲಿ ಮೃತರಾಗುತ್ತಿರುವಾಗ ನಮ್ಮ ಸರಕಾರವೇಕೆ ಅದರತ್ತ ಗಮನ ಹರಿಸುತ್ತಿಲ್ಲ? ವಿಶ್ವದಾದ್ಯಂತ ಪ್ರತಿದಿನ 3500ಕ್ಕೂ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲಿ ಮೃತರಾಗುತ್ತಿದ್ದಾರೆ.
ಸಾಧಾರಣವಾಗಿ ಸ್ಮಾರ್ಟ್ ಸಿಟಿಯ ಕುರಿತು ಮಾತನಾಡುವ ನಮಗೆ ಸ್ಮಾರ್ಟ್ ರಸ್ತೆಗಳ ಕಲ್ಪನೆಯೇಕೆ ಬರುತ್ತಿಲ್ಲ? ಸ್ಮಾರ್ಟ್ ರಸ್ತೆಗಳಲ್ಲವೇ ನಮ್ಮನ್ನು ಸ್ಮಾರ್ಟ್ ಸಿಟಿಗಳತ್ತ ತಲುಪಿಸುವುದು? ಉತ್ತಮ ಸಂಚಾರಿ ವ್ಯವಸ್ಥಿತ ರಸ್ತೆಯಾಗಿದೆ ಆರ್ಥಿಕ ಸುಭಿಕ್ಷೆಗೂ ಉತ್ತಮ ಜೀವನಕ್ಕೂ ದಾರಿ ದೀಪವಾಗುವುದು. ನಗರ ಮತ್ತು ಹಳ್ಳಿಗಳ ನಡುವಿರುವ ಅಂತರವನ್ನು ಇಲ್ಲವಾಗಿಸಲು ಇಂತಹ ಸ್ಮಾರ್ಟ್ ರೋಡ್ ಕಲ್ಪನೆ ಯಾಕೆ ಬರಬಾರದು? ರಸ್ತೆ ಅಪಘಾತ ಸಂಭವಿಸಲು ಹಲವಾರು ಕಾರಣಗಳಿವೆ. ರಸ್ತೆಗಿಂತಲೂ ಅಧಿಕವಾಗಿರುವ ಹೊಂಡಗಳು, ರಸ್ತೆಗಳೊಂದಿಗೆ ಚರಂಡಿಗಳು ಸೇರಿಕೊಂಡು ರಸ್ತೆಯ ನಾಮಾಂಕಿತವನ್ನೇ ಇಲ್ಲವಾಗಿಸಿವೆ, ಕೆಟ್ಟ ರಸ್ತೆಗಳು,ಸೂಚನಾ ಫಲಕಗಳು, ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಮಸ್ಯೆ, ಹಾರ್ಷ್ ಡ್ರೈವಿಂಗ್ ಮತ್ತು ಟ್ರಾಫಿಕ್ ನಿಯಮಗಳ ಉಲ್ಲಂಘನೆ, ಇದಕ್ಕಿಂತಲೂ ಹೆಚ್ಚಾಗಿ ಕುಡಿದು ವಾಹನ ಚಲಾಯಿಸುವುದರಿಂದಾಗಿದೆ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿರುವುದು. ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಮದ್ಯದ ಮೇಲೆ ನಿಷೇಧ ಹೇರಲಾಗಿದ್ದರೂ ದೇಶದೆಲ್ಲೆಡೆ ನಿಷೇಧ ಹೇರಬೇಕೆಂಬ ಬೇಡಿಕೆ ಈ ಸಮಯಾವಧಿಗೆ ಅತ್ಯಗತ್ಯವಾಗಿದೆ. ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಿದ ನಂತರ ಹಲವಾರು ರೀತಿಯ ಸಕಾರಾತ್ಮಕ ಬದಲಾವಣೆಗಳಾಗಿದ್ದು ಅದರಲ್ಲಿ ಕುಡಿದು ವಾಹನ ಚಲಾಯಿಸಿ ಅಪಘಾತದಲ್ಲಿ ಸಂಭವಿಸುವ ಮರಣದ ಪ್ರಮಾಣ ಇಳಿಕೆಯಾಗಿದೆ. ಮಾತ್ರವಲ್ಲ, ಕುಟುಂಬ ಸಂಬಂಧಗಳಲ್ಲಿ ಬದಲಾ ವಣೆಗಳಾಗಿವೆ. ಮದ್ಯದಿಂದಾಗಿ ಉದ್ಭವಿಸುವ ಸಾಮಾಜಿಕ ಸಮಸ್ಯೆಗಳು, ಕೌಟುಂಬಿಕ ತೊಂದರೆ ಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದ್ದು ಇದರಿಂದ ಉಳಿತಾಯವಾಗುವ ಹಣವು ಕೌಟುಂಬಿಕ ಮತ್ತು ಮಕ್ಕಳ ಶಿಕ್ಷಣ ಸುಭಿಕ್ಷೆಗೆ ಮತ್ತು ಆರ್ಥಿಕ ಬದಲಾವಣೆಗೆ ನೆರವಾಗುವುದು. ಭಾರತದಲ್ಲಿ ಸುಮಾರು 70 ಶೇಕಡಾ ರಸ್ತೆ ಅಪಘಾತಗಳು ಕುಡಿದು ವಾಹನ ಚಲಾಯಿಸುವು ದರಿಂದ ಸಂಭವಿಸುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ರಸ್ತೆಬದಿಗಳಲ್ಲಿಯೇ ಮದ್ಯದ ಪೂರೈಕೆಯು ಲಭಿಸುತ್ತಿರುವುದು ಈ ಅಪಘಾತದ ಏರಿಕೆಗೆ ಕಾರಣವಾಗಿದೆ. ಆಗ್ನೇಯ ಏಷ್ಯಾದಲ್ಲಿಯೇ ಭಾರತವು ಮದ್ಯದ ಆಮದಿನಲ್ಲಿ ಮುಂದಿದ್ದು ಹೆಚ್ಚಿನ ಸುಂಕವನ್ನು ಮದ್ಯದ ಮೇಲೆ ವ್ಯಯಿಸುತ್ತಿದೆ. ಕುಡಿದು ವಾಹನ ಚಲಾಯಿಸುವುದರಲ್ಲಿ ದೆಹಲಿಯು ಏಳು ಪ್ರತಿಶತ ಹೆಚ್ಚಿದ್ದರೆ ಮುಂಬೈನಲ್ಲಿ 16 ಪ್ರತಿಶತ ಹೆಚ್ಚಾಗುತ್ತಿದೆ.
ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳು ಮದ್ಯಮುಕ್ತ ಭಾರತಕ್ಕಾಗಿ ಬೇಡಿಕೆಯನ್ನಿರಿಸಿರುವುದನ್ನು ಕಾಣಬಹುದು. ಜಮಾಅತೆ ಇಸ್ಲಾವಿೂ ಹಿಂದ್ ಹಲವಾರು ಕಾರ್ಯಕ್ರಮಗಳಲ್ಲಿ ಮದ್ಯಮುಕ್ತ ಭಾರತಕ್ಕಾಗಿ ಬೇಡಿಕೆಯನ್ನಿರಿಸಿದೆಯಲ್ಲದೇ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾವು ಕಳೆದ ಮೇ 22ರಂದು ಮದ್ಯಮುಕ್ತ ದೆಹಲಿ ಎಂಬ ಅಭಿಯಾನವನ್ನು ನಡೆಸಿತ್ತು. ಆದರೆ ಹೆಚ್ಚಿನ ಸಂಘಟನೆಗಳು ಈ ವಿಷಯದಲ್ಲಿ ಪ್ರಭಾವಿತವಾಗಿ ಸರಕಾರದ ಗಮನಸೆಳೆಯಬೇಕಾದ ಅಗತ್ಯತೆ ಇದೆ.

2015ರ ವರೆಗಿನ 5 ವರ್ಷಗಳ ರಸ್ತೆ ಅಪಘಾತಗಳ ಕುರಿತು ಸಾರಿಗೆ ಇಲಾಖೆಯು ವರದಿಯನ್ನು ಪ್ರಕಟಿಸಿದೆ. ಕಳೆದ ವರ್ಷಕ್ಕಿಂತ 2013ರಲ್ಲಿ 12,023 ಅಪಘಾತಗಳು ಹೆಚ್ಚಾಗಿವೆ. 2005ರಲ್ಲಿ 4.4 ಲಕ್ಷ ಅಪಘಾತಗಳು ಸಂಭವಿಸಿದ್ದು 2015ರಲ್ಲಿ ಅಪಘಾತಗಳ ಸಂಖ್ಯೆ 5 ಲಕ್ಷ ಮೀರಿದೆ. 94,968 ಸಾವಿಗೀಡಾದವರ ಸಂಖ್ಯೆ ಯಿಂದ 1,46,133ಕ್ಕೆ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಿದೆ. ವರದಿಯ ಪ್ರಕಾರ ಹದಿಮೂರು ರಾಜ್ಯಗಳಾದ ತಮಿಳುನಾಡು (69,059), ಮಹಾರಾಷ್ಟ್ರ (63,805), ಮಧ್ಯಪ್ರದೇಶ (54,947), ಕರ್ನಾಟಕ (44,011), ಕೇರಳ (39,014), ಉತ್ತರ ಪ್ರದೇಶ (32,385), ಆಂಧ್ರಪ್ರದೇಶ (24,258), ರಾಜಸ್ತಾನ್ (24,073), ಗುಜರಾತ್ (23,183), ಛತ್ತೀಸ್‍ಗಡ (14,446), ಪಶ್ಚಿಮ ಬಂಗಾಳ (13,208) ಮತ್ತು ಹರ್ಯಾಣ(11,174)ಗಳು ದೇಶದ 86.7% ರಸ್ತೆ ಅಪಘಾತಗಳಿಗೆ ಕಾರಣವಾಗಿವೆ. ಪ್ರತಿದಿನ 1324 ಅಪಘಾತಗಳಾಗುತ್ತಿದ್ದು ಅದರಲ್ಲಿ 9349 ಜನರು ಸಾವಿಗೀಡಾಗುತ್ತಿದ್ದು 55 ಅಪಘಾತಗಳಿಂದ 15 ಜನರು ಪ್ರತಿಗಂಟೆಯಲ್ಲಿ ಮರಣ ಹೊಂದುತ್ತಿದ್ದಾರೆಂಬುದನ್ನು ಗಮನಿಸಬೇಕಿದೆ. 2010ರಲ್ಲಿ ವಿಶ್ವಸಂಸ್ಥೆಯು 2011-2020ರ ವರೆಗಿನ ಸಮಯವನ್ನು ರಸ್ತೆ ಸುರಕ್ಷಾ ಅವಧಿಯಾಗಿ ಘೋಷಿಸಿದ್ದು 110 ರಾಷ್ಟ್ರಗಳಲ್ಲಿ ಇದು 2011ರ ಮೇಯಿಂದ ಕಾರ್ಯಪ್ರವೃತ್ತವಾಗಿವೆ.

ಇದರ ಉದ್ದೇಶವು ಅಪಘಾತಗಳಲ್ಲಿ ಸಂಭವಿಸುವ ಮರಣ ಸಂಖ್ಯೆಯನ್ನು ಕಡಿಮೆಗೊಳಿಸ ಬೇಕೆಂಬುದಾಗಿದೆ. ರಸ್ತೆ ಮತ್ತು ವಾಹನಗಳ ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ ಕಾರ್ಯ ತುರ್ತು ಸೇವಾ ವಿಭಾಗಗಳನ್ನು ಒದಗಿಸಬೇಕಿದೆ. ಭಾರತ ಸರಕಾರವು ಈಗಾಗಲೇ ಹೊಸ ರಸ್ತೆ ಸುರಕ್ಷಾ ಬಿಲ್ ಅನ್ನು ಜಾರಿಗೊಳಿಸಿದ್ದು ಅತ್ಯಂತ ಪ್ರಭಾವಶಾಲಿ ಯಾದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕಿದೆ. ರಸ್ತೆ ಸುರಕ್ಷಾ ಸಪ್ತಾಹದಲ್ಲಿ ವರ್ಷಾವರ್ಷ ಬದಲಾಗುತ್ತಿದ್ದು ರಸ್ತೆ ಸುರಕ್ಷೆಗಾಗಿ ನಡೆ, ಕುಡಿದು ವಾಹನ ಚಲಾಯಿಸದಿರಿ, ಬದುಕಿರಿ ಎಂಬಂತಹ ಹಲವಾರು ಘೋಷಣೆಗಳು ಘೋಷಣೆಗಳಾಗಿರದೆ ಕಾರ್ಯರೂಪಕ್ಕೆ ಬರಬೇಕಿವೆ. ಜನರು ಮತ್ತು ಸರಕಾರವು ನಾವು ಅಪಘಾತಗಳಿಗೆ ಗುರಿಯಾಗುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ.ಸರಕಾರ ಬುಲೆಟ್ ಟಟ್ರೈನ್ ಬದಲು ಉತ್ತಮ ರಸ್ತೆಗಳನ್ನು ನಿರ್ಮಿಸುವತ್ತ ಗಮನ ಹರಿಸಬೇಕಿದೆ