ವೈಟ್ ‌ಹೌಸ್‌ನಿಂದ ಪಾಮ್ ಬೀಚ್‌ಗೆ ನಿವಾಸ ಬದಲಿಸಲು ಟ್ರಂಪ್ ನಿರ್ಧಾರ: ಇಲ್ಲಿಗೆ ಬರಬೇಡಿ ಎಂದ ಜನರು!

0
508

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ಸೋಲುಂಡಿರುವ ಡೊನಾಲ್ಡ್ ಟ್ರಂಪ್ ವೈಟ್‍ಹೌಸ್‍ನಿಂದ ಪಾಮ್ ಬೀಚ್‍ಗೆ ವಸತಿ ಬದಲಾಯಿಸಲು ಮನಸು ಮಾಡಿದ್ದಾರೆ. ಅಲ್ಲಿವರ ಸ್ವಂತ ರೆಸಾರ್ಟ್ ಇದೆ. ಆದರೆ ಈ ರೆಸಾರ್ಟ್ ಸಮೀಪದಲ್ಲಿ ವಾಸವಿರವ ಜನರು ಅಧಿಕಾರಿಗಳು ದೂರು ನೀಡಿದ್ದು ಡೊನಾಲ್ಡ್ ಟ್ರಂಪ್ ಇಲ್ಲಿ ಖಾಯಂ ವಾಸಿಸುವುದನ್ನು ತಡೆಯಬೇಕೆಂದು ಹೇಳಿದ್ದಾರೆ.

ಪಾಮ್ ಬೀಚ್ ಫ್ಲೊರಿಡಾದ ಪ್ರಮುಖರ ವಾಸಸ್ಥಳವಾಗಿದ್ದು ಇಲ್ಲಿ ಮಾರ್ ಅಲಾಗೊ ಎಂಬ ಟ್ರಂಪ್‍ರ ಖಾಸಗಿ ರೆಸಾರ್ಟ್ ಇದೆ. 1986ರಲ್ಲಿ ಟ್ರಂಪ್ ಖರೀದಿಸಿದ ಎಸ್ಟೇಟ್ ಮತ್ತು ಬಂಗ್ಲೆಯನ್ನು 1993ರಲ್ಲಿ ಖಾಸಗಿ ರೆಸಾರ್ಟ್ ಆಗಿ ಮಾಡಲಾಗಿತ್ತು. ಖಾಸಗಿ ರೆಸಾರ್ಟ್ ಮಾಡಿಕೊಂಡ ವೇಳೆ ಇಲ್ಲಿ ಖಾಯಂ ವಾಸಿಸುವುದಿಲ್ಲ ಎಂದು ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ನೆರೆಯಲ್ಲಿ ವಾಸವಿರುವ ಜನರು ಹೇಳುತ್ತಿದ್ದಾರೆ. ವರ್ಷದಲ್ಲಿ ಮೂರು ವಾರ ಮಾತ್ರ ಅಲ್ಲಿ ವಾಸಿಸುವುದು. ನಿರಂತರ ಏಳು ದಿವಸಕ್ಕಿಂತ ಹೆಚ್ಚು ದಿನ ಅಲ್ಲಿ ಇರುವುದಿಲ್ಲ ಎಂಬ ಒಪ್ಪಂದ ಇದೆ ನೆರೆಯ ಜನರು ಬೆಟ್ಟು ಮಾಡಿದ್ದಾರೆ. ಆದುದರಿಂದ ಟ್ರಂಪ್ ಪಾಮ್ ಬೀಚ್‍ನಲ್ಲಿ ಖಾಯಂ ವಾಸವಿರುವುದನ್ನು ತಡೆಯಬೇಕೆಂದು ಅಲ್ಲಿ ವಾಸವಿರುವವರು ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.

ಟ್ರಂಪ್ ಅಧ್ಯಕ್ಷರಾಗುವ ಮೊದಲೇ ಪಾಮ್ ಬೀಚ್ ಅಧಿಕಾರಿಗಳೊಂದಿಗೆ ಸಮಸ್ಯೆ ಸೃಷ್ಟಿಸುತ್ತಿದ್ದರು. ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೊಡ್ಡ ಮಟ್ಟದ ಶಬ್ದ ಮಾಲಿನ್ಯವಾಗುತ್ತಿದೆ ಎಂದು ಹಲವು ಬಾರಿ ದೂರು ನೀಡಿದ್ದರು. ಮಾರ್ ಅಲೊಗೊದಲ್ಲಿ ಸ್ಥಾಪಿಸಿದ ಅಮೆರಿಕನ್ ಧ್ವಜದ ಗಾತ್ರ ಕಾನೂನನ್ನು ಉಲ್ಲಂಘಿಸಿದೆ ಎಂದು ಟ್ರಂಪ್‍ಗೆ ದಂಡ ಹಾಕಲು ಪಾಮದ ಬೀಚ್ ಅಧಿಕಾರಿಗಳು ಕಾನೂನು ಕ್ರಮಜರಗಿಸಿದ್ದರು. ನಂತರ ರಾಜಿಯಲ್ಲಿ ಪ್ರಕರಣ ಮುಗಿದಿತ್ತು. 126 ಕೋಣೆಗಳಿರುವ ಮಾರ್ ಅಲೊಗೊ 1927ರಲ್ಲಿ ಕಟ್ಟಿಸಲಾಗಿತ್ತು. 1986ರಲ್ಲಿ ಟ್ರಂಪ್ ಇದನ್ನು ಖರೀದಿಸಿದ್ದರು‌.