ಅತ್ಯಾಚಾರಗೈದು ಮಹಿಳೆಗೆ ಬೆಂಕಿ ಹಚ್ಚಿದ ತಂದೆ-ಮಗ: ಯೋಗಿಯ ರಾಜ್ಯದಲ್ಲಿ ಆಘಾತಕಾರಿ ಘಟನೆ

0
694

ಸನ್ಮಾರ್ಗ ವಾರ್ತೆ

ಸೀತಾಪುರ : ಯೋಗಿಯ ಉತ್ತರ ಪ್ರದೇಶದಲ್ಲಿ ಮಹಿಳೆ ಸುರಕ್ಷಿತಳಲ್ಲ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ತಂದೆ ಮಗನೋರ್ವ ಸೇರಿ ಯುವತಿಯೋರ್ವಳನ್ನು ಅತ್ಯಾಚಾರಗೈದದ್ದಲ್ಲದೆ, ಆಕೆಗೆ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗಂಭೀರ ಸುಟ್ಟಗಾಯಗಳೊಂದಿಗೆ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ತಂದೆ ಮಗನನ್ನು ಬಂಧಿಸಲಾಗಿದೆ.

ಸೀತಾಪುರ ಮಿಶ್ರಿಕ್‍ನ ಮನೆಗೆ ತೆರಳುವ ವೇಳೆ ಯುವತಿಗೆ ಆ ದಾರಿಯಲ್ಲಿ ರಿಕ್ಷಾ ಚಲಾಯಿಸುತ್ತ ಬಂದ ಆರೋಪಿ ತಂದೆ, ಯುವತಿಗೆ ಲಿಫ್ಟ್ ಕೊಡುವುದಾಗಿ ಹತ್ತಿಸಿದ್ದನು. ಈ ವೇಳೆ ತನ್ನ ಜೊತೆಗೆ ರಿಕ್ಷಾದಲ್ಲಿದ್ದ ಆತನ ಹದಿಹರೆಯದ ಮಗನೊಂದಿಗೆ ಸೇರಿ ಅತ್ಯಾಚಾರ ಮಾಡಿದ್ದಲ್ಲದೆ, ಯುವತಿಗೆ ಬೆಂಕಿ ಹಚ್ಚಿದ್ದರು.

ಮಿಶ್ರಿಕ್‍ನ ಯುವತಿಯನ್ನು ಇಬ್ಬರು ಸೇರಿ ಅತ್ಯಾಚಾರಕ್ಕೆ ಗುರಿಪಡಿಸಿ ಬೆಂಕಿ ಹಚ್ಚಿದ್ದಾರೆ ಎಂದು ಹೆಲ್ಪ್ ಲೈನ್ ನಂಬರಿಗೆ ಸಾರ್ವಜನಿಕರು ಕರೆ ಮಾಡಿದ ಬಳಿಕ ಘಟನೆ ಬಹಿರಂಗವಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದು ತಂದೆ ಮಗನನ್ನು ಕಸ್ಟಡಿಗೆ ತೆಗೆದುಕೊಂಡರು. ಸೀತಾಪುರ ಜಿಲ್ಲಾಸ್ಪತ್ರೆಯಲ್ಲಿ ಮೂವತ್ತು ವರ್ಷದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಗೆ ಸಂಬಂಧಿಸಿ ವಿವರವಾದ ತನಿಖೆ ನಡೆಸುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.