ಕಣ್ತಪ್ಪಿನಿಂದ ಮುಗ್ದ ಅಲ್ಪಸಂಖ್ಯಾತರು ಪದ ಸೇರ್ಕೊಂಡಿದೆ- ರಾಮಲಿಂಗಾ ರೆಡ್ಡಿ

0
1428

ಬೆಂಗಳೂರು : ಕಳೆದ ಐದು ವಷ೯ಗಳಲ್ಲಿ ರಾಜ್ಯದಲ್ಲಿ ನಡೆದ ಕೋಮುಗಲಭೆಗಳಲ್ಲಿ ಮುಗ್ಧ ಅಲ್ಪಸಂಖ್ಯಾತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯುವ ಸಂಬಂಧ ಶುಕ್ರವಾರವಷ್ಟೇ ಸುತ್ತೋಲೆ ಹೊರಡಿಸಿ ಪ್ರತಿಪಕ್ಷ ಬಿಜೆಪಿಗೆ “ಚುನಾವಣಾ ಅಸ್ತ್ರ” ಕೊಟ್ಟಿದ್ದ ರಾಜ್ಯ ಸಕಾ೯ರ ಇದೀಗ ವರಸೆ ಬದಲಿಸಿದ್ದು,ಅಲ್ಪಸಂಖ್ಯಾತರಷ್ಟೇ ಅಲ್ಲ ಎಲ್ಲ ಜಾತಿ, ಸಮುದಾಯಗಳ ಮುಗ್ಧರ ಮೇಲೆ ಹಾಕಲಾದ ಕೇಸ್ ಗಳನ್ನು ವಾಪಸ್ ಪಡೆಯುವುದಾಗಿ ಹೇಳಿದೆ. ವಿಧಾನಸೌಧಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಸುತ್ತೋಲೆಯಲ್ಲಿ ” ಮುಗ್ಧ ಅಲ್ಪಸಂಖ್ಯಾತರು” ಅನ್ನುವ ಪದ ಕಣ್ತಪ್ಪಿನಿಂದ ಸೇರಿದೆ
ಈ ವಿಚಾರ ನನ್ನ ಅಥವಾ ಗೃಹ ಇಲಾಖೆಯ ಕಾಯ೯ದಶಿ೯ ಗಮನಕ್ಕೆ ಬಂದಿಲ್ಲ. ಹಾಗಾಗಿ ಎಲ್ಲ ಮುಗ್ಧರು ಎಂದು ಮಾಪ೯ಡಿಸಿ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಕೋಮುಗಲಭೆಗಳಿಗೆ ಸಂಬಂಧಿಸಿದಂತೆ ಕೇವಲ ಅಲ್ಪಸಂಖ್ಯಾತರ ಮೇಲೆ ದಾಖಲಾದ ಪ್ರಕರಣಗಳನ್ನಷ್ಟೇ ವಾಪಸ್ ಪಡೆಯುತ್ತಿಲ್ಲ. ಎಲ್ಲ ಜಾತಿ , ಸಮುದಾಯಗಳ ಮುಗ್ಧರ ಮೇಲಿ ಕರಡುಗಳನ್ನು ವಾಪಸ್ ಪಡೆಯಲಾಗುವುದು. ಈ ಸಂಬಂಧ ಸ್ಪಷ್ಟ ಅಭಿಪ್ರಾಯ ಮತ್ತು ಸೂಕ್ತ ದಾಖಲೆಗಳನ್ನು ನೀಡುವಂತೆ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು
ಕೇವಲ ಕೋಮುಗಲಭೆಗಳಿಗೆ ಸಂಬಂಧಿಸಿದ ಕೇಸುಗಳನ್ನು ಮಾತ್ರ ವಾಪಸ್ ಪಡೆಯುತ್ತಿಲ್ಲ.ರೈತ ಚಳವಳಿ, ವಿದ್ಯಾಥಿ೯ ಚಳವಳಿ ಹಾಗೂ ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಇದೇ ವೇಳೆ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.