ಕಾಂಗ್ರೇಸನ್ನು ಕಂಗೆಡಿಸಿದ ಮೊಯ್ಲಿ ಟ್ವೀಟ್

0
1162

ಶುಕ್ರವಾರ ಐದು ಘಂಟೆಗೆ ಬ್ರೇಕಿಂಗ್ ನ್ಯೂಸ್ ನೀಡುತ್ತೇನೆಂದು ಬಿಜೆಪಿ ನಾಯಕ ಯಡಿಯೂರಪ್ಪರು ಸಿಡಿಸಿದ ಪಟಾಕಿ ಸಿಡಿಯಲೇ ಇಲ್ಲ. ಅವರು ಪಟಾಕಿಗೆ ಬೆಂಕಿ ಕೊಡುವ ತವಕ ನೋಡಿದಾಗ ಅದು ಕಾಂಗ್ರೇಸಿನ ಕಿವಿ ತಮಟೆಯನ್ನು ಘಾಸಿಗೊಳಿಸುತ್ತದೆಂದು ಎಲ್ಲರೂ ನಂಬಿದ್ದರು. ಅಂತೂ ಯಡಿಯೂರಪ್ಪರ ಪಟಾಕಿ ಠುಸ್ಸಾದರೂ ಕಾಂಗ್ರೇಸ್ ನಾಯಕ ವೀರಪ್ಪ ಮೊಯ್ಲಿ ಸಿಡಿಸಿದ ಬಾಂಬ್‍ಗೆ ಕಾಂಗ್ರೇಸ್ ಬೆಚ್ಚಿ ಬಿದ್ದಿದೆ. ಯಡಿಯೂರಪ್ಪ ಬೀಸುವ ದೊಣ್ಣೆಯಿಂದ ಪಾರಾದರು. ವೀರಪ್ಪ ಮೋಯ್ಲಿಯವರು ತನ್ನ ಪ್ರಭಾವ ಬಳಸಿ ತನ್ನ ಪುತ್ರ ಹರ್ಷ ಮೊಯ್ಲಿಗೆ ಕಾರ್ಕಳದಲ್ಲಿ ಟಿಕೇಟ್ ಕೊಡಿಸಲು ಶತಾಯ ಗತಾಯ ಪ್ರಯತ್ನಿಸಿ ವಿಫಲವಾಗುವ ಲಕ್ಷಣಗಳು ಕಂಡು ಬಂದಾಗ ಈ ರೀತಿಯ ಬೆದರಿಕೆಯ ತಂತ್ರ ಮಾಡಿದರೇ ಅರ್ಥವಾಗುತ್ತಿಲ್ಲ. ಅಂತೂ ಸಿದ್ದು ಸರಕಾರದ ವಿರುದ್ದ ಅಕ್ರಮಗಳ ದೂರು ಇಲ್ಲದೆ ಹೆಣಗಾಡುತ್ತಿರುವ ಪ್ರತಿಪಕ್ಷಗಳಿಗೆ ಇದು ಟಾನಿಕ್ ಆಗಿ ಪರಿಣಮಿಸಿದೆ. ಅದು ಈ ಹೇಳಿಕೆಯನ್ನು ಸದುಪಯೋಗಪಡಿಸುವ ಎಲ್ಲಾ ಮಾರ್ಗಗಳನ್ನು ಅನುಸರಿಸಲಿದೆ ಎಂಬುದು ಮಾದ್ಯಮಗಳನ್ನು ನೋಡಿದವರಿಗೆ ಅರ್ಥವಾಗದ ವಿಚಾರವೇನಲ್ಲ. ಕಾಂಗ್ರೇಸ್ ಟಿಕೇಟ್ ಹಂಚಿಕೆಯಲ್ಲಿ ರಸ್ತೆ ಕಂಟ್ರಾಕ್ಟರ್‍ಗಳ ಹಸ್ತಕ್ಷೇಪವಿದೆ ಎಂಬರ್ಥದ ಮಾತುಗಳಿಂದ ಸಾವರಿಸಿಕೊಳ್ಳಲು ಸಿದ್ದು ಯಾವ ಮಾರ್ಗ ಅನುಸರಿಸುತ್ತಾರೋ ಕಾದು ನೋಡೋಣ. ಯಾಕೆಂದರೆ ಸಿದ್ದು ಸರಕಾರವನ್ನು ಪ್ರದಾನಿಗಳು ಸೀದಾ ರೂಪಯ್ಯ ಎಂದು ಟೀಕಿಸಿದ್ದನ್ನು ಸಮರ್ಥಿಸುವ ರೀತಿಯಲ್ಲಿ ಮೋಯ್ಲಿ ಟ್ವೀಟ್ ಮಾಡಿದ್ದಾರೆ. ಆದರೆ ಮೊಯ್ಲಿಯವರು ನಾನು ಈ ಟ್ವೀಟ್ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಒಂದೆಡೆ ಮೂಲ ಕಾಂಗ್ರೇಸ್ ಮತ್ತು ಸಿದ್ದು ಕಾಂಗ್ರೇಸ್ ನಡುವಿನ ಜಟಾಪಟಿ ಎಂದೂ ಬಿಂಬಿಸಲಾಗುತ್ತಿದೆ. ಈ ಟ್ವೀಟ್ ಹಿಮದೆ ಬಿಜೆಪಿ ಕೈವಾಡವಿದೆ, ಸೈಬರ್ ಕ್ರೈಮ್‍ಗೆ ದೂರು ನೀಡುವ ಕುರಿತು ಚರ್ಚಿಸುತ್ತಿದ್ದೇವೆ ಎಂದು ಪರಮೇಶ್ವರ್ ಹೇಳುತ್ತಿದ್ದಾರೆ. ಈ ವರೇಗಿನ ಎಲ್ಲ ಮೆಟ್ಟಲುಗಳನ್ನು ದಿಟ್ಟತನದಿಂದ ಏರಿದ ಸಿದ್ದು ಈ ಕಲ್ಲನ್ನು ಹೇಗೆ ದಾಟುತ್ತಾರೋ ನೋಡೋಣ.

ಎಸ್ ಬಿ