ಮಧ್ಯಪ್ರದೇಶ: ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಚನಭಂಗ; ಪ್ರಸ್ತಾವಿತ ಮದ್ಯ ನಿಷೇಧಕ್ಕೆ ಎಳ್ಳುನೀರು

0
1238

ನರ್ಮದಾ ನದಿಯ ಐದು ಕಿ.ಮೀ ವ್ಯಾಪ್ತಿಯಲ್ಲಿರುವ 58 ಮದ್ಯದ ಅಂಗಡಿಗಳನ್ನು ಮುಚ್ಚುವುದು ರಾಜ್ಯ ಮದ್ಯ ನಿಷೇಧದ ಮೊದಲ ಹಂತ ಎಂಬ ಮುಖ್ಯಮಂತ್ರಿಯ ಪ್ರಕಟಣೆಯಿಂದ ಮಧ್ಯಪ್ರದೇಶ ಸರಕಾರ ಹಿಂದೆ ಸರಿದಿದೆ.
ಬಿಹಾರದಲ್ಲಿ 2016 ರಲ್ಲಿ ಮದ್ಯ ನಿಷೇಧವನ್ನು ಹೇರಿದ ನಂತರ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯದಲ್ಲಿ ನಿಷೇಧವನ್ನು ಜಾರಿಗೆ ತರುವುದಾಗಿ ಹೇಳಿದರು. ಚೌಹಾನ್ ತರುವಾಯ ನರ್ಮದಾ ನದಿಯ ದಡದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ 58 ಮದ್ಯದ ಅಂಗಡಿಗಳನ್ನು ತಮ್ಮ’ ನರ್ಮದಾ ಸೇವಾ ಯಾತ್ರಾ’ ಸಮಯದಲ್ಲಿ ಮುಚ್ಚಿದರು ಮತ್ತು 2018 ರ ಅಂತ್ಯದ ವೇಳೆಗೆ ನಿಯೋಜಿಸಲಾದ ವಿಧಾನಸಭಾ ಚುನಾವಣೆಗಳ ಮೊದಲು ರಾಜ್ಯದಲ್ಲಿ ಮದ್ಯ ಮಾರಾಟದ ಮೇಲೆ ಸಂಪೂರ್ಣ ನಿಷೇಧದ ಭರವಸೆ ನೀಡಿದರು, ಆ ಸಮಯದಲ್ಲಿ, ಚೌಹಾನ್ ಅವರು ಮದ್ಯದ ಅಂಗಡಿಗಳನ್ನು ಮುಚ್ಚುವಾಗ ನರ್ಮದಾ ರಾಜ್ಯದ ಮದ್ಯ ನಿಷೇಧದ ಮೊದಲ ಹಂತವಾಗಿದೆ ಎಂದಿದ್ದರು.
ಮಾನ್ಸೂನ್ ಅಧಿವೇಶನದಲ್ಲಿ ಮಧ್ಯಪ್ರದೇಶದ ಹಣಕಾಸು ಸಚಿವ ಜಯಂತ್ ಮಲೈಯ ಅವರು ಮದ್ಯದ ಮಾರಾಟವನ್ನು ನಿಷೇಧಿಸುವ ನಿರ್ಧಾರದಿಂದ ಸರಕಾರದ ಬೊಕ್ಕಸಕ್ಕೆ ಹಾನಿಯುಂಟಾಗಲಿದೆ ಮತ್ತು ಬುಡಕಟ್ಟು ಜನರ ಭಾವನೆಗಳಿಗೂ ನೋವಾಗಲಿದೆ ಎಂದರು. ಮಧ್ಯಪ್ರದೇಶದಲ್ಲಿ ದೇಶದ ಅತಿ ದೊಡ್ಡ ಬುಡಕಟ್ಟು ಜನಸಂಖ್ಯೆ (14.7%) ಇದೆ . 2011 ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 46 ವಿವಿಧ ಬುಡಕಟ್ಟು ಸಮುದಾಯಗಳಿವೆ.