ಮತಾಂತರಕ್ಕೆ ಪ್ರಯತ್ನಿಸಿದರೆ 10 ವರ್ಷ ಜೈಲು ಶಿಕ್ಷೆ: ಮುಖ್ಯಮಂತ್ರಿ ಯೋಗಿ

0
169

ಸನ್ಮಾರ್ಗ ವಾರ್ತೆ

‘ಉತ್ತರ ಪ್ರದೇಶದಲ್ಲಿ ಯಾರಾದರೂ ನಿಯಮಬಾಹಿರವಾಗಿ ಮತಾಂತರಕ್ಕೆ ಪ್ರಯತ್ನಿಸಿದರೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಖಚಿತ’ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದೇ ವೇಳೆ ಯಾರಾದರೂ ಹಿಂದೂ ಧರ್ಮಕ್ಕೆ ಮರಳುವುದಾದರೆ ಅವರಿಗೆ ಈ ಮತಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೇಳಿ ಚರ್ಚೆಗೆ ಗ್ರಾಸ ಒದಗಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಇವತ್ತು ಯಾರಿಗೂ ಮತಾಂತರ ಮಾಡಲು ಸಾಧ್ಯವಿಲ್ಲ. ಹಾಗೆ ಯಾರಾದರೂ ಪ್ರಯತ್ನಿಸಿದರೆ ಅಂತವರು 10 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಂತ ಯಾರಾದರೂ ಘರ್ ವಾಪ್ಸಿ ಆಗಬೇಕು ಎಂದು ಬಯಸಿದರೆ ಅಂತವರಿಗೆ ಈ ನಿಯಮ ಬಾಧಕವಲ್ಲ. ಆತನಿಗೋ ಅಥವಾ ಆಕೆಗೋ ಮತ್ತೆ ಹಿಂದುವಾಗಬಹುದು ಎಂದು ಹೇಳಿದ ಅವರು, ಮುಂಬೈಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಅವರು ಮಾತಾಡುತ್ತಿದ್ದರು. ನಮ್ಮ ನಡುವೆ ಧರ್ಮ ಪರಿವರ್ತನೆ ಮಾಡುವ ಕೆಲವು ವಂಚಕರಿದ್ದಾರೆ. ಅವರನ್ನು ತಡೆಯಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ಜಾತಿ ತಾರತಮ್ಯವನ್ನು ಇಲ್ಲದಂತೆ ಮಾಡಬೇಕು ಎಂದು ಅವರು ಹೇಳಿದ್ದಾರೆ.